ಬುಲೆಟ್ ಬಾಬಾ ಟೆಂಪಲ್ ಎಲ್ಲಿದೆ ಗೊತ್ತಾ...!

ಬೆಂಗಳೂರು, ಶುಕ್ರವಾರ, 27 ಜುಲೈ 2018 (16:52 IST)

ಭಾರತದಲ್ಲಿ ಸಾಕಷ್ಟು ದೇವಾಲಯಗಳಿವೆ ಕೆಲವು ದೇವಾಲಯಗಳು ಪುರಾತನ ಕಾಲದಾದರೆ ಇನ್ನು ಕೆಲವು ಸ್ವಯಂ ನಿರ್ಮಿತ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ತಾವು ಇಷ್ಟಪಟ್ಟ ಕಲಾವಿದರಿಗೆಲ್ಲಾ ದೇವಸ್ಥಾನಗಳನ್ನು ಕಟ್ಟಿದ ಉದಾಹರಣೆಯನ್ನು ನಾವು ಕಾಣಬಹುದು ಆದರೆ ಯಾರಾದರೂ ಬೈಕ್‌ಗೆ ದೇವಾಲಯ ಕಟ್ಟಿರುವುದನ್ನು ನೋಡಿದ್ದೀರಾ ಆಶ್ಚರ್ಯವಾದರೂ ನೀವು ನಂಬಲೇಬೇಕು.
ರಾಜಸ್ತಾನ ದೇಶದ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರ ಅಷ್ಟೇ ಅಲ್ಲ ಅಲ್ಲಿರುವ ಜೋಧ್‌ಪುರ್ ಕೂಡಾ ಸಾಕಷ್ಟು ಹೆಸರುವಾಸಿ ನಗರಗಳಲ್ಲಿ ಒಂದು. ನಾವು ಈಗ ಹೇಳ ಹೊರಟಿರೋ ಪ್ರದೇಶವಾದ ಬುಲೆಟ್ ಬಾಬಾ ಟೆಂಪಲ್ ಜೋಟಿಲಾ ಎಂಬ ಗ್ರಾಮದಲ್ಲಿದೆ. ಇದು ಜೋಧ್‌ಪುರ್‌ನಿಂದ 50 ಕಿಮೀ ದೂರದಲ್ಲಿರುವ ಪಾಲಿ ಎಂಬ ಜಿಲ್ಲೆಯಲ್ಲಿದೆ. ಈ ಗ್ರಾಮ ಮೊದಲು ಸಾಮಾನ್ಯ ಹಳ್ಳಿಯಾಗಿತ್ತು ಆದರೆ ಇಂದು ಬುಲೆಟ್ ಬಾಬಾ ಟೆಂಪಲ್ ಎಂಬ ಹೆಸರಿನಿಂದ ಈ ಹಳ್ಳಿ ಎಲ್ಲರಿಗೂ ಪರಿಚಿತವಾಗಿದೆ. ಅಷ್ಟಕ್ಕೂ ಈ ಪ್ರದೇಶದಲ್ಲಿ ಬುಲೆಟ್ ಅನ್ನು ಏತಕ್ಕೆ ಪೂಜೆ ಮಾಡಿದ್ರು ಅನ್ನೋ ಒಂದು ಕೂತುಹಲ ನಿಮಗಿರುತ್ತೆ ಹೇಳ್ತಿವಿ ಓದಿ.
 
