ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಮಗು- ಸಿಹಿ ಹಂಚಿ ಸಂಭ್ರಮಿಸಿದ ಜನರು

ಮೈಸೂರು, ಗುರುವಾರ, 7 ಡಿಸೆಂಬರ್ 2017 (16:16 IST)

ಮೈಸೂರಿನ ಮಹಾರಾಜ ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು, ಪ್ರವಾಸಿಗರಿಗೆ ಸಿಹಿ ಹಂಚುವ ಮೂಲಕ ಜನರು ಸಂಭ್ರಮಿಸಿದ್ದಾರೆ.

ದಶಕಗಳಿಂದ ಯದುವಂಶದಲ್ಲಿ ಮಕ್ಕಳಾಗಿಲ್ಲ ಎಂಬ ಗುಂಗಿನಲ್ಲಿದ್ದ ಜನ, ಸೋಮವಾರ ಯುವರಾಜನ ಜನನವಾದ ಸುದ್ದಿ ಕೇಳಿ ಸಂಭ್ರಮ ಪಟ್ಟಿದ್ದಾರೆ. ಪಟಾಕಿಗಳನ್ನು ಸಿಡಿಸಿ, ಮೈಸೂರು ಪಾಕ್ ಹಂಚುವ ಮೂಲಕ ಯುವರಾಜನ ಜನನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅರಮನೆಯ ದ್ವಾರದ ಎದುರು, ಕೆ.ಆರ್.ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಯದುವೀರ್ ಹಾಗೂ ತ್ರಿಷಿಕಾ ಅವರಿಗೆ ಶುಭ ಕೋರಿದರು. 
 
ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್‌ನಿಂದ ಮಿಷನ್ 170, ಬಿಜೆಪಿಯಿಂದ ಮಿಷನ್ 150, ಕಾಂಗ್ರೆಸ್?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯುವತ್ತ ರಣತಂತ್ರ ...

news

ಕಳ್ಳನ ಕೈಚಳಕಕ್ಕೆ ದಕ್ಕಿದ್ದು ಲಕ್ಷ ಲಕ್ಷ ರೂಪಾಯಿ!

ಬೆಂಗಳೂರು: ಪೊಲೀಸರು ಎಷ್ಟೇ ಶಿಕ್ಷೆ ಕೊಟ್ಟರು, ದುಡ್ಡಿದ್ದವರು ಎಷ್ಟೇ ಜಾಗೃತೆ ವಹಿಸಿದರು ಕಳ್ಳರು ಮಾತ್ರ ...

news

ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ಕೋಲಾರ: ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ...

news

ಯುವತಿಯ ಮನೆ ಬಾಗಿಲಿಗೆ ಬಂದು ಲೈಂಗಿಕ ಕಿರುಕುಳ ನೀಡಿದ ಭೂಪ

ಬೆಂಗಳೂರು: ಯುವತಿಯರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕೇಳಿರುತ್ತೇವೆ. ...

Widgets Magazine
Widgets Magazine