Widgets Magazine

ಮೇ 29ರಿಂದ ಮೂರು ದಿನ ಮೆಟ್ರೋ ಸಂಚಾರ ಬಂದ್

ಬೆಂಗಳೂರು, ಭಾನುವಾರ, 28 ಮೇ 2017 (16:32 IST)

Widgets Magazine

ಬೆಂಗಳೂರು: ಸಂಪಿಗೆ ರಸ್ತೆ-ಯಲಚೇನಹಳ್ಳಿ ನಡುವಿನ ನೂತನ ಮೆಟ್ರೋ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿರುವ ಹಿನ್ನೆಲೆಯಲ್ಲಿ ಮೇ 29ರಿಂದ 31ರವರೆಗೆ ರಾಜಾಜಿನಗರ-ಸಂಪಿಗೆ ರಸ್ತೆ ನಿಲ್ದಾಣದ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.
 
ಈ 3 ದಿನ ಶ್ರೀರಾಂಪುರ, ಕುವೆಂಪು ರಸ್ತೆ ಹಾಗೂ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳು ಮುಚ್ಚಿರಲಿವೆ. ನಾಗಸಂದ್ರದಿಂದ ರಾಜಾಜಿನಗರದವರೆಗೆ ಮಾತ್ರ ಮೆಟ್ರೋ ಸಂಚರಿಸಲಿದ್ದು, ರಾಜಾಜಿನಗರದಿಂದ ಮೆಜೆಸ್ಟಿಕ್ ಕೆಂಪೇಗೌಡ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಫೀಡರ್ ಸೇವೆಗಳನ್ನು ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
 
ಹಸಿರು ಮೆಟ್ರೋ ಮಾರ್ಗದಲ್ಲಿ 29ರಿಂದ ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ. ಮನೋಹರನ್ ನೇತೃತ್ವದ ತಂಡ ಪರಿಶೀಲನೆ ಆರಂಭಿಸಲಿದೆ. 30ರಂದು ಸಂಪಿಗೆ ರಸ್ತೆ, ಕೆ.ಆರ್.ಮಾರುಕಟ್ಟೆ ನಡುವಿನ ಮೆಟ್ರೋ ಸುರಂಗ ಮಾರ್ಗದ ಪರಿಶೀಲನೆ, 31ರಂದು ರೈಲಿನ ವೇಗದ ಪರೀಕ್ಷೆ ನಡೆಯಲಿದೆ.
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮನ್ ಕಿ ಬಾತ್: ದೇಶದ ಜನತೆಗೆ ರಂಜಾನ್ ಶುಭಕೋರಿದ ಪ್ರಧಾನಿ ಮೋದಿ

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಆರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮುಸ್ಲಿಂ ...

news

ನಾಳೆ ಕೆಪಿಸಿಸಿ ಅಧ್ಯಕ್ಷ ಘೋಷಣೆ?: ಪ್ರಮುಖ ನಾಯಕರ ತೀವ್ರ ಪೈಪೋಟಿ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಚುರುಕು ಪಡೆದಿದೆ. ...

news

100 ರೂ. ಗೆ ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಸೇಲ್!

ಬೆಂಗಳೂರು: ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪಾಕಿಸ್ತಾನ ಮೂವರು ನಾಗರಿಕರಿಂದ ಬೆಚ್ಚಿ ...

news

ಗಾಂಜಾ ಮತ್ತಿನಲ್ಲಿ 6 ಜನರಿಗೆ ಚೂರಿ ಇರಿದ ಯುವಕ

ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಯುವಕನೊಬ್ಬ ಗಾಂಜಾ ಮತ್ತಿನಲ್ಲಿ ಪೊಲೀಸ್‌ ಪೇದೆ ...

Widgets Magazine Widgets Magazine