ಈ ಸ್ಥಳದಲ್ಲಿ ಒಬ್ಬ ಗ್ರಾಮದ ಮುಖ್ಯಸ್ಥನಿದ್ದ ಆತನಿಗೆ ಒಬ್ಬ ಮಗನಿದ್ದ ಆತನ ಹೆಸರು ಓಂ ಬನ್ನಾ, ಆತನನ್ನು ಓಂ ಸಿಂಗ್ ರಾಥೋಡ್ ಎಂದು ಅಲ್ಲಿನ ಜನ ಕರಿತಾ ಇದ್ರು, ಆತ ಒಂದು ದಿನ ಊರಿನ ಪಕ್ಕದಲ್ಲಿರುವ ನಗರಕ್ಕೆ ಹೋಗುತ್ತಿದ್ದ ಆ ದಾರಿಯಲ್ಲಿ ಆತನಿಗೆ ಬೈಕ್ ನಿಯಂತ್ರಣಕ್ಕೆ ಸಿಗದೇ ಒಂದು ಮರಕ್ಕೆ ಹೋಗಿ ಅಪ್ಪಳಿಸುತ್ತದೆ ಆ ಸಂದರ್ಭದಲ್ಲಿ ಓಂ ಸಿಂಗ್ ರಾಥೋಡ್ ಸ್ಥಳದಲ್ಲಿಯೇ ಸಾಯುತ್ತಾರೆ. ಇದಾದ ನಂತರ ಪೊಲೀಸರು ಆ ಸ್ಥಳಕ್ಕೆ ಬಂದು ಮಹಜರು ಮಾಡಿ ಬೈಕ್ ಅನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ ಆದರೆ ಮರುದಿನ ಬೆಳಿಗ್ಗೆ ಆ ಬೈಕ್ ಮತ್ತೆ ಅದೇ ಅಪಘಾತವಾದ ಸ್ಥಳದಲ್ಲಿ ನಿಂತಿರುತ್ತೆ. ಇದನ್ನು ನೋಡಿದ ಗ್ರಾಮಸ್ಥರು ಮತ್ತು ಪೊಲೀಸರಿಗೆ ಚಕಿತವಾದರೂ ಇನ್ನೊಮ್ಮೆ ಆ ಬೈಕ್ ಅನ್ನು ತಮ್ಮ ವಶಕ್ಕೆ ಪಡೆದು ಅದರಲ್ಲಿರುವ ಪೆಟ್ರೋಲ್ ಖಾಲಿಮಾಡಿ ಅದನ್ನು ತನ್ನ ಕಬ್ಬಿಣದ ಸರಪಳಿಯಿಂದ ಬಿಗಿಯುತ್ತಾರೆ.
ಇಲ್ಲಿಗೆ ಎಲ್ಲವೂ ಸರಿಹೋಯ್ತು ಇನ್ನು ಈ ಏನು ಸಮಸ್ಯೆ ಆಗಲ್ಲ ಅಂತಾ ಅಂದುಕೊಂಡರೆ ಮತ್ತೆ ಬೆಳಿಗ್ಗೆ ಅದೇ ಅಪಘಾತ ನಡೆದ ಸ್ಥಳದಲ್ಲಿ ಈ ಬುಲೆಟ್ ಬೈಕ್ ನಿಂತಿರುವುದನ್ನು ನೋಡಿ ಜನರು ಮುಖವಿಸ್ಮಿತರಾಗುತ್ತಾರೆ. ಇದನ್ನು ನೋಡಿದ ಪೊಲೀಸರು ಕೂಡಾ ನಂಬದಾಗುತ್ತಾರೆ ತದನಂತರ ಅಲ್ಲಿನ ಜನರು ಅದೇ ಸ್ಥಳದಲ್ಲಿ ಬುಲೆಟ್ ಅನ್ನು ಇರಿಸಿ ಅದಕ್ಕೊಂದು ದೇವಾಲಯವನ್ನು ಕಟ್ಟುತ್ತಾರೆ ಇದು ಇಲ್ಲಿನ ಇತಿಹಾಸ.
 
