ರಾಹುಲ್ ಗಾಂಧಿ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಕೋಗಿಲೆಯಂತೆ; ಮಮತಾ ಲೇವಡಿ

ನಕ್ಸಲ್‌ಬಾರಿ, ಪಶ್ಚಿಮ ಬಂಗಾಳ, ಬುಧವಾರ, 26 ಮಾರ್ಚ್ 2014 (17:35 IST)

PTI
ರಾಹುಲ್ ಗಾಂಧಿ ವರ್ಷದ ನಿರ್ದಿಷ್ಟ ಸಮಯದಲ್ಲಿ ಕಾಣಿಸಿಕೊಳ್ಳುವ ನುಡಿಗಟ್ಟಿನ ಕೋಗಿಲೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಹೆಸರನ್ನು ತೆಗೆದುಕೊಳ್ಳದೇ ಅವರ ಮೇಲೆ ತೀಕ್ಷ್ಣವಾದ ವಾಗ್ದಾಳಿಯನ್ನು ನಡೆಸಿರುವ ,ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ "ದಿಢೀರನೆ ನಾಯಕ" ನಾದ ಕಾಂಗ್ರೆಸ್ ಉಪಾಧ್ಯಕ್ಷನಿಗೆ ತನ್ನ ಕುರಿತ ಸತ್ಯವೇ ತಿಳಿದಿಲ್ಲ ಎಂದು ಮೂದಲಿಸಿದ್ದಾರೆ.

ದೆಹಲಿಯ ದಿಢೀರ ನಾಯಕರು ಪಶ್ಚಿಮಬಂಗಾಳಕ್ಕೆ ಬಹಳಷ್ಟು ಹಣವನ್ನು ಒದಗಿಸಿದ್ದೇನೆ ಎಂದು ಹೇಳುತ್ತಾರೆ. ನಿಮಗೆ ಹಣ ಸಂದಾಯವಾದ ಖಾತೆಗಳು ಯಾವುದೆಂದು ಗೊತ್ತೇ? ಯಾವ ಕೆಲಸ ನಡೆದಿದೆ ಎಂದು ನಿಮಗೆ ಗೊತ್ತೆ ?ಹಣ ಹೇಗೆ ಬಂತು, ಹೇಗೆ ಅದನ್ನು ಖರ್ಚು ಮಾಡಲಾಯಿತು ಮತ್ತು ಆ ಹಣ ಹೇಗೆ ಹಿಂತಿರುಗಿತು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ಎಂದು ಅವರು ನಕ್ಸಲ್‌ಬಾರಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದಾರೆ.

ಯೋಗ್ಯ ವ್ಯಕ್ತಿಗಳ ಹೆಸರುಗಳನ್ನು ಹೇಳಲು ಸಿದ್ದ. ಆದರೆ, ಯೋಗ್ಯರಲ್ಲದ ವ್ಯಕ್ತಿಗಳ ಹೆಸರುಗಳನ್ನು ಹೇಳಲು ನಾನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಅವರು ಬಡವರ ಮತ್ತು ಪೀಡಿತರ ಸಮಸ್ಯೆಗಳನ್ನು ಅರಿಯದ ಶ್ರೀಮಂತರ ಮತ್ತು ಜಮೀನ್ದಾರರ ಮಕ್ಕಳು ಎಂದ ಬ್ಯಾನರ್ಜಿ ನೀವು(ಕಾಂಗ್ರೆಸ್) ಕಳೆದ 66 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದೀರಿ ಎಂದು ಹೇಳಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...

Widgets Magazine