Widgets Magazine

ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

ದಿ ಓವಲ್| Krishnaveni K| Last Modified ಬುಧವಾರ, 12 ಸೆಪ್ಟಂಬರ್ 2018 (11:56 IST)
ದಿ ಓವಲ್: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 1-4 ಅಂತರದಿಂದ ಸೋತ ಬಳಿಕ ಮಾಧ್ಯಮಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ಪ್ರಸಂಗ ನಡೆದಿದೆ.


ಪತ್ರಕರ್ತರೊಬ್ಬರು ಕೋಚ್ ರವಿಶಾಸ್ತ್ರಿ ಹೇಳಿದಂತೆ ನಿಮ್ಮದು ಭಾರತ ಇದುವರೆಗೆ ಕಂಡ ಶ್ರೇಷ್ಠ ತಂಡ ಎಂದು ನಂಬುತ್ತೀರಾ ಎಂದು ಪ್ರಶ್ನಿಸಿದರು. ಇದು ಕೊಹ್ಲಿಯನ್ನು ಕೆರಳಿಸಿದೆ.


‘ನಮ್ಮದು ಬೆಸ್ಟ್ ತಂಡ ಎಂದು ನಾವು ನಂಬುತ್ತೇವೆ. ಯಾಕೆ ಆಗಬಾರದು?’ ಎಂದು ಕೊಹ್ಲಿ ಆದಷ್ಟು ಸಂಯಮದಿಂದಲೇ ಹೇಳಿದರು. ಮತ್ತೆ ಆ ಪತ್ರಕರ್ತ ‘ನಿಜವಾಗಿಯೂ 15 ವರ್ಷಗಳಲ್ಲಿ ಅತ್ಯುತ್ತಮ ತಂಡವೇ?’ ಎಂದು ಕೇಳಿದಾಗ ಕೊಹ್ಲಿ ತಾಳ್ಮೆಗೆಟ್ಟರು.


‘ನಿಮಗೆ ಏನು ಅನಿಸುತ್ತದೆ?’ ಎಂದು ಪತ್ರಕರ್ತನನ್ನೇ ಪ್ರಶ್ನಿಸಿದರು. ಅದಕ್ಕೆ ಆತ ‘ನನಗೆ ನಂಬಿಕೆಯಿಲ್ಲ’ ಎಂದರು. ಇದಕ್ಕೆ ಕೋಪದಿಂದಲೇ ಕೊಹ್ಲಿ ‘ಅದು ನಿಮ್ಮ ನಂಬಿಕೆ. ನಾನೇನು ಮಾಡಲಾಗದು’ ಎಂದು ಮಾತಿಗೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :