ಮೋದಿ ಸರ್ವಾಧಿಕಾರಿನಾ? ಎಂದು ರಮ್ಯಾ ಜೇಟ್ಲಿಯನ್ನು ಪ್ರಶ್ನಿಸಿದ್ದೇಕೆ?

ನವದೆಹಲಿ, ಬುಧವಾರ, 15 ಮೇ 2019 (11:00 IST)

ನವದೆಹಲಿ : ಮಮತಾ ಬ್ಯಾನರ್ಜಿ ಪೋಟೋ ತಿರುಚಿದ ವಿವಾದದ ಕುರಿತು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ ಪ್ರತಿಕ್ರಿಯೆಗೆ ಇದೀಗ ಕಾಂಗ್ರೆಸ್ ಮುಖಂಡೆ ರಮ್ಯಾ ತಿರುಗೇಟು ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋಟೊದ ಜೊತೆ ಎಡಿಟ್ ಮಾಡಿ ಜೈಲು ಸೇರಿದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಈಬಗ್ಗೆ ಟ್ವೀಟ್ ಮೂಲಕ  ಪ್ರತಿಕ್ರಿಯಿಸಿದ್ದ ಅರುಣ್ ಜೇಟ್ಲಿ ಅವರು, ಹಾಸ್ಯ, ಬುದ್ಧಿ, ಚುಚ್ಚುಮಾತು ಮುಕ್ತ ಸಮಾಜದಲ್ಲಿ ಉಳಿದುಕೊಂಡಿವೆ. ಅವುಗಳಿಗೆ ನಿರಂಕುಶಾಧಿಕಾರ ಇರುವಲ್ಲಿ ಯಾವುದೇ ಸ್ಥಾನವಿಲ್ಲ. ಸರ್ವಾಧಿಕಾರಿಗಳಿಗೆ ನಗುವುದು ಇಷ್ಟವಿರುವುದಿಲ್ಲ, ಬಂಗಾಳದಲ್ಲಿ ಈ ಪ್ರಕರಣವಾಗಿದೆ ಎಂದಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಜೇಟ್ಲಿ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದೇ ರೀತಿಯಲ್ಲಿ ಮೋದಿ ಪೋಟೋ ತಿರುಚಿದ ಆರೋಪ ಎದುರಿಸುತ್ತಿರುವ ನಾನು ಹೇಗೆ ಹೊರಬರಬೇಕು? ಮೋದಿ ಸರ್ವಾಧಿಕಾರಿ ಅಂತಾ ನೀವು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂಬ ಸಿಎಂ ಹೇಳಿಕೆಯಲ್ಲಿ ಕುತಂತ್ರವಿದೆ ಎಂದ ಬಿಜೆಪಿ ಶಾಸಕ

ಕಲಬುರಗಿ : ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂ ...

news

ನಾಮಪತ್ರ ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ; ಪ್ರಜ್ವಲ್ ಗೆ ಸಂಕಷ್ಟ

ಹಾಸನ : ನಾಮಪತ್ರ ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿ ...

news

ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ ಹೆಚ್.ಡಿ.ಕೆ ಕಾರಣ ಎಂದ ಕಾಂಗ್ರೆಸ್ ನ ಮಾಜಿ ಶಾಸಕ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ...

news

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದ ಕಮಲಹಾಸನ್ ನಾಲಿಗೆ ಕತ್ತರಿಸಿ- ರಾಜೇಂದ್ರ ಬಾಲಾಜಿ

ಚೆನ್ನೈ : ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದ ನಟ ಕಮಲ ಹಾಸನ್ ನಾಲಿಗೆ ಕತ್ತರಿಸಬೇಕು ಎಂದು ...

Widgets Magazine