ಎಷ್ಟೋ ದಿನದಿಂದ ಕಾಯುತ್ತಿದ್ದ ಶತಕ ಕೊನೆಗೂ ವಿರಾಟ್ ಕೊಹ್ಲಿಯ ಕೈಗೆಟುಕಿತು

ಪೋರ್ಟ್ ಆಫ್ ಸ್ಪೇನ್, ಸೋಮವಾರ, 12 ಆಗಸ್ಟ್ 2019 (09:43 IST)

ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಶತಕ ಗಳಿಸಿದ್ದು ಕಡಿಮೆ. ರನ್ ಮೆಷಿನ್ ಯಾಕೋ ಅರ್ಥಶತಕ ಗಳಿಸಿ ಔಟಾಗುತ್ತಿದ್ದುದು ಅವರಿಗೇ ಹತಾಶೆಯನ್ನುಂಟು ಮಾಡಿತ್ತು. ಹೇಗಾದರೂ ಸರಿ, ಶತಕ ಗಳಿಸಿಯೇ ತೀರಬೇಕು ಎಂದು ಕಾಯುತ್ತಿದ್ದ ಕೊಹ್ಲಿಗೆ ಕೊನೆಗೂ ಅದು ನಿನ್ನೆ ಸಾಧ‍್ಯವಾಯಿತು.


 
ಹೀಗಾಗಿ ಸಹಜವಾಗಿಯೇ ಕೊಹ್ಲಿ ನಿರಾಳರಾಗಿದ್ದಾರೆ. ಹಲವು ದಿನಗಳಿಂದ ಶತಕ ಗಳಿಸಲು ಕಾಯುತ್ತಿದ್ದೆ. ಕೊನೆಗೂ ಅದು ಈಡೇರಿತು ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.
 
‘ರೋಹಿತ್, ಧವನ್ ಬೇಗನೇ ಔಟ್ ಆದರು. ಹೀಗಾಗಿ ರನ್ ಗಳಿಸುವ ಅವಕಾಶ ನನ್ನದಾಯಿತು. ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ಈಗ ಏಕದಿನ ಪಂದ್ಯಗಳಲ್ಲಿ 42 ಶತಕ ಗಳಿಸಿದ್ದು, ಇನ್ನು 8 ಶತಕ ಗಳಿಸಿದರೆ ಸಚಿನ್ ತೆಂಡುಲ್ಕರ್ ಅವರ ಏಕದಿನದಲ್ಲಿ ಅತೀ ಹೆಚ್ಚು ಶತಕ ಗಳಿಸಿದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ತಂಡದಿಂದ ತಮ್ಮ ಕಡೆಗಣಿಸಿದ್ದರ ಬಗ್ಗೆ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಹೇಳಿದ್ದು ಹೀಗೆ!

ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ಅಜಿಂಕ್ಯಾ ರೆಹಾನೆ, ಇತ್ತೀಚೆಗಷ್ಟೇ ಮುಕ್ತಾಯವಾದ ...

news

ವಿರಾಟ್ ಕೊಹ್ಲಿ ವಿಶ್ವದಾಖಲೆಯ ಜತೆಗೆ ಟೀಂ ಇಂಡಿಯಾಗೆ ಗೆಲುವಿನ ನಗೆ

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಭಾರತ ಡಕ್ ...

news

ವಿಶ್ವ ದಾಖಲೆ ಮಾಡಲು 19 ರನ್ ದೂರದಲ್ಲಿ ವಿರಾಟ್ ಕೊಹ್ಲಿ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ...

news

ಆಗಸ್ಟ್ 15 ರಂದು ಟೀಂ ಇಂಡಿಯಾ ಕೋಚ್ ಆಯ್ಕೆ

ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಕಪಿಲ್ ದೇವ್ ನೇತೃತ್ವದ ಸಮಿತಿ ಆಗಸ್ಟ್ 15 ರಂದು ...