Widgets Magazine
Widgets Magazine

ದರೋಡೆಗಿಳಿದ ಪಿಯುಸಿ ರಾಂಕ್ ಸ್ಟೂಡೆಂಟ್!

Mysore, ಗುರುವಾರ, 23 ಫೆಬ್ರವರಿ 2017 (12:09 IST)

Widgets Magazine

ಮೈಸೂರು: ಇಂದಿನ ಯುವ ಜನತೆ ಐಷಾರಾಮಿ ಜೀವನಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ. ದುಬಾರಿ ಹೆಡ್ ಫೋನ್ ಗಾಗಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಗೆಳೆಯರ ಜತೆ ದರೋಡೆಗಿಳಿದು ಸಿಕ್ಕಿಬಿದ್ದಿದ್ದಾನೆ.


 
ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸನತ್ ಕುಮಾರ್ ಈ ಕೃತ್ಯ ಎಸಗಿದಾತ. ಈತ ಆನ್ ಲೈನ್ ನಲ್ಲಿ 20 ಸಾವಿರ ಮೌಲ್ಯದ ಹೆಡ್ ಫೋನ್ ಖರೀದಿಸಿದ್ದ. ಇದನ್ನು ತಲುಪಿಸಲು ಬಂದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ ನಿರ್ಜನ ಪ್ರದೇಶಕ್ಕೆ ಕರೆ ತಂದು ಹೆಡ್ ಫೋನ್ ಕಿತ್ತು ಕೊಳ್ಳುವ ಯತ್ನ ನಡೆಸಿದ್ದಾನೆ.
 
ಇದಕ್ಕೆಲ್ಲಾ ಕುಮ್ಮಕ್ಕು ನೀಡಿದ ಆತನ ನಾಲ್ವರು ಸ್ನೇಹಿತರೂ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.  ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಾರ್ಚ್ 15ಕ್ಕೆ ರಾಜ್ಯ ಬಜೆಟ್

ಮಾರ್ಚ್ 15ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 15 ರಿಂದ ಮಾರ್ಚ್ 28ರ ವರಗೆ ಬಜೆಟ್ ಅಧಿವೇಶನ ...

news

ಉದ್ಯಮಿ ಕೆ.ಪಿ ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ದಾಖಲು

ಪ್ರತಿಷ್ಠಿತ ಉದ್ಯಮಿ, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮಾಲೀಕ ಕೆ.ಪಿ. ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ...

news

ಉತ್ತರ ಪ್ರದೇಶ ಚುನಾವಣೆ: ನಾಲ್ಕನೇ ಹಂತದ ಮತದಾನ ಆರಂಭ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಇಂದು ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದೆ.

news

ಬಳಲಿದ್ದೇನೆ.. ಟೇಬಲ್ ಫ್ಯಾನ್ ಕೊಡಿ: ಜೈಲ್ ನಲ್ಲಿ ಶಶಿಕಲಾ ಬೇಡಿಕೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ವಾಸ ಆರಂಭವಾಗಿ ಒಂದು ವಾರ ಕಳೆದಿದೆ. ಇದೀಗ ತಾನು ವಯೋಸಹಜವಾಗಿ ...

Widgets Magazine Widgets Magazine Widgets Magazine