ನಿವೃತ್ತಿಯಾಗಿದ್ದರೂ ಧೋನಿ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದ ಪಿಚ್ ಪರೀಕ್ಷಿಸಿದ್ದು ಯಾಕೆ?

ಕೋಲ್ಕೊತ್ತಾ, ಶನಿವಾರ, 11 ನವೆಂಬರ್ 2017 (08:11 IST)

ಕೋಲ್ಕೊತ್ತಾ: ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ಅದೆಷ್ಟೋ ಕಾಲವಾಗಿದೆ. ಹಾಗಿದ್ದರೂ ಭಾರತ ಮತ್ತು ಶ್ರೀಲಂಕಾ ನಡುವೆ ನ.16 ರಿಂದ ಟೆಸ್ಟ್ ಪಂದ್ಯ ನಡೆಯುವ ಈಡನ್ ಗಾರ್ಡನ್ ಮೈದಾನದ ಪಿಚ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.


 
ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಇಲ್ಲಿ ಮೊದಲ ಟೆಸ್ಟ್ ಪಂದ್ಯವಾಡಲಿದೆ. ಈ ತಂಡದಲ್ಲಿ ಧೋನಿ ಖಂಡಿತಾ ಇಲ್ಲ. ಹಾಗಿದ್ದರೂ ಅವರು ಪಂದ್ಯ ನಡೆಯುವ ಪಿಚ್ ಪರಿಶೀಲಿಸಿದ್ದಲ್ಲದೆ, ಕ್ಯುರೇಟರ್ ಸುಜನ್ ಮುಖರ್ಜಿ ಜತೆ ಚರ್ಚಿಸಿದ್ದಾರೆ.
 
ಅಸಲಿಗೆ ಧೋನಿ ಇಲ್ಲಿಗೆ ಬಂದಿದ್ದು ಕಪಿಲ್ ದೇವ್ ಜತೆಗೆ ಜಾಹೀರಾತೊಂದರ ಶೂಟಿಂಗ್ ಗಾಗಿ. ಈ ಸಂದರ್ಭದಲ್ಲಿ ಪಿಚ್ ತಯಾರಿ ಬಗ್ಗೆ ಕುತೂಹಲದಿಂದ ಕ್ಯುರೇಟರ್ ಜತೆ ಚರ್ಚಿಸಿದ ಧೋನಿ, ಪಿಚ್ ಪರಿಶೀಲನೆ ನಡೆಸಿದರು. ಎರಡು ವಿಶ್ವಕಪ್ ವಿಜೇತ ನಾಯಕರು ಇಲ್ಲಿ ಜಾಹೀರಾತು ಶೂಟಿಂಗ್ ನಡೆಸುವ ನೆಪದಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದರು. ನಂತರ ಇವರಿಗೆ ಇನ್ನೊಬ್ಬ ಮಾಜಿ ನಾಯಕ ಹಾಗೂ ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಸೌರವ್ ಗಂಗೂಲಿ ಜತೆಯಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಾರ್ದಿಕ್ ಪಾಂಡ್ಯಗೆ ರೆಸ್ಟ್ ಮಾಡಪ್ಪಾ ಎಂದಿತು ಬಿಸಿಸಿಐ!

ಮುಂಬೈ: ಸತತ ಕ್ರಿಕೆಟ್ ನಿಂದ ಬಳಲಿದ ಕಾರಣ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ಬಿಸಿಸಿಐ ...

news

ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್ ಅಗರ್ವಾಲ್ ಗೆ ದ್ವಿಶತಕ ಜಸ್ಟ್ ಮಿಸ್

ಬೆಂಗಳೂರು: ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 649 ರನ್ ಗಳ ಬೃಹತ್ ಮೊತ್ತ ...

news

ಕೆಲವರಿಗೆ ಧೋನಿಯನ್ನು ಕಂಡರೆ ಆಗದಂತೆ!

ನವದೆಹಲಿ: ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಧೋನಿ ನಿವೃತ್ತಿಗೆ ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿರುವ ...

news

ವಿಡಿಯೋ: ಧೋನಿ ಡ್ಯಾನ್ಸ್ ಗೆ ಬಿದ್ದೂ ಬಿದ್ದು ನಕ್ಕ ಪತ್ನಿ ಸಾಕ್ಷಿ ಸಿಂಗ್!

ರಾಂಚಿ: ಬಿಡುವಿನ ವೇಳೆಯಲ್ಲಿ ಕುಟುಂಬದವರ ಜತೆ ಧೋನಿ ಮಜವಾಗಿ ಕಾಲ ಕಳೆಯುತ್ತಾರೆ. ಇದೀಗ ನ್ಯೂಜಿಲೆಂಡ್ ...

Widgets Magazine
Widgets Magazine