ನಾಮಿನೇಷನ್ ತಿರಸ್ಕೃತವಾಗುವುದರಿಂದ ಕೂದಲೆಳೆಯಲ್ಲಿ ಪಾರಾದ ಕ್ರಿಕೆಟಿಗ ಗೌತಮ್ ಗಂಭೀರ್

ನವದೆಹಲಿ, ಗುರುವಾರ, 25 ಏಪ್ರಿಲ್ 2019 (08:10 IST)

ನವದೆಹಲಿ: ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನಾಮಪತ್ರ ತಿರಸ್ಕೃತವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.


 
ಗಂಭೀರ್ ಸಲ್ಲಿಸಿದ್ದ ನಾಮಪತ್ರದಲ್ಲಿ ಲೋಪದೋಷಗಳಿವೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ ಈ ದೂರು ಇದೀಗ ಅಮಾನ್ಯಗೊಂಡಿದೆ.
 
ಗಂಭೀರ್ ಸಲ್ಲಿಸಿದ್ದ ಅಫಿಡವಿಟ್ ಪೈಕಿ ಮೊದಲನೆಯದ್ದರಲ್ಲಿ ದಿನಾಂಕ 18-4-2019 ಎಂದು ತೋರಿಸಿದ್ದರೆ ಎರಡನೆಯ ಅಫಿಡವಿಟ್ ನಲ್ಲಿ 19-4-2019 ಎಂದು ನಮೂದಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಗಂಭೀರ್ ಲಾಯರ್ ಜತೆ ಚರ್ಚಿಸಿದ ಬಳಿಕ ಇದು ನೋಟರಿಯ ಸೀರಿಯಲ್ ನಂಬರ್ ಎಂದು ತಿಳಿದುಬಂದಿದ್ದು, ನಾಮಪತ್ರ ಅಂಗೀಕಾರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಎಲೆಕ್ಷನ್ ಮರುದಿನ ಪ್ರಲ್ಹಾದ್ ಜೋಶಿ ಮಾಡಿದ್ದೇನು?

ಕಳೆದ ಒಂದು ತಿಂಗಳಿಂದ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಚುನಾವಣೆ ಮುಗಿಯುತ್ತಿದ್ದಂತೆ ...

news

ಮೈತ್ರಿ ಅಭ್ಯರ್ಥಿ ಡೇರಿಗೆ ಹೋಗಿ ಮೇವು ಹಾಕಿದ್ಯಾಕೆ?

ಎದುರಾಳಿಯನ್ನು ಸೋಲಿಸಲೇಬೇಕು ಎಂದು ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ತಿರುಗಾಡಿ ಪ್ರಚಾರ ನಡೆಸಿ, ...

news

ಸ್ಟ್ರಾಂಗ್ ಅಭ್ಯರ್ಥಿಗಳ ಭವಿಷ್ಯ ರೂಮ್ ನಲ್ಲಿ ಭದ್ರ

ಲೋಕಸಭಾ ಎರಡನೇ ಹಂತದ ಕ್ಷೇತ್ರಗಳಿಗೆ ನಿನ್ನೆಯಷ್ಟೇ ಮತದಾನ ನಡೆದಿದ್ದು, ಅಭ್ಯರ್ಥಿಗಳ ಹಣೆಬರಹ ಸ್ಟ್ರಾಂಗ್ ...

news

ಲೋಕಸಭೆ ಚುನಾವಣೆ 2019: ಬಿಜೆಪಿ ಟಿಕೆಟ್ ಪಡೆದ ಸೆಲೆಬ್ರಿಟಿಗಳು

ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಿಂದಿನಂತೇ ಕೆಲವು ಸೆಲೆಬ್ರಿಟಿಗಳು ಕಾಂಗ್ರೆಸ್, ಬಿಜೆಪಿ ...

Widgets Magazine