ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ

Mumbai, ಸೋಮವಾರ, 17 ಜುಲೈ 2017 (09:12 IST)

Widgets Magazine

ಮುಂಬೈ: ಬಿಸಿಸಿಐನಲ್ಲಿ ಇತ್ತೀಚೆಗೆ ಕ್ರಿಕೆಟ್ ನ ನೈಜ ಸಾಧಕರಿಗೆ ಅವಮಾನವಾಗುತ್ತಿದೆ ಎಂದು ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ ರಾಮಚಂದ್ರ ಗುಹಾ ಆರೋಪಿಸಿದ್ದಾರೆ.


 
ಇತ್ತೀಚೆಗೆ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಯನ್ನು ಕಿತ್ತೊಗೆಯುವುದನ್ನು ವಿರೋಧಿಸಿದ್ದ ಗುಹಾ ಇದೀಗ ಜಹೀರ್ ಖಾನ್ ಮತ್ತು ದ್ರಾವಿಡ್ ರನ್ನು ಕೋಚ್ ಗಳಾಗಿ ಆಯ್ಕೆ ಮಾಡಿ ನಂತರ ಸಲಹೆಗಾರರು ಎಂದು ಅವಾಮಾನ ಮಾಡುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.
 
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಇದೀಗ ದ್ರಾವಿಡ್ ಹಾಗೂ ಜಹೀರ್ ರನ್ನೂ ಅವಮಾನ ಮಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. ಒಮ್ಮೆ ಕೋಚ್ ಎಂದು ಆಯ್ಕೆ ಮಾಡಿ ನಂತರ ಸಲಹೆಗಾರರು ಎಂದು ಮೂಲೆಗುಂಪು ಮಾಡಿರುವುದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿವಿಎಸ್ ಲಕ್ಷ್ಮಣ್,  ಗಂಗೂಲಿ ಮತ್ತು ಸಚಿನ್ ನೇತೃತ್ವದ ಸಮಿತಿ ತನ್ನ ಅಧಿಕಾರ ಮೀರಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
 
ಇದನ್ನೂ ಓದಿ.. ರವಿ ಶಾಸ್ತ್ರಿ ಸಂಬಳ ಕೇಳಿದರೆ ಶಾಕ್ ಆಗುತ್ತೀರಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರವಿ ಶಾಸ್ತ್ರಿ ಸಂಬಳ ಕೇಳಿದರೆ ಶಾಕ್ ಆಗುತ್ತೀರಿ!

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ವೇತನ ನಿಗದಿ ಮಾಡುವುದಕ್ಕೆಂದೇ ...

news

8ನೇ ಬಾರಿಗೆ ವಿಂಬಲ್ಡನ್ ಟ್ರೋಫಿ ತಮ್ಮದಾಗಿಸಿಕೊಂಡ ರೋಜರ್ ಫೆಡರರ್

ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್‌‌ ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ಎತ್ತಿ ...

news

ಮೊದಲಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಮುಗುರುಜಾ

ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಮೊದಲ ಬಾರಿ ವಿಂಬಲ್ಡನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ...

news

ರವಿಶಾಸ್ತ್ರಿ ಸಂಬಳ ನಿಗದಿಗೇ ಒಂದು ಸಮಿತಿ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ...

Widgets Magazine Widgets Magazine