ಹೇಗಿದೆ ನೋಡಿ ಈ ವ್ಯಕ್ತಿ ಫೇಸ್ ಬುಕ್ ಲೈಕ್ ಹುಚ್ಚಾಟ

ಲಂಡನ್, ಭಾನುವಾರ, 25 ಜೂನ್ 2017 (15:26 IST)

ಲಂಡನ್:ಇಲ್ಲೊಬ್ಬ ವ್ಯಕ್ತಿ 2 ವರ್ಷದ ಮಗುವನ್ನು ಎತ್ತರವಾದ ಮಹಡಿಯಿಂದ ಕೆಳಗೆ ತಳ್ಳುವ ಪೋಸ್ ನೀಡಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಸಾಲದ್ದಕ್ಕೆ 1000 ಲೈಕ್ ಗಳು ಬಾರದಿದ್ದಲ್ಲಿ ಈ ಮಗುವನ್ನು  ಕಟ್ಟಡದ 15ನೇ ಮಹಡಿಯಿಂದ ತಳ್ಳುವುದಾಗಿ ಬೇರೆ ಬೆದರಿಕೆ ಹಾಕಿದ್ದಾನೆ ಭೂಪ.
 
ಕಟ್ಟಡದ 15ನೇ ಮಹಡಿಗೆ ಮಗುವನ್ನು ಎತ್ತಿಕೊಂದು ಹೋದ ವ್ಯಕ್ತಿ ಅದರ ಟೀಶರ್ಟ್‌ನ ಕಾಲರ್‌ ಹಿಡಿದು, ಕೆಳಗೆ ಎಸೆಯುವ ಸ್ಥಿತಿಯಲ್ಲಿ ಫೋಟೋ ತೆಗೆದಿದ್ದಾನೆ. ನಂತರ ಆ ಫೋಟೋವನ್ನು ಫೇಸ್‌ಬುಕ್‌ಗೆ ಹಾಕಿ, "ಸಾವಿರ ಲೈಕ್‌ಗಳು ಬಾರದಿದ್ದರೆ ಮಗುವನ್ನು ಇಲ್ಲಿಂದ ಬಿಟ್ಟುಬಿಡುತ್ತೇನೆ,' ಎಂದು ಸಂದೇಶ ಕಳಿಸಿ ಫೇಸ್ ಬುಕ್ ನಲ್ಲಿ ತನ್ನ ಹುಚ್ಚಾಟ ಪ್ರದರ್ಶಿಸಿದ್ದಾನೆ. ತಕ್ಷಣ ಎಚ್ಚೆತ್ತ ಫೇಸ್‌ ಬುಕ್‌ ಬಳಕೆದಾರರು, ಈ ಬಗ್ಗೆ ಲಂಡನ್‌ ಪೊಲೀಸರಿಗೆ ದೂರು ನೀಡಿದ್ದಾರೆ. 
 
ಕೂಡಲೇ ವ್ಯಕ್ತಿಯ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಲಯ ಆತನಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಂದಿ ಹೀಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ನಿಷೇಧ

ನಂದಿ ಹಿಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ಪ್ರವೇಶ ನಿಷೇಧಿಸಲಾಗಿದೆ.

news

ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್`ಗೆ ಜೆಡಿಎಸ್ ಬೆಂಬಲ

ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್`ಗೆ ಕುಮಾರಸ್ವಾಮಿ ಬೆಂಬಲ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ...

news

ಅಮೆರಿಕ ತಲುಪಿದ ಪ್ರಧಾನಿ ಮೋದಿ: ಕೆಂಪು ಹಾಸಿನ ಸ್ವಾಗತ

ಎರಡು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಷಿಂಗ್ಟನ್ ನಲ್ಲಿ ರೆಡ್ ...

news

ಅಸ್ಸಾಂನಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣ

ಗುವಾಗಟಿ: ಅಸ್ಸಾಂನಲ್ಲಿ ಭೀಕರ ನೆರೆ ಹಾವಳಿಯಿಂದಾಗಿ 87,500 ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ...

Widgets Magazine