Widgets Magazine
Widgets Magazine

ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು 20 ಅಡಿಯಿಂದ ಜಿಗಿದಳು!

NewDelhi, ಮಂಗಳವಾರ, 14 ಮಾರ್ಚ್ 2017 (12:10 IST)

Widgets Magazine

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಘೋರ ಪ್ರಕರಣ ದಾಖಲಾಗಿದೆ. ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮಹಿಳೆ 20 ಅಡಿ ಎತ್ತರದಿಂದ ಜಿಗಿಯುವ ಸಾಹಸ ಮಾಡಿದ್ದಾಳೆ.


 
ಆಕೆ ಇಬ್ಬರು ಮಕ್ಕಳ ತಾಯಿ. ಅತ್ಯಾಚಾರಿಗಳಲ್ಲೊಬ್ಬಾತ ವಿಕಾಸ್ ಆಕೆಯ ಪರಿಚಯದವನೇ. ಈ ಕಾರಣಕ್ಕೆ ಕಚೇರಿ ಮುಗಿಸಿ ಮನೆಗೆ ಬರುವಾಗ ಆತನ ಆಹ್ವಾನಕ್ಕೆ ಮಣಿದು ಕಾರು ಏರಿದ್ದಳು. ದಾರಿ ಮಧ್ಯೆ ಇನ್ನಿಬ್ಬರು ಆರೋಪಿಗಳೂ ಸೇರಿಕೊಂಡರು.
 
ಮೂವರು ಸೇರಿಕೊಂಡು ಮಹಿಳೆಯನ್ನು ತಮ್ಮ ಅಪಾರ್ಟ್ ಮೆಂಟ್ ಗೆ ಕರೆದೊಯ್ದರು. ಅಲ್ಲಿ ಇನ್ನಿಬ್ಬರು ಆರೋಪಿಗಳೂ ಇದ್ದರು. ಫ್ಲ್ಯಾಟ್ ಗೆ ಕರೆದುಕೊಂಡು ಹೋದ ಮೇಲೆ ಬಲವಂತವಾಗಿ ಮದ್ಯಪಾನ ಮಾಡಿಸಿದ ಆರೋಪಿಗಳು ರಾತ್ರಿಯಿಂದ ಬೆಳಗಿನವರೆಗೆ ನಿರಂತರ ಅತ್ಯಾಚಾರವೆಸಗಿದರು.
 
ಬೆಳಗಿನ ಜಾವ, ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಫ್ಲ್ಯಾಟ್ ನ ಬಾಲ್ಕನಿಯಿಂದ ಜಿಗಿದ ಮಹಿಳೆ ಬೆತ್ತಲಾಗಿ ಸಹಾಯಕ್ಕಾಗಿ ಅಂಗಲಾಚುತ್ತಾ ರಸ್ತೆಯಲ್ಲೇ ಓಡಿದ್ದಳು. ಕೊನೆಗೂ ಪಾದಚಾರಿಯೊಬ್ಬರು ಪೊಲೀಸರಿಗೆ ದೂರು ನೀಡಿ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಇದೀಗ ಪೊಲೀಸರು ಎಲ್ಲಾ ಐವರು ಆರೋಪಿಗಳನ್ನೂ ಸೆರೆ ಹಿಡಿದ್ದಾರೆ. ಇವರೆಲ್ಲಾ ಸ್ಥಳೀಯ ಕಾಲ್ ಸೆಂಟರ್ ಗಳ ಉದ್ಯೋಗಿಗಳು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೋವಾ ಸರ್ಕಾರ ರಚನೆ ಬಿಕ್ಕಟ್ಟು: ಕಾಂಗ್ರೆಸ್ ಗೆ ಮುಖಭಂಗ

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಸ್ಥಾನ ಹೊಂದಿದ್ದರೂ, ತಮಗೆ ಸರ್ಕಾರ ...

news

40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ ಟೋಲ್ ಅಧಿಕಾರಿ!

ಉಡುಪಿ: ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಡಿಜಿಟಲ್ ಇಂಡಿಯಾದ ...

news

ಇಂದೇ ರೈತರ ಖಾತೆಗಳಿಗೆ ಬರ ಪರಿಹಾರದ ಹಣ.. ಸಿಎಂ ಟ್ವೀಟ್

ರಾಜ್ಯಾದ್ಯಂತ ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಬರದಿಂದ ...

news

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು: ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ...

Widgets Magazine Widgets Magazine Widgets Magazine