ಮದುವೆಯಾದ ಐದೇ ದಿನಕ್ಕೆ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ!

Mumbai, ಮಂಗಳವಾರ, 16 ಮೇ 2017 (10:26 IST)

Widgets Magazine

ಮುಂಬೈ: ಬಲವಂತವಾಗಿ ಮದುವೆ ಮಾಡಿಸಿದರೆಂಬ ಕಾರಣಕ್ಕೆ ಕೈ ಹಿಡಿದ ಪತ್ನಿಯನ್ನೇ ಮದುವೆಯಾದ ಐದೇ ದಿನಕ್ಕೆ ಪತಿ ರುಂಡ ಮುಂಡ ಬೇರ್ಪಡಿಸಿದ ಘಟನೆ ಮುಂಬೈಯಲ್ಲಿ ನಡೆದಿದೆ.


 
ಕಳೆದ ವಾರ ಮುಂಬೈಯಲ್ಲಿ ಮಹಿಳೆಯೊಬ್ಬರ ದೇಹದ ಭಾಗಗಳು ಹಲವೆಡೆ ಪತ್ತೆಯಾದ ವರದಿಯಾಗಿತ್ತು. ಈ ಕೊಲೆ ರಹಸ್ಯ ಇದೀಗ ಬೆಳಕಿಗೆ ಬಂದಿದೆ. ಪ್ರಿಯಾಂಕ (24) ಕೊಲೆಯಾದಾಕೆ. ಆಕೆಯ ತಲೆಯ ಭಾಗ ನಾಶಿಕ್ ಬಳಿಯ ಕಾಡಿನಲ್ಲಿ ಪತ್ತೆಯಾಗಿದೆ.
 
ಪತಿ ಗೌರವ್ ಮತ್ತು ಆತನ ಮನೆಯವರು ಹಾಗೂ ಕೊಲೆ ನಡೆಸಿದ ಮೇಲೆ ದೇಹ ಸಾಗಿಸಲು ಸಹಾಯ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ. ಇಷ್ಟವಿಲ್ಲದ ಮದುವೆ ಮಾಡಿಸಿದ್ದಕ್ಕೆ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
 
ಕೊಲೆ ಮಾಡಿದ ಮೇಲೆ ಸಾಕ್ಷ್ಯ ನಾಶ ಮಾಡಲು ಸಹಾಯ ಮಾಡಿದ ಆರೋಪಿಯ ಹೆತ್ತವರನ್ನೂ ಬಂಧಿಸಲಾಗಿದೆ. ಮೃತದೇಹ ಸಾಗಿಸಲು ಸಹಾಯ ಮಾಡಿದವರಲ್ಲೊಬ್ಬಾತನನ್ನು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಾಕ್ ಮೇಲೆ ಮತ್ತೊಂದು ದಾಳಿಯ ಸೂಚನೆ ಕೊಟ್ಟ ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಸೈನಿಕರ ಮೇಲೆ ಪಾಕ್ ಬೆಂಬಲಿತ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ...

news

ಪಿ. ಚಿದಂಬರಂಗೆ ಬೆಳ್ಳಂ ಬೆಳಿಗ್ಗೆ ಸಿಬಿಐ ಶಾಕ್

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಪುತ್ರ ಕಾರ್ತಿ ಅವರ ನಿವಾಸಗಳ ಮೇಲೆ ಇಂದು ಬೆಳಿಗ್ಗೆ ...

news

60 ಶೇಕಡಾ ಮಂದಿಗೆ ಮಾತ್ರ ಮೋದಿ ಸರ್ಕಾರ ಮೋಡಿ ಮಾಡಿದೆಯಂತೆ

ನವದೆಹಲಿ: ಅಚ್ಚೇ ದಿನ್ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ...

news

ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅರೆಸ್ಟ್

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರನ್ನು ...

Widgets Magazine