ಉಪ್ಪಿಟ್ಟು ರಾಷ್ಟ್ರೀಯ ತಿಂಡಿ ಆಗತ್ತಾ.. ನೀವೇನಂತೀರಾ?

ಬೆಂಗಳೂರು, ಶುಕ್ರವಾರ, 23 ಜೂನ್ 2017 (11:12 IST)

ಬೆಂಗಳೂರು: ಉಪ್ಪಿಟ್ಟು ಎಂದ ತಕ್ಷಣ ಕೆಲವರು ಮೂಗು ಮುರಿಯುತ್ತಾರೆ. ಇನ್ನು ಕೆಲವರಿಗೆ ಬಾಯಲ್ಲಿ ನೀರು. ಹಲವರು ಜೀವನ ಸಾಗಿಸಲು ಉಪ್ಪಿಟ್ಟೆ ಸರ್ವಸ್ವ.. ಈಗ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಚರ್ಚೆಗಳು ಆಂಭವಾಗಿವೆ.
 
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.
 
ಈ ಚರ್ಚೆಗೆ  ಮೂಲ ಕಾರಣ ಇತ್ತೀಚೆಗೆ  ಪತ್ರಿಕೆಯೊಂದು ತಮಿಳು ಸಿನಿಮಾ ನಿರ್ದೇಶಕ ರಾಧಕೃಷ್ಣನ್‌ ಪರ್ತಿಬನ್‌ ಅವರ ಸಂದರ್ಶನ ನಡೆಸಿತ್ತು.  ‘ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ   ಕೈಯಲ್ಲಿ ಹಣ ಇರುತ್ತಿರಲಿಲ್ಲ, ಹಾಗಾಗಿ ನಿತ್ಯವು ಉಪ್ಪಿಟ್ಟು ತಿಂದು ಜೀವನ ಸಾಗಿಸಬೇಕಾಗಿತ್ತು.  ಇಂದು ಕೂಡ ಸಾಕಷ್ಟು  ಜನ ಸಹ ನಿರ್ದೇಶಕರು ಉಪ್ಪಿಟ್ಟಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂದು ತಮಾಷೆ ಮಾಡಿದ್ದಾರೆ. ಅಂದಿನಿಂದ ಶುರುವಾಯಿತು ನೋಡಿ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕು ಎಂದು..   ಈಗ ಉಪ್ಮಾ ಎಂದರೆ ಉಪ್ಪಿಟ್ಟು ಎಂಬ ಅಭಿಯಾನವೇ ಆರಂಭವಾಗಿದೆ ಕಣ್ರಿ.
 ಇದರಲ್ಲಿ ಇನ್ನಷ್ಟು ಓದಿ :  
Upma Declared Jokes Director Parthiban National Dish Bharat Upma Ki Jai

ಸುದ್ದಿಗಳು

news

ಜಾಧವ್ ತಪ್ಪೊಪ್ಪಿಗೆ ವಿಡಿಯೋ ಪಾಕ್ ನ ಕೃತಕ ಸೃಷ್ಟಿ: ಭಾರತ ಆಕ್ರೋಶ

ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದಾರೆಂದು ...

news

ಪೊಲೀಸ್ ಅಧಿಕಾರಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆ..!

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೊಲೀಸ್ ಅಧಿಕಾರಿಯನ್ನ ಉದ್ರಿಕ್ತ ಗುಂಪೊಂದು ಹೊಡೆದು ...

news

ಕ್ಷಯ ರೋಗಿಗಳಿಗೂ ಇನ್ನು ಆಧಾರ್ ಕಡ್ಡಾಯ!

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಸರ್ಕಾರ ಸಿಕ್ಕಿದ್ದಕ್ಕೆಲ್ಲಾ ಆಧಾರ್ ಕಡ್ಡಾಯ ಮಾಡುತ್ತಿದೆ. ಈ ಆಧಾರ್ ...

news

ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್!

ಚೆನ್ನೈ: ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಹಲವು ದಿನಗಳಿಂದ ಸುದ್ದಿಗಳು ಕೇಳಿಬರುತ್ತಲೇ ಇವೆ. ಈ ಬಗ್ಗೆ ...

Widgets Magazine