ಮೊಹರಂ ಕೊನೆಯ ದಿನವಾದ ಇಂದು ಬೆಳಿಗ್ಗೆಹಿರೇದೇವರ ಪಂಜಾ ಮೆರವಣಿಗೆ ವೇಳೆ, ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಮೊಹರಂ ಪಂಜಾ ಮೆರವಣಿಗೆ ಮಾಡುವ ವೇಳೆಯಲ್ಲಿ, ವಿದ್ಯುತ್ ಅವಘಡ ಸಂಭವಿಸಿ ಹುಸೇನಸಾಬ ದೇವರಮನಿ (50) ಹಾಗೂ ಹುಲಿಗೆಮ್ಮ (18) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೆಳಗ್ಗೆ 4 ರಿಂದ 5 ಗಂಟೆಯಲ್ಲಿ ಹಿರೇದೇವರು ಸವಾರಿ ಮಾಡಿಸುವ ವೇಳೆ,