Widgets Magazine

ಶತಮಾನಗಳ ಹಿಂದಿನ ಬ್ರೈಟ್ ನೈಟ್ ರಹಸ್ಯ ಬೇಧಿಸಿದ ವಿಜ್ನಾನಿಗಳು

ಕೆನಡಾ, ಶನಿವಾರ, 24 ಜೂನ್ 2017 (20:19 IST)

Widgets Magazine

ಕೆನಡಾ:ವಿಜ್ನಾನಿಗಳು ಶತಮಾನಗಳ ಕಾಲದ ಬ್ರೈಟ್ ನೈಟ್ಸ್ ಕುರಿತಾದ ರಹಸ್ಯವನ್ನು ಬೇಧಿಸಿದ್ದಾರೆ. ಗಾಢವಾದ ಕತ್ತಲು ಆವರಿಸಿದ ಬಳಿಕ ಪರ್ವತಗಳ ಮಧ್ಯೆ ಗೋಚರಿಸುವ ಅಸಾಮಾನ್ಯ ಹೊಳಪು, ಈ ಪ್ರಕಾಶಮಾನವಾದ ಬೆಳಕಿಗೆ ಕಾರಣವೇನು ಎಂಬುದನ್ನು ವಿಜ್ನಾನಿಗಳು ಕಂಡುಹಿಡಿದಿದ್ದಾರೆ.
 
ಮೇಲಿನ ವಾಯುಮಂಡಲದಲ್ಲಿನ ಅಲೆಗಳು ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳಗಳ ಮೇಲೆ ಒಮ್ಮುಖವಾಗುವಾಗ, ನೈಸರ್ಗಿಕವಾಗಿ ಉಂಟಾಗುವ ಏರ್ ಗ್ಲೋ ಅನ್ನು ಹೆಚ್ಚಿಸುತ್ತದೆ, ವಾತಾವರಣದಲ್ಲಿ ಆಮ್ಲಜನಕದ ಪರಮಾಣುಗಳ ಚಟುವಟಿಕೆಗಳು ಹೆಚ್ಚಾಗಿ ಸಾಮಾನ್ಯವಾಗಿ ಹಸಿರು ಕಾಣುವ ಬೆಳಕು ರಾತ್ರಿ ಆಕಾಶದಲ್ಲಿ ಮಸುಕಾದ ಬೆಳಕನ್ನು ವರ್ಧಿಸುತ್ತದೆ ಈ ಬೆಳಕೆ ಬ್ರೈಟ್ ನೈಟ್ ಆಗಿ ಕಾಣುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಬ್ರೈಟ್ ನೈಟ್ಸ್ ನ್ನು ಬರಿಗಣ್ಣಿನಿಂದಲೂ ನೋಡಬಹುದಾಗಿದೆ. ಆದರೆ ಸಾಮಾನ್ಯ ಜನರು ಇದನ್ನು ಹೆಚ್ಚಾಗಿ ಗಮನಿಸುವುದಿಲ್ಲ.
 
ಬ್ರೈಟ್ ನೈಟ್ಸ್ ಬಗ್ಗೆ ಈ ಹಿಂದೆಯೂ ಉಲ್ಲೇಖಿಸಲಾಗಿದ್ದು,ಇದನ್ನು ಉಪಗ್ರಹ ಸಾಧನಗಳ ಮೂಲಕ ವೀಕ್ಷಿಸಬಹುದಾದ ಗಾಳಿಗೋಳದ ವ್ಯತ್ಯಾಸದ ಭಾಗವಾಗಿದೆ ಎಂದು ಕೆನಡಾದ ಟೊರೊಂಟೋದಲ್ಲಿನ ಯಾರ್ಕ್ ವಿಶ್ವವಿದ್ಯಾನಿಲಯದ ವಿಜ್ನಾನಿ ಗಾರ್ಡನ್ ಶೆಫರ್ಡ್ ಹೇಳುತ್ತಾರೆ. ಈ ಹಿಂದೆ ಬ್ರೈಟ್ ನೈಟ್ ಕುರಿತಾಗಿ ನಾಸಾದ ಸ್ಯಾಟಲೈಟ್ ಕೂಡ ಸಂಶೋಧನೆಯನ್ನು ಮಾಡಿತ್ತು. ಆದರೆ ಈ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು.
 
ಆದರೀಗ ಅಂತಿಮವಾಗಿ ಆಧುನಿಕ ವಿಜ್ನಾನಿಗಳು ಈ ಕುರಿತು ವಿವರಣೆಗಳನ್ನು ನೀಡಿದ್ದು, ವಾಯುಮಂಡಲದಲ್ಲಿನ ಅಲೆಗಳು ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳಗಳ ಮೇಲೆ ಒಮ್ಮುಖವಾಗುವಾಗ, ಉಂಟಾಗುವ ಏರ್ ಗ್ಲೋ ಅನ್ನು ಹೆಚ್ಚಿಸುತ್ತದೆ, ವಾತಾವರಣದಲ್ಲಿ ಆಮ್ಲಜನಕದ ಚಟುವಟಿಕೆ ಹೆಚ್ಚಾಗಿ ಬೆಳಕನ್ನು ವರ್ಧಿಸುತ್ತದೆ. ಇದೇ ಬ್ರೈಟ್ ನೈಟ್ ಆಗಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.
 
 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ್

ವಿಜಯಪುರ: ಮುಂದೆ ನನಗೆ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆಯಿದೆ. ಆದರೆ ದುರಾಸೆಯಿಲ್ಲ ಎಂದು ಜಲಸಂಪನ್ಮೂಲ ...

news

ಡಿ ಹೆಚ್ ಶಂಕರ ಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಆರ್.ಟಿ.ಐ ಕಾರ್ಯಕರ್ತ ಹನುಮೇಗೌಡ ಎಂಬುವರು ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು ...

news

ಅತ್ಯಾಚಾರವೆಸಗಿದ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ವಿಷಸೇವಿಸಿದ ಯುವತಿ

ಬೆಳಗಾವಿ: ಅತ್ಯಾಚಾರವೆಸಗಿದ ಯುವಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಯುವತಿಯೊಬ್ಬಳು ...

news

ರೈತರ ಸಾಲ ಮನ್ನಾ ಸಂಬಂಧ ಯಾವುದೇ ಷರತ್ತು ವಿಧಿಸಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ರೈತರ ಸಾಲ ಮನ್ನಾಗೆ 14 ಷರತ್ತುಗಳನ್ನು ವಿಧಿಸಲಾಗಿದೆ ಎನ್ನುವದನ್ನು ಸಿಎಂ ಸಿದ್ದರಾಮಯ್ಯ ...

Widgets Magazine Widgets Magazine