ಜಾಲಿ ರೈಡ್ ಮಾಡಲು ಹೋಗಿ ಪತ್ನಿಯೇ ಪತಿಯ ಜೀವಕ್ಕೆ ಕುತ್ತು ತಂದಳು!

Munnar, ಭಾನುವಾರ, 30 ಏಪ್ರಿಲ್ 2017 (12:07 IST)

ಮುನ್ನಾರ್: ಬೇಸಿಗೆ ರಜಾ ಮಜಾ ಮಾಡಲು ಸಂಸಾರ ಸಮೇತ ಹೋಗಿದ್ದ ಕುಟುಂಬ ಈಗ ದುಃಖದ ಮಡುವಿನಲ್ಲಿದೆ. ಪತ್ನಿಯ ಅಚಾತುರ್ಯದಿಂದಾಗಿ ಮುಂದೆ ಸೈಕಲ್ ನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಪತಿ ಪ್ರಾಣ ಕಳೆದುಕೊಂಡ ಘಟನೆ ಕೇರಳದ ಮುನ್ನಾರ್ ನಲ್ಲಿ ನಡೆದಿದೆ.


 
ಬೆಂಗಳೂರು ಮೂಲದ ಮಲಯಾಳಿ ಅಶೋಕ್ ಸುಕುಮಾರನ್ ನಾಯರ್ ತೀರಿಕೊಂಡ ದುರ್ದೈವಿ. ಸಂಸಾರ ಸಮೇತ ಮುನ್ನಾರ್ ಪ್ರವಾಸಕ್ಕೆಂದು ಬಂದಿದ್ದ ದಂಪತಿ ಸುತ್ತಾಡಲು ಹೊರಟಿದ್ದಾರೆ. ಈ ವೇಳೆ ಸೈಕಲ್ ಪ್ರಿಯನಾದ ಪತಿ ಸೈಕಲ್ ನಲ್ಲಿ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ಪತ್ನಿ ರಶ್ಮಿ ಕಾರು ಚಲಾಯಿಸಿಕೊಂಡು ಮಕ್ಕಳೊಡನೆ ಹಿಂಬಾಲಿಸುತ್ತಿದ್ದಳು.
 
ಈ ವೇಳೆ ಮಕ್ಕಳು ತುಂಟಾಟ ಮಾಡಿದರೆಂದು, ಪತ್ನಿ ಕಾರಿನ ಸ್ಟಿರಿಯೋ ಧ್ವನಿ ಹೊಂದಿಸುತ್ತಿದ್ದಾಗ ಸಮತೋಲನ ತಪ್ಪಿ ಮುಂದೆ ಸೈಕಲ್ ನಲ್ಲಿ ಚಲಿಸುತ್ತಿದ್ದ ಪತಿಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಅಶೋಕ್ ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.
 
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮೂಗಿನಿಂದ ತೀವ್ರ ರಕ್ತ ಸ್ರಾವವಾಗುತ್ತಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಪತ್ನಿ ಸಂಪೂರ್ಣ ಶಾಕ್ ಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗುವಿನ ಕಿಡ್ನ್ಯಾಪ್ ನಡೆದಿದೆ. ನಿನ್ನೆ ಮಧ್ಯಾಹ್ನ ಸಿದ್ಧಾಪುರದ ...

news

ಇವಿಎಂ ಎಂದರೆ Every Vote Modi: ಯೋಗಿ ಆದಿತ್ಯಾನಾಥ್

ಸಿಎಂ ಆಗುವುದಕ್ಕೂ ಮೊದಲಿನಿಂದಲೂ ವಿಚಿತ್ರ ಹೇಳಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಉತ್ತರಪ್ರದೇಶ ಸಿಎಂ ಯೋಗಿ ...

news

ಗೋವಾ, ಕರ್ನಾಟಕ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್ ಗೆ ಕೊಕ್

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗೆ ಪಕ್ಷ ಶಾಕ್ ಕೊಟ್ಟಿದೆ. ಕರ್ನಾಟಕ ಮತ್ತು ಗೋವಾ ...

news

ದೆಹಲಿ ಶಾಸಕರಿಗೆ ಕೇಜ್ರಿವಾಲ್ ಸಿಎಂ ರಾಜೀನಾಮೆ ಬೇಕಂತೆ!

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ...

Widgets Magazine