ಸೊಸೆಯನ್ನೇ ಮಂಚಕ್ಕೆ ಕರೆದ ಮಾವ!

Bangalore, ಗುರುವಾರ, 2 ಮಾರ್ಚ್ 2017 (11:07 IST)

ಬೆಂಗಳೂರು: ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ ಸೊಸೆ ಪತಿಯ ಮನೆಯವರ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರಿತ್ತಿದ್ದಾಳೆ.  ಇಂದಿರಾನಗರದ ಶೃತಿ ಸಂತ್ರಸ್ತೆ.


 
ಪತಿ ವಿದೇಶದಲ್ಲಿ ಕೆಲಸದಲ್ಲಿದ್ದ. ಈ ವೇಳೆ ಶೃತಿ ಅತ್ತೆ ಮಾವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಳು. ಈ ಸಂದರ್ಭದಲ್ಲಿ ಮಾವ ಸೊಸೆಯ ಮೇಲೆ ನೀಡುತ್ತಿದ್ದರು. ಈ ಬಗ್ಗೆ ಶೃತಿ ಪತಿಗೆ ಹೇಳಿದರೆ, ಆತನೂ ಅಪ್ಪನೊಂದಿಗೆ ಅಡ್ಜಸ್ಟ್ ಮಾಡುವಂತೆ ಹೇಳಿದ್ದಾನೆ.
 
ತನ್ನನ್ನೂ ವಿದೇಶಕ್ಕೆ ಕರೆದೊಯ್ಯಲು ಹೇಳಿದರೂ ಕೇಳದ ಗಂಡನ ವಿರುದ್ಧ ತಿರುಗಿಬಿದ್ದ ಶೃತಿ ತಾನೇ ವಿದೇಶಕ್ಕೆ ತೆರಳಿದ್ದಳು. ಆದರೆ ಅಲ್ಲಿಗೂ ಹಿಂಬಾಲಿಸಿದ ಮಾವ-ಅತ್ತೆ ಅಲ್ಲಿಯೂ ಕಿರುಕುಳ ಮುಂದುವರಿಸಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಶೃತಿ ಪತಿ ರಘುನಂದನ್ ಮೇಲೆ ಕೂಡಾ ದಾಖಲಿಸಲಾಗಿದೆ. ಹಣ ಮತ್ತು ಚಿನ್ನ ನೀಡುವಂತೆ ಆತ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಅತ್ತೆ-ಮಾವನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಲ್ಲಿ ರಾಜಾಕಾಲುವೆಗೆ ಮತ್ತೊಬ್ಬ ಬಾಲಕ ಬಲಿ

ಬೆಂಗಳೂರಿನಲ್ಲಿ ರಾಜಾಕಾಲುವೆಗೆ ಮತ್ತೊಂದು ಬಲಿಯಾಗಿದೆ. ಶೌಚಕ್ಕೆ ಹೋದ ಬಾಲಕ ರಾಜಾಕಾಲುವೆಗೆ ಬಿದ್ದು ...

news

ಬೆಳ್ಳಂ ಬೆಳಿಗ್ಗೆ ಗ್ರಾಹಕರಿಗೆ ಶಾಕ್ ಕೊಟ್ಟ ಖಾಸಗಿ ಬ್ಯಾಂಕ್ ಗಳು!

ನವದೆಹಲಿ: ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳು ತಿಂಗಳ ಉಚಿತ ವಹಿವಾಟಿನ ಮೇಲೆ ಕಡಿವಾಣ ಹಾಕಲು ...

news

ಎಚ್ ಡಿ ಕುಮಾರಸ್ವಾಮಿಗೆ ಅನಾರೋಗ್ಯ

ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಅನಾರೋಗ್ಯ ಕಾಡಿದೆ. ಇದರಿಂದಾಗಿ ಇಂದಿನ ...

news

ದೆಹಲಿಯಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ!

ನವದೆಹಲಿ: ದೆಹಲಿಯಲ್ಲಿ ಮತ್ತೊಮ್ಮೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. 15 ವರ್ಷದ ...

Widgets Magazine
Widgets Magazine