ಪಂದ್ಯ ಸೋತರೂ ವಿಶ್ವದಾಖಲೆ ಮಾಡಿದ ಯುವರಾಜ್ ಸಿಂಗ್

London, ಸೋಮವಾರ, 19 ಜೂನ್ 2017 (08:25 IST)

Widgets Magazine

ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತರೂ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.


 
ಅತೀ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಆಡಿದ ದಾಖಲೆ ಇದೀಗ ಯುವಿ ಪಾಲಾಗಿದೆ. ನಿನ್ನೆ ಮುಕ್ತಾಯಗೊಂಡ ಐಸಿಸಿ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಯುವಿ ಒಟ್ಟು ಏಳು ಐಸಿಸಿ ಫೈನಲ್ ಪಂದ್ಯಗಳನ್ನಾಡಿದ ಏಕೈಕ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದರು.
 
ಆದರೂ ಈ ಪಂದ್ಯದಲ್ಲಿ ಯುವಿಗೆ ಹೆಚ್ಚಿನದೇನೂ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಬಿಡಿ. ವಿಶೇಷವೆಂದರೆ 17 ವರ್ಷಗಳ ಮೊದಲು ಯುವಿ ಐಸಿಸಿ ಟೂರ್ನಿಗೆ ಪದಾರ್ಪಣೆ ಮಾಡಿದ್ದಾಗ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ್ದರು. ಆಗಲೂ ಸೋಲಿನೊಂದಿಗೇ ಅವರ ಅಭಿಯಾನ ಆರಂಭವಾಗಿತ್ತು.
 
ಇವುಗಳ ಪೈಕಿ ಎರಡು ಏಕದಿನ ವಿಶ್ವಕಪ್ ಮತ್ತು ಎರಡು ಟಿ-20 ವಿಶ್ವಕಪ್ ಆಡಿದ ಗರಿಮೆ ಅವರದ್ದು. ಶ್ರಿಲಂಕಾದ ಸಂಗಕ್ಕಾರ, ಜಯವರ್ಧನೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಈ ಸಾಧನೆ ಮಾಡಿದ ಇತರರು.
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಯುವರಾಜ್ ಸಿಂಗ್ ಚಾಂಪಿಯನ್ಸ್ ಟ್ರೋಫಿ ಐಸಿಸಿ ಟೂರ್ನಿ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Yuvraj Singh Champions Trophy Icc Tourney Cricket News Sports News

Widgets Magazine

ಕ್ರಿಕೆಟ್‌

news

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳು

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಮಂದಿ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಗೆಲ್ಲುವ ...

news

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ...

news

ಭಾರತಕ್ಕೆ ಗೆಲ್ಲಲು 339 ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ಪಾಕ್

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ...

news

ಅಂದು ಗಂಗೂಲಿ ಮಾಡಿದ ತಪ್ಪನ್ನೇ ಇಂದು ಕೊಹ್ಲಿ ಮಾಡಿದರೇ?

ಲಂಡನ್: ಅದು 2003 ರ ವಿಶ್ವಕಪ್ ಫೈನಲ್ ಪಂದ್ಯ. ಅಂದು ಗಂಗೂಲಿ ಮಾಡಿದ ಕೆಲವು ತಪ್ಪು ನಿರ್ಧಾರಗಳು ಭಾರತಕ್ಕೆ ...

Widgets Magazine