Widgets Magazine

ಭೂತ ಹಿಡಿದಿದೆ ಎಂದು ಯುವತಿಗೆ ಚಿತ್ರಹಿಂಸೆ ನೀಡಿದ ಸಂಬಂಧಿಕರು!

ಬೆಳಗಾವಿ| Hanumanthu.P| Last Modified ಶನಿವಾರ, 2 ಡಿಸೆಂಬರ್ 2017 (12:19 IST)
ಭೂತ ಹಿಡಿದಿದೆ ಎಂಬ ಕಾರಣಕ್ಕೆ ಯುವತಿ ಕೈಗೆ ಹಗ್ಗ ಕಟ್ಟಿ ಯುತಿಯನ್ನು ಮಾಂತ್ರಿಕನ ಬಳಿಗೆ ಸಂಬಂಧಿಕರು ಎಳೆದೊಯ್ದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಅಂಗೀರವಾಗಿದ್ದರೂ ಮೌಢ್ಯ ಆಚರಣೆ ಮಾತ್ರ ನಿಂತಿಲ್ಲ. ಯುವತಿಯ ಕೈಗೆ ಹಗ್ಗ ಕಟ್ಟಿ ದೈಹಿಕವಾಗಿ ಚಿತ್ರ ಹಿಂಸೆ ನೀಡಿ ಮಾಂತ್ರಿಕನ ಬಳಿಗೆ ಯುವತಿಯನ್ನು ಎಳೆದೊಯ್ದಿದ್ದಾರೆ.

ಪಟ್ಟಣ ಪ್ರದೇಶದ ರಸ್ತೆಯಲ್ಲಿ ಅಮಾನವೀಯವಾಗಿ ಯುವತಿಯನ್ನು ಸಂಬಂಧಿಕರು ಎಳೆದೊಯ್ದಿದ್ದಾರೆ. ಮೌಢ್ಯ ಆಚರಣೆ ಬಹಿರಂಗವಾಗಿ ನಡೆಯುತ್ತಿದ್ದರೂ ತಡೆಯಲು ಮಾತ್ರ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :