ಜಗತ್ತಿನ ಅತೀ ಶ್ರೀಮಂತರ ಪಟ್ಟಿ ಬಿಡುಗಡೆ: ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ ಸಿಇಓ

ವಾಷಿಂಗ್ಟನ್, ಶುಕ್ರವಾರ, 28 ಜುಲೈ 2017 (01:48 IST)

Widgets Magazine

ವಾಷಿಂಗ್ಟನ್: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್  ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿರುವ ಇ-ಕಾಮರ್ಸ್ ದಿಗ್ಗಜ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
 
ಗುರುವಾರ ಮಾರುಕಟ್ಟೆ ಆರಂಭದಲ್ಲಿ ಅಮೆಜಾನ್ ಷೇರು ಬೆಲೆಗಳು ಶೇ.1.6ರಷ್ಟು ಏರಿಕೆಯಾಗಿದ್ದು ಜೆಫ್ ಬೆಜೋಸ್ ಗೆ ಹೆಚ್ಚುವರಿಯಾಗಿ 1.4 ಶತಕೋಟಿ ಡಾಲರ್ ಗಳ ಅದೃಷ್ಟ ಒಲಿಯಿತು. ಇದರಿಂದ ಅವರ ಸಂಪತ್ತು 90 ಶತಕೋಟಿ ಡಾಲರ್ ಗಳನ್ನು ಮೀರಿತು ಎಂದು ಬ್ಲೂಮ್ ಬರ್ಗ್ , ಫೋರ್ಬ್ಸ್ ವರದಿ ಮಾಡಿದೆ.
 
ಕೇವಲ ಒಂದು ದಿನದ ಮಾರುಕಟ್ಟೆ ಷೇಋಗಳ ವ್ಯತ್ಯಾಸದಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಹಿಂದಿಕ್ಕಿದ್ದಾರೆ.  ಅಂದರೆ ಬುಧವಾರ ಷೇರು ಮಾರುಕಟ್ಟೆ ಕೊನೆಯಾಗುವ ವೇಳೆಗೆ ಬಿಲ್ ಗೇಟ್ಸ್ ಸಂಪತ್ತು 90 ಶತಕೋಟಿ ಡಾಲರ್ ನಷ್ಟಿತ್ತು. ಅವರಿಗೆ ಹತ್ತಿರವಾಗಿ 89 ಶತಕೋಟಿ ಡಾಲರ್ ವರೆಗೂ ಬೆಜೋಸ್ ಹೋಗಿದ್ದರು. ಆದರೆ ಗುರುವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಅಮೆಜಾನ್ ಷೇರುಗಳು ಏರಿಕೆಯಾಗಿದ್ದು, ಬಿಲ್ ಗೇಟ್ಸ್ ಸಂಪತ್ತನ್ನು ಮೀರಿದ ಬೆಜೋಸ್ 90 ಶತ ಕೋಟಿ ಡಾಲರ್ ಸೂಚ್ಯಂಕವನ್ನು ತಲುಪಿದರು.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಗತ್ತಿನ ಅತೀ ಶ್ರೀಮಂತ ಅಮೆಜಾನ್ ಸಿಇಓ ಜೆಫ್ ಬೇಜೋಸ್ Jeff Bezos Amazon Founder World's New Richest Man

Widgets Magazine

ಸುದ್ದಿಗಳು

news

5 ಕೋಟಿ ಲಂಚ: ಶಾಸಕ ಖೂಬಾ ವಿರುದ್ಧ ಎಫ್‌ಐಆರ್ ದಾಖಲು

ಬಸವಕಲ್ಯಾಣ: ರಾಜ್ಯ ಸಭೆ ಚುನಾವಣೆಯ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ...

news

ಆಘಾತಕಾರಿ! ನರ್ಸರಿ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಚಾಲಕ

ನವದೆಹಲಿ: ನರ್ಸರಿ ಓದುತ್ತಿದ್ದ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ವ್ಯಾನ್‌ ಚಾಲಕನನ್ನು ...

news

ಲಾಲು ಯಾದವ್ ಮೇಲೆ ಬಿತ್ತು ಮತ್ತೊಂದು ಇಡಿ ಕೇಸ್

ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಮಹಾಮೈತ್ರಿಕೂಟಕ್ಕೆ ಕೈಕೊಟ್ಟು ಎನ್‌ಡಿಎ ತೆಕ್ಕೆಗೆ ...

news

ಧರ್ಮಸಿಂಗ್ ಅಂತ್ಯಸಂಸ್ಕಾರ: ಜೇವರ್ಗಿಯಲ್ಲಿ ಭಾರಿ ಪ್ರತಿಭಟನೆ

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರವನ್ನು ಕಲಬುರಗಿಯ ನಾಗನಹಳ್ಳಿಯಲ್ಲಿ ನೆರವೇರಿಸಲು ...

Widgets Magazine