ವರ್ಣಬೇಧದ ವಿರುದ್ಧ ತಿರುಗಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ, ಗುರುವಾರ, 10 ಆಗಸ್ಟ್ 2017 (11:29 IST)

ಮುಂಬೈ: ಟೀಂ  ಇಂಡಿಯಾ ಕ್ರಿಕೆಟಿಗ ಅಭಿನವ್ ಮುಕುಂದ್ ತಮ್ಮ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬರುವ ವರ್ಣಬೇಧದ ಸಂದೇಶಗಳ ವಿರುದ್ಧ ತಿರುಗಿಬಿದ್ದಿದ್ದಾರೆ.


 
ವರ್ಣಬೇಧದ ಆಧಾರದಲ್ಲಿ ತಾರತಮ್ಯ ಮಾಡುವವರ ವಿರುದ್ಧ ಭಾವನಾತ್ಮಕವಾಗಿ ಸಂದೇಶ ಬರೆದಿದ್ದಾರೆ. ಇದಕ್ಕೆ ಹಲವು ಮೆಚ್ಚುಗೆ ಬಂದಿದೆ. ಮೊದಲ ಟೆಸ್ಟ್ ನಲ್ಲಿ ಆಡಿದ್ದ ಅಭಿನವ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಇವರ ಮೈ ಬಣ್ಣದ ಕುರಿತಾಗಿ ಕೆಲವರು ಲೇವಡಿ ಮಾಡಿದ್ದಕ್ಕೆ ಮುಕುಂದ್ ಭಾವನಾತ್ಮಕವಾಗಿ ಸಂದೇಶ ಬರೆದಿದ್ದಾರೆ.
 
“ನಾನು ಜಗತ್ತಿನ ಹಾಟೆಸ್ಟ್ ನಗರಗಳಲ್ಲಿ ಒಂದಾದ ಚೆನ್ನೈನಿಂದ ಬಂದಿದ್ದೇನೆ. ಸಣ್ಣ ವಯಸ್ಸಿನಿಂದಲೇ ಈ ಬಿಸಿಲಿನಲ್ಲಿ ಬೆವರು ಸುರಿಸಿ ಹಗಲಿರುಳೆನ್ನದೆ ತರಬೇತಿ ಪಡೆದಿದ್ದೇನೆ. ಕೆಲವೊಮ್ಮೆ ನನ್ನ ಮೈ ಬಣ್ಣ ಕಪ್ಪಗಾಗಿದೆಯಲ್ಲಾ ಎಂದು ತಲೆಕೆಡಿಸಿಕೊಂಡಿದ್ದಿದೆ. ಆದರೆ ನಾನು ಇದುವರೆಗೆ ಬಂದ ಹಾದಿಯನ್ನು ಗಮನಿಸಿದಾಗ ನಾನು ಅಷ್ಟು ಕಷ್ಟಪಟ್ಟಿದ್ದಕ್ಕೇ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಮನಗಾಣುತ್ತೇನೆ.
 
ಹಾಗಾಗಿ ದಯವಿಟ್ಟು ಬಣ್ಣದ ಆಧಾರದಲ್ಲಿ ಅಳೆಯಬೇಡಿ. ಈ ಸಂದೇಶವನ್ನು ನಾನು ಅನುಕಂಪ ಗಿಟ್ಟಿಸಿಕೊಳ್ಳಲು ಬರೆಯುತ್ತಿಲ್ಲ’ ಎಂದು ಮುಕುಂದ್ ಸಂದೇಶದಲ್ಲಿ ಹೇಳಿದ್ದಾರೆ. ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
 
ಇದನ್ನೂ ಓದಿ… ಸೋನಿಯಾ ಗಾಂಧಿಗೆ ಸಚಿವೆ ಸ್ಮೃತಿ ಇರಾನಿ ಲೇವಡಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಭಿನವ್ ಮುಕುಂದ್ ವರ್ಣಬೇಧ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು. Abhinav Mukund Colour Bias Team India Cricket News Sports News

ಕ್ರಿಕೆಟ್‌

news

ರವೀಂದ್ರ ಜಡೇಜಾ ಸ್ಥಾನಕ್ಕೆ ಟೀಂ ಇಂಡಿಯಾಗೆ ಬಂದ ಹೊಸಬ

ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಒಂದು ಟೆಸ್ಟ್ ಪಂದ್ಯಕ್ಕೆ ನಿಷೇಧ ...

news

ಸಹ ಆಟಗಾರರನ್ನು ತಮಾಷೆ ಮಾಡಿದ ರೋಹಿತ್ ಶರ್ಮಾ

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ಟೀಂ ಇಂಡಿಯಾದ ಕೆಲವು ...

news

ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಬಿಸಿಸಿಐ ...

news

ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್

ನವದೆಹಲಿ: ದೇಶದ ಯಾವುದೇ ವಿಚಾರಗಳ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾಜಿ ...

Widgets Magazine