ಧೋನಿ, ಯುವರಾಜ್ ಗೆ ನಿರ್ಗಮನದ ಬಾಗಿಲು ತೋರಿಸ್ತಾರಾ ರವಿಶಾಸ್ತ್ರಿ?!

Mumbai, ಗುರುವಾರ, 13 ಜುಲೈ 2017 (10:35 IST)

Widgets Magazine

ಮುಂಬೈ: ಟೀಂ ಇಂಡಿಯಾದ ಹೊಸ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಮುಂದಿನ ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲಿದ್ದಾರೆ. ಹೀಗಾಗಿ ಹಿರಿಯ ಆಟಗಾರರ ಬಗೆಗೆ ಅವರ ನಿಲುವು ಏನಿರಬಹುದೆಂದು ಚರ್ಚೆಗಳು ಪ್ರಾರಂಭವಾಗಿದೆ.


 
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ರವಿಶಾಸ್ತ್ರಿ ಈ ಬಗ್ಗೆ ನಾನು ಈಗಾಗಲೇ ಏನೂ ಆಲೋಚನೆ ಮಾಡಿಲ್ಲ. ನಾನು ಈಗಷ್ಟೇ ಕೋಚ್ ಹುದ್ದೆಗೆ ಆಯ್ಕೆಗೊಂಡಿದ್ದೇನೆ. ಮುಂದಿನ ಯೋಜನೆ ಹಾಕಿಕೊಳ್ಳುವ ಮೊದಲು ನಾಯಕ ವಿರಾಟ್ ಕೊಹ್ಲಿಯೊಂದಿಗೆ ಚರ್ಚಿಸಬೇಕಿದೆ ಎಂದಿದ್ದಾರೆ.
 
ಕಳೆದ 12 ತಿಂಗಳಲ್ಲಿ ತಂಡದಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಮುಂದಿನ ನನ್ನ  ಅವಧಿಯನ್ನು ಹೊಸದಾಗಿ ಆರಂಭಿಸುತ್ತೇನೆ ಎಂದಿರುವ ರವಿಶಾಸ್ತ್ರಿ ಹೊಸ ತಂಡದಲ್ಲಿ ಹಿರಿಯ ಧೋನಿ ಮತ್ತು ಯುವರಾಜ್ ಗೆ ಯಾವ ಸ್ಥಾನ ನೀಡಲಿದ್ದಾರೆ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ. ಈ ಮೊದಲು ರಾಹುಲ್ ದ್ರಾವಿಡ್ ಧೋನಿ ಮತ್ತು ಯುವರಾಜ್ 2019 ರ ವಿಶ್ವಕಪ್ ವೇಳೆಗೆ ತಮ್ಮ ಭವಿಷ್ಯವೇನೆಂದು ನಿರ್ಧರಿಸಬೇಕೆಂದು ಸೂಚನೆ ನೀಡಿದ್ದರು. ಅವರೀಗ ಕೆಲವು ನಿರ್ದಿಷ್ಟ ಸರಣಿಗೆ ಬ್ಯಾಟಿಂಗ್ ಕೋಚ್ ಆಯ್ಕೆಯಾಗಿರುವುದರಿಂದ ಈ ಇಬ್ಬರು ಹಿರಿಯ ಆಟಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
 
ಇದನ್ನೂ ಓದಿ.. ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಬಿಸಿಸಿಐ ತಲೆಕೆಡಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?

ಮುಂಬೈ: ನಾಯಕನಿಗೂ ಮೆಚ್ಚುಗೆಯಾಗುವಂತಹ ಟೀಂ ಇಂಡಿಯಾ ನೂತನ ಕೋಚ್ ಯಾರಾಗಬಹುದು ಬಿಸಿಸಿಐ ಮತ್ತು ಅದರ ...

news

ಕೋಚ್ ಆಗುತ್ತಲೇ ಉಲ್ಟಾ ಹೊಡೆದ ರವಿ ಶಾಸ್ತ್ರಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ತಮ್ಮ ವರಸೆ ...

news

ಐಸಿಸಿ ಮಹಿಳಾ ವಿಶ್ವಕಪ್: ಮಿಥಾಲಿ ರಾಜ್ ವಿಶ್ವ ದಾಖಲೆ

ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 6000 ...

news

ಹಣವಿಲ್ಲದೇ ಬರ್ಲಿನ್ ನಲ್ಲಿ ಭಿಕ್ಷೆ ಬೇಡುತ್ತಿರುವ ಭಾರತೀಯ ಕ್ರೀಡಾಪಟು!

ನವದೆಹಲಿ: ಇದು ಭಾರತೀಯ ಕ್ರೀಡಾಳುವೊಬ್ಬರ ದುಃಸ್ಥಿತಿ. ಸರ್ಕಾರದಿಂದ ಪಡೆಯಬೇಕಾದ ಹಣ ಬಾರದೇ ಪ್ಯಾರಾ ...

Widgets Magazine