ಬಿಜೆಪಿ ನಾಯಕರಿಗೆ ಸೋಲಿನ ಭೀತಿ?

ಬೆಂಗಳೂರು, ಮಂಗಳವಾರ, 16 ಏಪ್ರಿಲ್ 2019 (15:21 IST)

ಬಿಜೆಪಿ ನಾಯಕರು ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನೇ ನೀಡುತ್ತಿದ್ದಾರೆ. ಇದು ಬಿಜೆಪಿಯವರ ಹತಾಶೆ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ದೂರಿದೆ.

ಶಾಸಕ ಸಿ.ಟಿ.ರವಿ ಮಾತನಾಡಿರುವ ವೇಳೆ ಮೋದಿ ಬೆಂಬಲಿಸದೇ ಇರೋರು ತಾಯಿಗಂಡರು ಅಂದಿದ್ದಾರೆ. ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಅಂತ ಕಾಂಗ್ರೆಸ್ ಮುಖಂಡಪ್ರಕಾಶ್ ರಾಥೋಡ್ ಟೀಕೆ ಮಾಡಿದ್ದಾರೆ.

ರಾಷ್ಟ್ರ ಬಿಜೆಪಿ ನಾಯಕರು ಸಹ ಅವಹೇಳನಕಾರಿ ಹೇಳಿಕೆ ನೀಡುತ್ತಿರೋದು ಅವರ ಹತಾಶ ಮನೋಭಾವನೆಗೆ ಸಾಕ್ಷಿ.
ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಎಐಸಿಸಿ ಬಿಡುಗಡೆಗೊಳಿಸಿದ ಜನಪರ ಪ್ರಣಾಳಿಕೆ ಬಗ್ಗೆ ಇಲ್ಲಸಲ್ಲದ ಹೇಳಿಕೆ‌ ನೀಡುತ್ತಿದ್ದಾರೆ.

ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಬರಿ ಅವಹೇಳನಕಾರಿ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ರಿಜ್ವಾನ್ ಬೆಂಬಲಿಗರಿಂದ ಫೇಕ್ ಐಡಿ ಕಾರ್ಡ್?

15 ವರ್ಷಗಳಿಂದ ಮತ ಹಾಕದೇ ಇರುವವರ ಫೇಕ್ ಓಟರ್ಸ್ ಐ.ಟಿ ಕ್ರಿಯೇಟ್ ಮಾಡ್ತಿದ್ದಾರೆಂಬ ಅನುಮಾನ ಮೂಡಿದ ...

news

ಲಿಂಗಾಯತ ವೀರಶೈವ ಧರ್ಮ ವಿಭಜನೆ ರಾಜಕೀಯ ಲಾಭಕ್ಕೆ ಎಂದ ಸಂಸದ

ಲಿಂಗಾಯತ ವೀರಶೈವ ಧರ್ಮ ವಿಭಜನೆ ವಿಷಯ ರಾಜಕೀಯ ಲಾಭಕ್ಕಾಗಿ ಅನ್ನೋದು ಬಯಲಾಗಿದೆ. ಜನತೆಗೆ ಒಳಿತು ಮಾಡುವ ...

news

ಕುಮಾರಸ್ವಾಮಿ ಅಳುಮಂಜಿ ಅನ್ನೋದು ಮತ್ತೆ ಸಾಬೀತಾಗಿದೆ- ಜಗದೀಶ್ ಶೆಟ್ಟರ್ ವ್ಯಂಗ್ಯ

ಹುಬ್ಬಳ್ಳಿ : ಮತ್ತೆ ಸಿಎಂ ಕುಮಾರಸ್ವಾಮಿ ಕಣ್ಣೀರಿನ ಧಾರೆ ಹರಿಸಿದಕ್ಕೆ ದೇವೇಗೌಡರು ಮತ್ತು ಜೆಡಿಎಸ್ ...

news

ದೇಶದ ಅತೀ ಶ್ರೀಮಂತ ಎನಿಸಿಕೊಂಡ ರಾಜಕೀಯ ಪಕ್ಷ ಯಾವುದು ಗೊತ್ತಾ?

ನವದೆಹಲಿ : ದೇಶದ ಅತೀ ಶ್ರೀಮಂತ ಪಕ್ಷ ಯಾವುದು ಎಂಬ ಕುತೂಹಲ ಹಲವರಲ್ಲಿದ್ದು, ಇದೀಗ ಈ ಮಾಹಿತಿ ...

Widgets Magazine