Widgets Magazine Widgets Magazine

ಫೋನ್ ಎತ್ತಿ ಮೊದಲು 'ಹಲೋ' ಅನ್ನೋದ್ಯಾಕೆ ಗೊತ್ತಾ?

ಬುಧವಾರ, 22 ಫೆಬ್ರವರಿ 2017 (10:38 IST)

Widgets Magazine

ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ 'ಹಲೋ'. ಆದರೆ ಹಲೋವನ್ನೇ ಯಾಕೆ ಹೇಳುತ್ತೇವೆ. ಬೇರೆ ಪದ ಯಾಕಿಲ್ಲ ಎಂದು ನೀವೆಂದಾದರೂ ಯೋಚಿಸಿದ್ದೀರಾ. ಅದರ ಹಿಂದೆ ಕೂಡ ರೋಮಾಂಚನಕಾರಿ ಕರೆ ಇದೆ ಎಂದರೆ ನಂಬುತ್ತೀರಾ?
ಆಕ್ಸಫರ್ಡ್ ಇಂಗ್ಲೀಷ್ ಶಬ್ಧಕೋಶದ ಪ್ರಕಾರ ಹಲೋ ಶಬ್ಧ, ಹಳೆಯ ಜರ್ಮನಿ ಶಬ್ಧ ಹಾಲಾ,ಹೋಲಾದಿಂದ ಹುಟ್ಟಿಕೊಂಡಿದೆ. ಹೋಲಾದ ಅರ್ಥ ಹೇಗಿದ್ದೀರಾ? ಎಂದು. ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿ ಯಾತ್ರೆ ಮಾಡುವ ನಾವಿಕರು ಈ ಪದವನ್ನು ಬಳಸುತ್ತಿದ್ದರು. ಆದರೆ ಫೋನ್‌ಗೆ ಮತ್ತು 'ಹಲೋ'ಗೆ ಏನು ಸಂಬಂಧ. ಇಲ್ಲಿ ಕಥೆಯೇ ಬೇರೆದಿದೆ. 
 
ಫೋನ್ ಆವಿಷ್ಕರಿಸಿದ ಅಲೆಕ್ಸಾಂಡರ್ ಗ್ರಹಾಂ ಬೆಲ್‌ಗೆ ಮಾರ್ಗರೆಟ್ 'ಹಲೋ' ಎಂಬ ಪ್ರೇಯಸಿ ಇದ್ದಳು. ಕಠಿಣ ಪರಿಶ್ರಮದಿಂದ ದೂರವಾಣಿ ಆವಿಷ್ಕರಿಸಿದ ಅವರು ಮೊದಲು ಎರಡು ಫೋನ್ ತಯಾರು ಮಾಡಿ ಅದರಲ್ಲೊಂದನ್ನು ತನ್ನ ಪ್ರೇಯಸಿಗೆ ನೀಡಿದರು. ಬಳಿಕ ಫೋನ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ತಮ್ಮ ಯೋಜನೆ ಪರಿಪೂರ್ಣವಾದಾಗ ಎಲ್ಲರಿಗಿಂತ ಮೊದಲು ಆಕೆಗೆ ಕರೆ ಮಾಡಿದರು ಮತ್ತು ಎಂದಿನಂತೆ ಪ್ರೀತಿಯಿಂದ 'ಹಲೋ' ಎಂದರು. ಬಳಿಕ ಅವಳಿಗೆ ಫೋನ್ ಮಾಡಿದಾಗಲೆಲ್ಲ 'ಹಲೋ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
 
ಅವರಿಂದ ಕಂಡುಹಿಡಿಯಲ್ಪಟ್ಟ ಫೋನ್ ಮಾರುಕಟ್ಟೆಗೆ ಬಂದು ಜನರು ಬಳಸಲು ಪ್ರಾರಂಭಿಸಿದಾಗ ಮೊದಲೆಲ್ಲ ‘Are You There?’ ಎಂದೇ ಸಂಭಾಷಣೆಯನ್ನು ಪ್ರಾರಂಭಿಸುತ್ತಿದ್ದರು. ಆದರೆ ಇಷ್ಟೊಂದು ಉದ್ದದ ಪದವನ್ನು ಬಳಸುವುದು ಯಾರಿಗೂ ಇಷ್ಟವಾಗಲಿಲ್ಲ. ಹೀಗಾಗಿ ಗ್ರಹಾಂ ಬೆಲ್‌ನಂತೆ ಎಲ್ಲರೂ 'ಹಲೋ' ಎಂದೇ ಬಳಸತೊಡಗಿದರು.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಜಗತ್ತನ್ನು ನಿಬ್ಬೆರಗಾಗಿಸಿದ ಆ ನಾಲ್ಕು ಭವಿಷ್ಯವಾಣಿಗಳು!

ಭವಿಷ್ಯದಲ್ಲಿ ಏನಾಗಲಿದೆ ಎಂಬ ಅರಿವು ನಮಗಿರುವುದಿಲ್ಲ. ಆದರೆ ಕೆಲವರು ಭವಿಷ್ಯದಲ್ಲಿ ಏನಾಗುತ್ತದೆ ಎಂದು ...

ಇನ್ಮುಂದೆ ಪಡಿತರ ಮಾದರಿಯಲ್ಲಿ ಕುಡಿಯುವ ನೀರು!

ಬೆಂಗಳೂರು: ಇನ್ಮುಂದೆ ಕುಡಿಯೋ ನೀರು ಪಡಿತರ ಮಾದರಿಯಲ್ಲಿ...! ಅಬ್ಬಾ..! ಇಂಥದ್ದೊಂದು ದಿನಗಳು ...

news

ದೇವರು ಹೇಳಿದನಂತೆ; ತಾಯಿಯ ತಲೆ ಕಡಿದು ಬಾಗಿಲಲ್ಲಿಟ್ಟು ಪೂಜಿಸಿದ ಮಗ

ಪಾಪಿ ಮಗನೊಬ್ಬ ತನ್ನ ತಾಯಿಯ ತಲೆ ಕಡಿದು ಮನೆ ಬಾಗಿಲಲ್ಲಿಟ್ಟ ಬೀಭತ್ಸ, ಘೋರ ಘಟನೆ ಚಿತ್ರದುರ್ಗದ ಹೊಳಲ್ಕೆರೆ ...

news

ನಮ್ಮ ಪ್ರಧಾನಿ ಮೋದಿಗೆ ಈ ವಿಷಯದಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನ!

ಪ್ರಧಾನಿಯಾಗುವುದಾಗಿನಿಂದಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ಒಲವು ಹೊಂದಿದ್ದ ವ್ಯಕ್ತಿ ನರೇಂದ್ರ ಮೋದಿ. ...

Widgets Magazine Widgets Magazine