ವೈದ್ಯರ ಕಿತ್ತಾಟಕ್ಕೆ ತಾಯಿ ಗರ್ಭದಲ್ಲಿಯೇ ಕಂದಮ್ಮ ಸಾವು

ಜೈಪುರ, ಬುಧವಾರ, 30 ಆಗಸ್ಟ್ 2017 (12:48 IST)

ಜೈಪುರ: ವೈದ್ಯರ ಕಿತ್ತಾಟದಿಂದ ಆಗ ತಾನೆ ಕಣ್ಣು ಬಿಡಬೇಕಿದ್ದ ಎಳೆ ಕಂದಮ್ಮ ತಾಯಿಯ ಗರ್ಭದಲ್ಲಿಯೇ ಪ್ರಾಣ ಕಳೆದುಕೊಂಡಿರುವ ಮನಕಲಕುವ ಘಟನೆ ಜೋಧ್ಪುರದ ಉಮೈದ್ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್ ಥಿಯೇಟರ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.


ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಜೋಧ್ಪುರದ ಉಮೈದ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗರ್ಭಿಣಿಯನ್ನು ಆಸ್ಪತ್ರೆ ಸಿಬ್ಬಂದಿ ಆಪರೇಶನ್ ಥಿಯೇಟರ್ ಗೆ ಕರೆ ತಂದಿದ್ದಾರೆಇದಾದ ಬಳಿಕ ಆಪರೇಷನ್ ಥಿಯೇಟರ್ ಗೆ ಬಂದ ಇಬ್ಬರು ವೈದ್ಯರು, ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಬಿಟ್ಟು ಅನಸ್ತೇಷಿಯಾ ಕೊಡುವ ವಿಚಾರವಾಗಿ ಪರಸ್ಪರ ಜಗಳವಾಡಿದ್ದಾರೆ.

30 ನಿಮಿಷಗಳ ಕಾಲ ವೈದ್ಯರು ಸಿಬ್ಬಂದಿ ಮಾತಿಗೂ ಬೆಲೆ ನೀಡದೇ ಪರಸ್ಪರ ವಾಗ್ವಾದ ನಡೆಸಿದ್ದಾರೆ. ಇದರಿಂದಾಗಿ ತಾಯಿ ಗರ್ಭದಿಂದ ಹೊರಬರಬೇಕಿದ್ದ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿಮಾಡಿದೆ.

ಉಮೈದ್ ಆಸ್ಪತ್ರೆಯ ಡಾ. ಅಶೋಕ್ ನಾನಿವಾಲ್ ಹಾಗೂ ಡಾ. ಎಂ.ಎಲ್. ಟಕ್ ಅವರನ್ನು ಸದ್ಯ ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕಲಿ ಚರಣ್ ಸರಫ್, ಘಟನೆಗೆ ಸಂಬಂಧಿಸಿದಂತೆ ಸತ್ಯಾಂಶ ತಿಳಿಯಲು ತನಿಖಾ ಸಮಿತಿ ರಚಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದ ಬಳಿಕ ಆರೋಪಿಗಳ ವಿರುದ್ಧ ಕ್ರಮತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಜೋಧ್ಪುರ ತಾಯಿ ಗರ್ಭ ಸಾವು ವೈದ್ಯ ಕಿತ್ತಾಟ ಉಮೈದ್ ಆಸ್ಪತ್ರೆ Patient Minister Jodhpur Pregnant Woman Newborn Baby Doctor Abuse Ashok Naniwal Kali Charan Umaid Hospital

ಸುದ್ದಿಗಳು

news

ಚುನಾವಣೆ ರಣತಂತ್ರ: ಆರೆಸ್ಸೆಸ್ ಕೇಶವಕೃಪಾದಲ್ಲಿ ಬಿಜೆಪಿ ನಾಯಕರ ಸಭೆ

ಬೆಂಗಳೂರು: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಕೇಶವಕೃಪಾದಲ್ಲಿ ...

news

ಯೋಗಿ ರಾಜ್ಯದಲ್ಲಿ ಮಕ್ಕಳ ಮರಣ ಮೃದಂಗ: 48 ಗಂಟೆಗಳಲ್ಲಿ 42 ಮಕ್ಕಳ ಸಾವು

ಸಿಎಂ ಯೋಗಿ ಆದಿತ್ಯಾನಾಥ್ ರಾಜ್ಯದಲ್ಲಿ ಮಕ್ಕಳ ಮರಣ ಮೃದಂಗ ಮುಂದುವರೆದಿದೆ. ಉತ್ತರ ಪ್ರದೇಶದ ಗೋರಖ್ ಪುರದ ...

news

ಡಿ.ಕೆ. ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ

ಡಿ.ಕೆ. ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿ ಬಳಿಕ ಇದೀಗ ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಮನೆ ...

news

ರಾಹುಲ್ ಗಾಂಧಿ ಮದುವೆ ವಿಚಾರ: ಸಿಎಂ ಸಿದ್ದು, ಡಿಕೆಶಿ ಹೇಳಿದ್ದೇನು?

ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಲು ದಲಿತರ ಹೆಣ್ಣು ಮಗಳನ್ನು ನೀಡಲು ಸಿದ್ಧ ...

Widgets Magazine