ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಸಂಸ್ಥೆ ವಿರುದ್ಧ ಸಿಎಂ ಗರಂ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (11:52 IST)

ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಇಲಾಖೆ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಸಿಆರ್`ಪಿಎಫ್ ರಾಜ್ಯಕ್ಕೆ ಬಂದರೂ ನಿಮಗೆ ಮಾಹಿತಿ ಸಿಗಲಿಲ್ಲವೇ..? ಗುಪ್ತಚರ ಇಲಾಖೆ ಏನು ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಐಟಿ ಇಲಾಖೆ ರಾಜ್ಯ ಪೊಲೀಸರು ಸೇರಿದಂತೆ ಯಾವುದೇ ಸಂಸ್ಥೆಗೆ ಮಾಹಿತಿ ನೀಡದೇ ದಾಳಿ ನಡೆಸಿರುವುದು ಇದಕ್ಕೆ ಕಾರಣವಾಗಿದೆ. ರಾಜ್ಯ ಗುಪ್ತಚರ ಇಲಾಖೆಗೆ ಈ ಬಗ್ಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಅಧಿಕಾರಿಗಳ ಸಭ ನಡೆಸಿರುವ ಸಿಎಂ ಸಿದ್ದರಾಮಯ್ಯ ಇತರೆ ವಿಷಯಗಳ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಈ ಮಧ್ಯೆ, ಇತರೆ ವಿಷಯಗಳ ಕುರಿತಂತೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಇತ್ತ, ಕೆಪಿಸಿಸಿ ಅಧ್ಯಕ್ಷರ ಜೊತೆಯೂ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ಬಳಿಕ ರೆಸಾರ್ಟ್`ನಲ್ಲಿರುವ ಗುಜರಾತ್ ಶಾಸಕರ ಜವಾಬ್ದಾರಿಯನ್ನ ಬೇರೊಬ್ಬರಿಗೆ ವರ್ಗಾಯಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
 
ಇದನ್ನೂ ಓದಿ.. ಡಿಕೆಶಿ ಮನೆ ಮೇಲಿನ ಐಟಿ ದಾಳಿ ಹಿಂದಿನ 6 ತಿಂಗಳ ರಹಸ್ಯ ಬಹಿರಂಗ

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಐಟಿ ದಾಳಿ ಕಾಂಗ್ರೆಸ್ Itraid Dkshivakumar Congress It Raid

ಸುದ್ದಿಗಳು

news

ಇನ್ನು 5, 8 ನೇ ತರಗತಿಯಲ್ಲಿ ಫೇಲ್ ಮಾಡಬಹುದು!

ನವದೆಹಲಿ: 10 ನೇ ತರಗತಿಯವರೆಗೆ ಫೇಲಾಗುವ ಭಯವಿಲ್ಲ ಎಂದು ಆರಾಮವಾಗಿದ್ದ ವಿದ್ಯಾರ್ಥಿಗಳು ಇನ್ನು ...

news

ಡಿಕೆಶಿ ಮನೆಗೆ ನಕಲೀ ಕೀ ಮಾಡುವವರನ್ನ ಕರೆತಂದ ಐಟಿ ಅಧಿಕಾರಿಗಳು..!

ಸತತ 2ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದೆ. ...

news

16 ರ ಬಾಲಕನನ್ನುಒಂದು ವರ್ಷ ಅತ್ಯಾಚಾರ ಮಾಡಿದ ಯುವಕರ ಗುಂಪು!

ಮುಂಬೈ: ಇದು ನಿಜಕ್ಕೂ ಸಮಾಜವೇ ಬೆಚ್ಚಿಬೀಳುವ ಘಟನೆ. 16 ವರ್ಷದ ಬಾಲಕನೋರ್ವ 15 ಮಂದಿ ತನ್ನನ್ನು ಒಂದು ವರ್ಷ ...

news

ಮುತ್ತು ಕೇಳಿದವನಿಗೆ ಮಹಿಳೆ ಕೊಟ್ಟ ಶಿಕ್ಷೆ ಏನು ಗೊತ್ತಾ?

ತಿರುವನಂತಪುರಂ: ನಾರಿ ಮುನಿದರೆ ಮಾರಿ ಎಂಬ ಗಾದೆ ಬಹುಶಃ ಈಗ ಈ ಕಾಮುಕನಿಗೆ ಚೆನ್ನಾಗಿ ಅರ್ಥವಾಗಿರುತ್ತದೆ! ...

Widgets Magazine