ವರ್ತೂರು ಕೆರೆಯಲ್ಲಿ ಹೆಚ್ಚಿದ ನೊರೆ: ಸ್ಥಳೀಯ ನಿವಾಸಿಗಳು, ವಾಹನ ಸವಾರರ ಪರದಾಟ

ಬೆಂಗಳೂರು, ಸೋಮವಾರ, 29 ಮೇ 2017 (13:25 IST)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವರ್ತೂರು ಕೆರೆಯಲ್ಲಿ ಮತ್ತೆ ನೊರೆಗಳು ಉದ್ಭವವಾಗಿವೆ. ಇದರಿಂದಾಗಿ  ಸುತ್ತಮುತ್ತ ನೊರೆ ಕಾಟದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. 
 
ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದು. ಹಲವಾರು ಮರಗಳು ಧರೆಗುರುಳಿವೆ ಇದರ ನಡುವೆ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ನೊರೆ ಸಮಸ್ಯೆ ಈಗ ವರ್ತೂರು ಕೆರೆಯಲ್ಲೂ ಕಾಣಿಸಿಕೊಂಡಿದ್ದು ಜನರ ಆತಂಕ ಇಮ್ಮಡಿಗೊಳಿಸಿದೆ. ಕೆರೆಯಿಂದ ರಾಶಿ, ರಾಶಿ ವಿಷಕಾರಿ ರಾಸಾಯನಿಕ ನೊರೆ ದೊಡ್ಡ ಪ್ರಮಾಣದಲ್ಲಿ ವೈಟ್ ಫೀಲ್ಡ್  ಮುಖ್ಯರಸ್ತೆ ಮೇಲೆ ಹಾರಿ ಬರುತ್ತಿದೆ. ಇದರಿಂದಾಗಿ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. 
 
ಮೊನ್ನೆಬಂದ ಬಿರುಗಾಳಿ ಸಹಿತ ಮಳೆಗೆ ಕೆರೆಗೆ ಮೆಷ್ ಹಾಕಲು ಬಳಸಿದ ಕಂಬಗಳು ಕಿತ್ತು ಹೋಗಿವೆ. ಹೀಗಾಗಿ ನೊರೆ ನೇರವಾಗಿ ರಸ್ತೆಗೆ ಬಂದು ಬೀಳುತ್ತಿದೆ. ಗಾಳಿಬಂದಾಗಲೆಲ್ಲ ನೊರೆಗಳು ಮನೆಗಳಿಗೆವ್ ನುಗ್ಗುತ್ತಿವೆ. ನೊರೆ ಜತೆಗೆ ಬರುವ ದುರ್ವಾಸನೆ ಸೊಳ್ಳೆಕಾಟಗಳು ಕೂಡ ಹೆಚ್ಚಾಗಿವೆ.
 ಇದರಲ್ಲಿ ಇನ್ನಷ್ಟು ಓದಿ :  
Varthur Lake Chemical Snowfall After Heavy Rain

ಸುದ್ದಿಗಳು

news

ರಾಷ್ಟ್ರಪತಿ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಹ್ವಾನ?

ಬೆಂಗಳೂರು: ದೇಶದ ರಾಜಕೀಯ ನಾಯಕರು ಇದೀಗ ತಮ್ಮ ಆಯ್ಕೆಯ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಲ್ಲಿ ...

news

ಗೋಹತ್ಯೆ ನಿಷೇಧ ಕಾಯ್ದೆ: ಬಿಜೆಪಿಯಿಂದ ರಾಜಕೀಯ ಲಾಭಕ್ಕಾಗಿ ಹುನ್ನಾರ

ಮೈಸೂರು: ಬಿಜೆಪಿ ರಾಜಕೀಯ ಲಾಭಕ್ಕಾಗಿ ನೂತನ ಗೋನಿರ್ವಹಣೆ ಕಾಯ್ದೆ ಜಾರಿಗೆ ತಂದಿದೆ ಎಂದು ಲೋಕೋಪಯೋಗಿ ಸಚಿವ ...

news

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಎಂದಿದ್ದಕ್ಕೆ ಚಾಲಕನ ಕೊಲೆ!

ನವದೆಹಲಿ: ನರೇಂದ್ರ ಮೋದಿ ಸ್ವಚ್ಛ ಭಾರತದ ಬಗ್ಗೆ ದೇಶದ ಯುವಕರಿಗೆ ಕರೆ ಕೊಟ್ಟಿದ್ದನ್ನು ಚಾಚೂ ತಪ್ಪದೇ ...

news

ಟ್ವಿಟರ್ ಗೆ ರಾಮ ಗೋಪಾಲ್ ವರ್ಮಾ ಗುಡ್ ಬೈ

ಯಾವಾಗಲೂ ವಿವಾದಿತ ಟ್ವಿಟ್ ಗಳಲ್ಲೇ ಇರುತ್ತಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಾಮಾಜಿಕ ...

Widgets Magazine