ಇಂದು ಈ ದೇವಸ್ಥಾನ ಪ್ರಮುಖ ಜೋಧ್‌ಪುರದ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಪ್ರತಿಯೊಬ್ಬ ಪ್ರವಾಸಿಗರು ಭೇಟಿಕೊಡುತ್ತಾರೆ. ಅಷ್ಟೇ ಅಲ್ಲ ಇಲ್ಲಿ ಪೂಜೆ ಪುನಸ್ಕಾರ ಎಲ್ಲವೂ ನಡೆಯುವುದು ಈ ಬುಲೆಟ್‌ 350 ಬೈಕ್‌ಗೆ ಅನ್ನೋದು ಮತ್ತೊಂದು ವಿಶೇಷ. ಅದಲ್ಲದೇ ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಇಲ್ಲಿಗೆ ಬಂದು ದರ್ಶನ ತೆಗೆದುಕೊಂಡು ಹೋಗುವುದು ಇಲ್ಲಿನ ಪದ್ಧತಿ ಆ ಮೂಲಕ ಅವರ ಪ್ರಯಾಣ ಸುಲಭವಾಗುತ್ತೆ ಮತ್ತು ಯಾವುದೇ ಹಾನಿ ಸಂಭವಿಸುವುದಿಲ್ಲ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ ಹಾಗೂ ಇಲ್ಲಿ ಏನಾದರೂ ಮನದ ಬಯಕೆಗಳಿದ್ದಲ್ಲಿ ಅವರ ಇಷ್ಟಾರ್ಥ ಪೂರ್ಣಗೊಂಡಿರುವ ಉದಾಹರಣೆಗಳು ನಾವು ಅಲ್ಲಿ ಕಾಣಬಹುದು. ಅಷ್ಟೇ ಅಲ್ಲ ಇದೆಲ್ಲಾ ಮೂಢನಂಭಿಕೆ ಇದನ್ನೆಲ್ಲಾ ನಂಬಲು ಸಾಧ್ಯವಿಲ್ಲ ಎಂದುಕೊಂಡು ಈ ಬಾಬಾ ದೇವಾಲಯದ ಮುಂದೆ ಹಾದು ಹೋದವರಿಗೆ ಹಾಗೂ ಪೂಜೆ ಮಾಡದೆಯೇ ಹಾದು ಹೋದವರಿಗೆ ಹಲವಾರು ಅಪಘಾತಗಳಾಗಿರುವ ಉದಾಹರಣೆಗಳು ಇವೆ.
ಒಟ್ಟಿನಲ್ಲಿ ಇಲ್ಲಿರುವ ಬುಲೆಟ್ ಜನರ ಇಷ್ಟಾರ್ಥಗಳನ್ನು ಪೂರೈಸುವುದಲ್ಲದೇ ದೇವರ ಸ್ಥಾನ ಪಡೆದುಕೊಂಡು ಈ ಸ್ಥಳವನ್ನು ಧಾರ್ಮಿಕ ಸ್ಥಳವನ್ನಾಗಿ ರೂಪಿಸಿದೆ ಎಂದರೆ ತಪ್ಪಾಗಲಾರದು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಆ.1 ರಂದು ಸುವರ್ಣಸೌಧ ಮುಂದೆ ಬೃಹತ್ ಪ್ರತಿಭಟನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆಗಾಗಿ ದಿನಾಂಕ 1-8-2018 ರಂದು ಉತ್ತರ ಕರ್ನಾಟಕ ಪ್ರತ್ಯೆಕ ರಾಜ್ಯ ...

news

ಕಳ್ಳರ ಕೈಚಳಕ; ಸರಣಿ ಕಳ್ಳತನ

ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿದ ಪರಿಣಾಮ ಹಲವು ವ್ಯಾಪಾರಸ್ಥರು ಲಕ್ಷಾಂತರ ಮೌಲ್ಯದ ನಷ್ಟಕ್ಕೆ ...

news

ಚಂದ್ರ ಗ್ರಹಣ ದಿನವೇ ಲಿಂಗ ದೀಕ್ಷೆ ನೀಡುತ್ತಿರುವ ಖ್ಯಾತ ಶ್ರೀಗಳು ಯಾರು ಗೊತ್ತಾ?

ಶುಭ ಕೆಲಸ ಮಾಡಲು ಪಂಚಾಂಗ ನೋಡುವವರ ವಿರುದ್ಧ ಆ ಖ್ಯಾತ ಸ್ವಾಮೀಜಿಗಳು ಸಮರ ಸಾರಿದ್ದಾರೆ. ಚಂದ್ರ ಗ್ರಹಣದ ...

news

ನಟ ದರ್ಶನ್ ಅಭಿನಯದ ಒಡೆಯರ್ ಚಿತ್ರದ ಹೆಸರು ಬದಲಾಯಿಸುವಂತೆ ದೂರು ದಾಖಲು

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯಿಸುತ್ತಿರುವ ಒಡೆಯರ್ ಚಿತ್ರದ ಹೆಸರನ್ನ ಬದಲಾಯಿಸುವಂತೆ ಕನ್ನಡ ...