ಬಿಜೆಪಿ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಖಾಕಿ ಪಡೆ

ಬೀದರ್, ಮಂಗಳವಾರ, 23 ಏಪ್ರಿಲ್ 2019 (16:38 IST)

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಸರಿಯಾಗಿಯೇ ಲಾಠಿ ರುಚಿ ತೋರಿಸಿರುವ ಘಟನೆ ನಡೆದಿದೆ.

ಮತಗಟ್ಟೆಯಲ್ಲಿ ಅನಗತ್ಯವಾಗಿ ತುಂಬಿಕೊಂಡು ಗೊಂದಲ ಹುಟ್ಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರು ಮುಖಾಮುಖಿಯಾಗಿ ಅನಿವಾರ್ಯವಾಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಔರಾದ್ ತಾಲೂಕಿ ಚಿಂತಾಕಿ ಮತಗಟ್ಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಗೊಂದಲ ಹುಟ್ಟಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಸ್ಥಳದಿಂದ ದೂರ ಹೊಗುವಂತೆ ಮನವಿ ಮಾಡಿಕೊಂಡರು.

ಆದ್ರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದೆ ತನ್ನ ವರ್ತನೆ ಮುಂದುವರೆಸಿ ದೂರದಿಂದ ನಿಂತು ಪೊಲೀಸರ ಮೇಲೆಯ ಕಲ್ಲು ಎಸೆದ ಜನರ ಮೇಲೆ ಪಿಎಸ್ ಐ ಬಾಸುಮಿಯ್ಯಾ ಸೇರಿದಂತೆ ಪೊಲೀಸರ ತಂಡ ಗುಂಪು ಚದುರಿಸಲು ಲಾಠಿ ರುಚಿ ತೋರಿಸಿದ್ದಾರೆ. ಆದ್ರೆ ಪೊಲೀಸರು ಅನಗತ್ಯವಾಗಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಬಿಜೆಪಿ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಖಾಕಿ ಪಡೆ

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಸರಿಯಾಗಿಯೇ ಲಾಠಿ ರುಚಿ ತೋರಿಸಿರುವ ಘಟನೆ ನಡೆದಿದೆ.

news

ಮದ್ವೆಗೆ ಹೆಣ್ಣು ಸಿಗ್ತಿಲ್ಲಾಂತ ಪ್ರತಿಭಟನೆ, ಮತದಾನ ಬಹಿಷ್ಕಾರ

ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಆರೋಪಿಸಿ ಹಾಗೂ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೂರಾರು ಜನರು ಮತದಾನ ...

news

ಐಡಿ ಕೇಳಿದ್ದಕ್ಕೆ ಗರಂ ಆದ ಬಿಜೆಪಿ ಅಭ್ಯರ್ಥಿ

ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸೋಕೆ ಹೋಗಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮತಗಟ್ಟೆ ...

news

ಜಾರಕಿಹೊಳಿ ಕುಟುಂಬದಲ್ಲಿ ಭಿನ್ನಮತ ಸ್ಫೋಟ?

ಸಚಿವ ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ. ಹೀಗಂತ ಅವರ ಸಹೋದರ ಹಾಗೂ ಮಾಜಿ ಸಚಿವ ರಮೇಶ್ ಆರೋಪಮಾಡಿದ್ದಾರೆ.