ಪತ್ನಿಯನ್ನು ಕೊಂದು ಜಿಲ್ಲಾಸ್ಪತ್ರೆಗೆ ಸಾಗಿಸಿ ಪರಾರಿಯಾದ ಪತಿ!

ಯಾದಗಿರಿ, ಮಂಗಳವಾರ, 5 ಡಿಸೆಂಬರ್ 2017 (14:18 IST)

ಪತ್ನಿಯನ್ನು ಕೊಲೆ ಮಾಡಿದ ಪತಿಯೇ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
 
ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದ ವೆಂಕಟೇಶ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ. ಬೆಂಗಳೂರಿನ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತ ಶಾಂತಮ್ಮ ಹಾಗೂ ವೆಂಕಟೇಶ ಮಧ್ಯೆ ಪ್ರೇಮಾಂಕುರವಾಗಿತ್ತು. ವೆಂಕಟೇಶ ಇದಕ್ಕೆ ಮೊದಲೇ ಮದುವೆಯಾಗಿದ್ದು ಮೂವರು ಮಕ್ಕಳು ಕೂಡ ಇದ್ದರು. ಆದರೂ, ಶಾಂತಮ್ಮಳನ್ನು ಮೇ ತಿಂಗಳಲ್ಲಿ ಮದುವೆ ಮಾಡಿಕೊಂಡಿದ್ದನು.

ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದ್ದು, ಸೋಮವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ಇದೇ ಸಂದರ್ಭದಲ್ಲಿ ಶಾಂತಮ್ಮಳನ್ನು ಕೊಲೆ ಮಾಡಿ, ಶವವನ್ನು ಬೈಕ್‍‍ ಮೇಲೆ ಹೊತ್ತು ತಂದು ಜಿಲ್ಲಾಸ್ಪತ್ರೆಯಲ್ಲಿ ಹಾಕಿ ಪರಾರಿಯಾಗಿದ್ದಾನೆ. ಇದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
 
ಹಣದ ಆಸೆಗಾಗಿ ಶಾಂತಮ್ಮಳನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ, ಪರಮೇಶ್ವರ್ ಬ್ರದರ್ಸ್, ಭಿನ್ನಾಭಿಪ್ರಾಯವಿಲ್ಲ: ಕೆ.ಸಿ.ವೇಣುಗೋಪಾಲ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಧ್ಯೆ ಮನಸ್ತಾಪವಿದೆ ಎನ್ನುವ ...

news

ಬಿಎಸ್‌ವೈಗೆ ಬರೀ ಸುಳ್ಳಿನ ಹಾವು ಬಿಡುವುದೇ ಕಾಯಕ: ಸಚಿವ ಪಾಟೀಲ್

ವಿಜಯಪುರ: ಪ್ರಧಾನಿ ಮೋದಿ ಕಾಲಿಗೆ ಬಿದ್ದು ಮಹಾದಾಯಿ ಸಮಸ್ಯೆ ಬಗೆಹರಿಸ್ತೇನೆ ಎಂದಿದ್ದ ಬಿಜೆಪಿ ...

news

ಅನೈತಿಕ ಸಂಬಂಧ: ಪತಿಗೆ ಪತ್ನಿ ಮಾಡಿದ್ದು ನೋಡಿದ್ರೆ ಬೆಚ್ಚಿ ಬೀಳುವುದು ಖಚಿತ

ಮಧುರೈ: ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಆಕ್ರೋಶದಿಂದ ಪತ್ನಿ ಆತನ ಗುಪ್ತಾಂಗದ ಮೇಲೆ ...

news

ಗೌರಿ ಲಂಕೇಶ್ ಹತ್ಯೆಗೆ ಇಂದು 3 ತಿಂಗಳು

ಬೆಂಗಳೂರು: ಖ್ಯಾತ ಪ್ರತಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಇಂದಿಗೆ ಮೂರು ತಿಂಗಳುಗಳು ಕಳೆದಿದೆ. ...

Widgets Magazine