Widgets Magazine

ನಿಮಗೆ ಗೊತ್ತಾ ? ಈ ಗೂಬೆ ಕೂಡ ಟಿವಿ ನೋಡುತ್ತದೆ.

ವೆಬ್‌ದುನಿಯಾ|
PR
ನವದೆಹಲಿ : ನೀವು ಈ ಸುದ್ದಿಯ ಹೆಡ್‌‌ ಲೈನ್‌ ನೋಡಿ ಆಶ್ಚರ್ಯ ಆಗುತ್ತಿರಬಹುದು ಆದರೆ ಈ ಗೂಬೆ ಟಿವಿ ನೋಡುತ್ತದೆ. ಮಾಲೀಕಳನ್ನು ಹೇಗೆ ಗುಲಾಮಳಾಗಿ ಮಾಡಿಕೊಳ್ಳುತ್ತದೆ ಎಂದು ನೀವು ಯೋಚಿಸುತ್ತಿರಬೇಕಲ್ಲವೇ? ಇಲ್ಲಿದೆ ನೋಡಿ ವಿಚಿತ್ರ ಕಥೆ.

ಈ ಸಾಕುಪ್ರಾಣಿ ಗೂಬೆಯ ಹೆಸರು ಹಾರೂ ಏಷ್ಯಾ ಮೂಲದ ಈ ಗೂಬೆ ಕೇವಲ 7 ತಿಂಗಳ ವಯಸ್ಸಿನದ್ದಾಗಿದೆ.ಕೇವಲ ಏಳು ತಿಂಗಳ ಅವಧಿಯಲ್ಲಿ ಹಲವಾರು ಚಟಗಳನ್ನು ಕಲಿತಿದೆ.

ಇದನ್ನು ಸಾಕಿದ ಮಹಿಳೆಯ ಹೆಸರು ನತಾಶಾ ವೆಲ್ಚ್. ಮಾಲೀಕಳಿಗೆ ಇಷ್ಟವಾಗದ ಧಾರವಾಹಿಗಳನ್ನು, ಕ್ರೀಡಾಚಾನೆಲ್‌ಗಳನ್ನು ಒತ್ತಾಯಪೂರ್ವಕವಾಗಿ ನೋಡುವಂತೆ ಮಾಡುತ್ತದಂತೆ ಈ ಗೂಬೆ.

ಮನೆಯಲ್ಲಿರುವ ಈ ಗೂಬೆ ಪ್ರತಿದಿನ ಧಾರವಾಹಿ ಮತ್ತು ಲೈವ್ ಸ್ಪೋರ್ಟ್ಸ್ ನೋಡುತ್ತದೆ. ಟಿವಿ ನೋಡುವುದು ಈ ಗೂಬೆಗೆ ರೂಢಿಯಾಗಿದೆ. ನತಾಶಾರವರ ಪ್ರಕಾರ ಈ ಗೂಬೆಗೆ ಟಿವಿ ನೋಡುವುದಂದರೆ ಬಹಳ ಇಷ್ಟವಂತೆ.


ಇದರಲ್ಲಿ ಇನ್ನಷ್ಟು ಓದಿ :