ಲಂಡನ್: ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗಾಯಗೊಂಡು ಪೆವಿಲಿಯನ್ ಸೇರಿದ್ದ ವೇಗಿ ಭುವನೇಶ್ವರ್ ಕುಮಾರ್ ಇನ್ನು ಎರಡು ಅಥವಾ ಮೂರು ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ.ಬುಮ್ರಾ ಜತೆಗೆ ಭುವನೇಶ್ವರ್ ಕುಮಾರ್ ವೇಗದ ಪಡೆಯ ನೇತೃತ್ವ ವಹಿಸಿದ್ದರು. ಈ ವೇಗಿ ಜೋಡಿ ಎದುರಾಳಿಗಳನ್ನು ಆರಂಭ ಮತ್ತು ಅಂತಿಮ ಹಂತದಲ್ಲಿಅತ್ಯುತ್ತಮವಾಗಿ ಕಟ್ಟಿಹಾಕುತ್ತಿತ್ತು. ಆದರೆ ಭುವಿ ಗಾಯಗೊಂಡಿರುವುದರಿಂದ ಟೀಂ ಇಂಡಿಯಾದಲ್ಲಿ ಆ ಸ್ಥಾನದಲ್ಲಿ ಆಡಲು ಒಬ್ಬ ಅತ್ಯುತ್ತಮ ವೇಗಿಯ ಅಗತ್ಯವಿದೆ.ಈಗಾಗಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