ಉದ್ದೀಪನಾ ಔಷಧ ತೆಗೆದುಕೊಂಡು ಸಿಕ್ಕಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ, ಮಂಗಳವಾರ, 9 ಜನವರಿ 2018 (17:32 IST)

Widgets Magazine

ಮುಂಬೈ: ಬರೋಡ ಕ್ರಿಕೆಟಿಗ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಪೋಟಕ ಫಿನಿಶರ್ ಎಂದೇ ಖ್ಯಾತಿ ಗಳಿಸಿದ್ದ ಯೂಸಫ್ ಪಠಾಣ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ಕ್ರಿಕೆಟ್ ನಿಂದ ಜನವರಿ ಅಂತ್ಯದವರೆಗೆ ಅಮಾನತುಗೊಂಡಿದ್ದಾರೆ.
 

ವಾಡಾ ನಿಷೇಧಿತ ಔಷಧಗಳ ಪಟ್ಟಿಯಲ್ಲಿರುವ ಔಷಧವೊಂದನ್ನು ಸೇವಿಸಿದ ತಪ್ಪಿಗೆ ಯೂಸಫ್ ಪಠಾಣ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ಅವರು ಉಸಿರಾಟದ ಸೋಂಕು ರೋಗವೊಂದಕ್ಕೆ ಈ ಔಷಧ ಸೇವಿಸಿದ್ದರು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
 
ತನ್ನ ತಪ್ಪನ್ನು ಒಪ್ಪಿಕೊಂಡಿರುವ ಯೂಸಫ್ ಪಠಾಣ್, ಕಣ್ತಪ್ಪಿನಿಂದಾಗಿ ಈ ಔಷಧ ತನಗೆ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು ಐದು ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಪಠಾಣ್ ಕಳೆದ ಆಗಸ್ಟ್ ನಿಂದ ಅಮಾನತಿನಲ್ಲಿದ್ದಾರೆ. ಇದು ಜನವರಿ 14 ರಂದು ಮುಕ್ತಾಯಗೊಳ್ಳಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಉದ್ದೀಪನಾ ಔಷಧ ಯೂಸಫ್ ಪಠಾಣ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Yusuf Pathan Doping Test Team India Cricket News Sports News

Widgets Magazine

ಕ್ರಿಕೆಟ್‌

news

ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಊಹಿಸಲೂ ಆಗದ ಶಾಕ್!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲೇ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ನಾಯಕ ...

news

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇನ್ನೂ ಮದುವೆಯೇ ಆಗಿಲ್ಲ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಇಟೆಲಿಯಲ್ಲಿ ...

news

ಮೊದಲ ಟೆಸ್ಟ್ ಕ್ರಿಕಟನಲ್ಲಿ ಭಾರತಕ್ಕೆ ಸೋಲು

ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 72 ರನ್ ಗಳಿಂದ ಜಯಗಳಿಸಿದ್ದು ಮೂರು ಪಂದ್ಯಗಳ ...

news

ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಸರಿಪಡಿಸಿಕೊಂಡ ಟೀಂ ಇಂಡಿಯಾ

ಕೇಪ್ ಟೌನ್: ದ.ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ರೋಚಕ ಹಂತ ತಲುಪಿದೆ. ಮೊದಲ ಇನಿಂಗ್ಸ್ ನಲ್ಲಿ ...

Widgets Magazine