ನವದೆಹಲಿ: ಭಾರತ ತಂಡದ ಸೆನ್ಸೇಷನಲ್ ಕ್ರಿಕೆಟರ್ ಗಳ ಪೈಕಿ ಇದೀಗ ಮಹಿಳಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಹೆಸರೂ ಸೇರಿಕೊಂಡಿದೆ. ಅಂತಿಪ್ಪಾ ಆಂಗ್ರಿ ಯಂಗ್ ಕ್ರಿಕೆಟರ್ ಹರ್ಮನ್ ಮನಸ್ಸು ಕದ್ದವರೂ ಇದ್ದಾರಂತೆ! ಹಾಗಂತ ಅವರೇ ಹೇಳಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಂಡಿರುವ ಹರ್ಮನ್ ಮೊದಲ ಬಾರಿಗೆ ತಾವು ಇಷ್ಟಪಟ್ಟ ಹುಡುಗನೆಂದರೆ ಬಾಲಿವುಡ್ ನಟ ರಣಬೀರ್ ಕಪೂರ್ ಎಂದಿದ್ದಾರೆ. ಅವರೆಂದರೆ ಹರ್ಮನ್ ಗೆ ಅದೊಂಥರಾ ಇಷ್ಟವಂತೆ. ಮೈದಾನದಲ್ಲಿ ಗುರುಗುಟ್ಟುತ್ತಾ ಇರುವ ಹರ್ಮನ್