Widgets Magazine Widgets Magazine

ಮೈಸೂರು; ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ

ಮೈಸೂರು, ಗುರುವಾರ, 6 ಅಕ್ಟೋಬರ್ 2011 (13:25 IST)

Widgets Magazine

Mysore jamboo savari
WD
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಪ್ರಯುಕ್ತ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54 ಧನುರ್ ಲಗ್ನ ಶುಭ ಮಹೂರ್ತದಲ್ಲಿ ಚಾಲನೆ ನೀಡಲಾಯಿತು, ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.

ಬೆಳಗ್ಗೆ ಬೆಳ್ಳಿರಥದ ಮೂಲಕ ಆಗಮಿಸಿದ ಒಡೆಯರ್ ಸಂಪ್ರಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಈ ಪೂಜೆಯ ನಂತರ ಇಂದು ಮೈಸೂರು ಒಡೆಯರ್ ಅವರ ಅಂಬಾವಿಲಾಸ ಅರಮನೆಯಲ್ಲಿನ ಖಾಸಗಿ ದರ್ಬಾರ್ ಅಂತ್ಯಗೊಳ್ಳಲಿದೆ.

13ನೇ ಬಾರಿ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಗಜರಾಜ ಬಲರಾಮ. ಈ ಸಂದರ್ಭದಲ್ಲಿ ಬಲರಾಮನಿಗೆ ಶ್ರೀರಾಮ, ಅರ್ಜುನ, ಅಭಿಮನ್ಯ, ಹರ್ಷ, ಗೋಪಿ, ವಿಕ್ರಮ್, ಕೋಕಿಲಾ, ಕಾಂತಿ, ಕಾವೇರಿ ಸೇರಿದಂತೆ 12 ಆನೆಗಳು ಸಾಥ್ ನೀಡಿದವು.

ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54ಕ್ಕೆ ಚಾಲನೆ ನೀಡಲಾಯಿತು. ಜಂಬೂ ಸವಾರಿಯ ವಿಶೇಷ ಆಕರ್ಷಣೆ ಎಂದರೆ ಅಂಬಾರಿ ಮತ್ತು ಸ್ತಬ್ದ ಚಿತ್ರಗಳು. 750 ಕೆ.ಜಿ ರತ್ನ ಖಚಿತ ಚಿನ್ನದ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿ ದೇವಿಯನ್ನು ಕೂರಿಸಿ ಗಜರಾಜ ಬಲರಾಮ ಸಾಗುತ್ತಿದ್ದಂತೆಯೇ ಸೇರಿದ್ದ ಜನರು ಹರ್ಷೋದ್ಘಾರದೊಂದಿಗೆ ವೀಕ್ಷಿಸಿ ಪುಳಕಿತರಾದರು.

ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಒಟ್ಟು 34 ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಮೈಸೂರು ಪೇಟ ತೊಟ್ಟಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಡಾಟಿ, ಮೈಸೂರು ಮೇಯರ್ ಪುಷ್ಪಲತಾ, ಉಸ್ತುವಾರಿ ಸಚಿವ ರಾಮದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಿಗಿ ಬಂದೋಬಸ್ತ್:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತಿದ್ದು, ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದ ಜನತೆಗೆ ಇಂದು ಶುಭ ದಿನ. ದೇಶದ ಜನತೆಗೆ ಶುಭಾಶಯ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ ರಾಜ್ಯದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದರು.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ದಸರಾ-ನವರಾತ್ರಿ

ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು

ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ಮೈಸೂರು ದಸರಾ ಸಂಭ್ರಮದ ...

ಮೈಸೂರು ದಸರಾ; ವಾಟರ್‌ ಜೆಟ್‌ನಿಂದ ಕೆರೆಗೆ ಬಿದ್ದ ಸಚಿವ!

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಇಲ್ಲಿನ ವರುಣಾ ಕೆರೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ಅವರು ...

ನಾಡಹಬ್ಬ ದಸರಾದಲ್ಲಿ ಶೋಭಾ ಕರಂದ್ಲಾಜೆ-ರಾಮದಾಸ್ ಜಟಾಪಟಿ

ಮೈಸೂರು: ಅರಮನೆ ನಗರಿಯಲ್ಲಿನ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಯ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ...

ನಾಡಹಬ್ಬಕ್ಕೆ ಚಾಲನೆ-ಸರ್ಕಾರ ದುಃಶ್ಯಾಸನ ಆಗ್ಬಾರ್ದು, ಶ್ರೀಕೃಷ್ಣನಾಗ್ಬೇಕು: ಪೇಜಾವರಶ್ರೀ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಬೇಕಾದ ...

Widgets Magazine Widgets Magazine