ಮೈಸೂರು ದಸರಾ; ವಾಟರ್‌ ಜೆಟ್‌ನಿಂದ ಕೆರೆಗೆ ಬಿದ್ದ ಸಚಿವ!

ಮೈಸೂರು, ಗುರುವಾರ, 29 ಸೆಪ್ಟಂಬರ್ 2011 (16:55 IST)

Widgets Magazine

ದಸರಾ ಅಂಗವಾಗಿ ಇಲ್ಲಿನ ವರುಣಾ ಕೆರೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ಅವರು ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ ವಾಟರ್ ಜೆಟ್‌ನಿಂದ ನೀರಿಗೆ ಬಿದ್ದ ಪ್ರಸಂಗ ಗುರುವಾರ ನಡೆಯಿತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

401ನೇ ದಸರಾ ಮಹೋತ್ಸವದ ಎರಡನೇ ದಿನವಾದ ಇಂದು ವರುಣಾ ಕೆರೆಯಲ್ಲಿ ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ಕೊಡುವಂತೆ ಸಚಿವ ರಾಜೂ ಗೌಡ ಅವರಿಗೆ ಆಹ್ವಾನ ನೀಡಲಾಗಿತ್ತು.

ಅದರಂತೆ ಸಚಿವರಾದ ರಾಮದಾಸ್, ರಾಜೂ ಗೌಡ ವರುಣಾ ಕೆರೆಯಲ್ಲಿ ವಾಟರ್ ಜೆಟ್‌ನಲ್ಲಿ ಭರ್ಜರಿಯಾಗಿ ಪೋಸ್ ನೀಡಿ ಸವಾರಿ ನಡೆಸಿದರು. ರಾಜೂ ಗೌಡ ಅವರ ಬೆನ್ನಹಿಂದೆ ವಾಟರ್ ಜೆಟ್‌ನ ತರಬೇತುಗಾರ್ತಿ ಯುವತಿ ಕೂಡ ಇದ್ದಿದ್ದಳು. ಈ ಜೋಶ್‌ನಲ್ಲಿ ಸಚಿವರು ವಾಟರ್ ಜೆಟ್ ಅನ್ನು ಜೋರಾಗಿಯೇ ಓಡಿಸಿದ್ದರು.

ಇನ್ನೇನು ದಡ ಸೇರುತ್ತಾರೆ ಎಂಬಷ್ಟರಲ್ಲಿ ಮಧ್ಯ ಕೆರೆಯಲ್ಲಿಯೇ ವಾಟರ್ ಜೆಟ್ ಪಲ್ಟಿ ಹೊಡೆದ ಪರಿಣಾಮ ಸಚಿವ ರಾಜೂ ಗೌಡ, ತರಬೇತುಗಾರ್ತಿ ಕೆರೆಗೆ ಬಿದ್ದು ಬಿಟ್ಟರು. ಆದರೆ ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯವಾಗಿರಲಿಲ್ಲ. ಅಷ್ಟರಲ್ಲಿಯೇ ರಾಜೂ ಗೌಡ ಈಜಿ ಸುರಕ್ಷಿತವಾಗಿ ದಡ ಸೇರಿದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ದಸರಾ-ನವರಾತ್ರಿ

ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು

ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ಮೈಸೂರು ದಸರಾ ಸಂಭ್ರಮದ ...

ಶಕ್ತಿದೇವತೆಯಿಂದ ಶಕ್ತಿ ಬೇಡುವ ಹಬ್ಬ

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ...

ನೋಡ ಬನ್ನಿ ಮೈಸೂರು ದಸರಾ...

ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ...

ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ...

Widgets Magazine