ದುಬೈ: ಎಷ್ಟೋ ದಿನಗಳ ನಂತರ ಕ್ರಿಕೆಟ್ ಪ್ರವಾಸಕ್ಕೆಂದು ಹೊರದೇಶಕ್ಕೆ ಬಂದ ಕ್ರಿಕೆಟಿಗರು ಸಹಜವಾಗಿ ಅಲ್ಲಿ ಎಂಜಾಯ್ ಮಾಡಲು ಮನಸ್ಸು ಮಾಡಬಹುದು. ಆದರೆ ಹಾಗೆ ಮಾಡಿ ಕೊರೋನಾ ಅಪಾಯ ಮೈಮೇಲೆಳೆದುಕೊಳ್ಳಬೇಡಿ ಎಂದು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.