ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ

ವಾಶಿಂಗ್ಟನ್, ಗುರುವಾರ, 2 ಫೆಬ್ರವರಿ 2012 (15:49 IST)

Widgets Magazine

PTI
ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕುತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇವರು ತಮ್ಮ ಪ್ರಯೋಗವನ್ನು ಇಲಿಯ ಮಾದರಿಗಳಲ್ಲಿ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ.

ಅಮೇರಿಕಾದಲ್ಲಿ ಹತ್ತಿರ ಹತ್ತಿರ 12,000ದಷ್ಟು ಜನರು ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದು ಈ ವರ್ಷ ಸಾವಿನ ಸಂಖ್ಯೆಯು ಅರ್ಧ ಮಿಲಿಯನ್ ಅನ್ನು ದಾಟಿದೆ.

ಈ ರೋಗವು ದೇಹದ ಆರೋಗ್ಯವಂತ ಕೋಶಗಳ ಹೆಚ್ಚಿನ ಭಾಗವನ್ನು ಆಕ್ರಮಿಸಿದ್ದು, ಅವುಗಳನ್ನು ಹಾನಿಗೊಳಪಡಿಸುವ ಶಕ್ತಿಯನ್ನು ಇವುಗಳು ಪಡೆದುಕೊಂಡಿದೆ. "ಇದೊಂದು ನಾಟಕೀಯ ಪರಿಣಾಮವಾಗಿದೆ ಎಂದು ಕೊಲೆರಾಡೊ ಕ್ಯಾನ್ಸರ್ ಸಂಸ್ಥೆಯ ಸಂಶೋಧಕ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ.

ಕ್ಯಾನ್ಸರ್ ಕೋಶಗಳು ಹೆಚ್ಚು ವೇಗವಾಗಿ ಬೆಳೆಯುವ ಕೋಶಗಳಾಗಿವೆ. ಅದೂ ಅಲ್ಲದೆ, ಸಾಮಾನ್ಯವಾಗಿ ಶೀಘ್ರ ಬೆಳವಣಿಗೆಯ ಕೋಶಗಳಾಗಿದ್ದು, ಅವುಗಳು ಬೆಳೆಯಲಾರದ ಸ್ಥಿತಿಗೆ ಬಂದಾಗ ಅವುಗಳು ಸಾಯುತ್ತವೆ ಎಂದವರು ತಿಳಿಸಿದ್ದಾರೆ.

ದ್ರಾಕ್ಷಿ ಬೀಜದ ಸತ್ವವು ಅವು ಬೆಳೆಯಲಾಗದೆ ಇರುವಂತಹ ಸ್ಥಿತಿಯನ್ನು ಉಂಟುಮಾಡುವುದರಿಂದ ಅವುಗಳು ಬೆಳೆಯಲಾರವು.

ನಿರ್ದಿಷ್ಟವಾಗಿ, ದ್ರಾಕ್ಷಿ ಬೀಜದ ಸತ್ವವು ಕ್ಯಾನ್ಸರ್ ಕೋಶಗಳಾದ ಡಿಎನ್‌ಎಗೆ ಹಾನಿ ಉಂಟು ಮಾಡುತ್ತವೆ ಮತ್ತು ಅದು ಪುನಃ ಸರಿಯಾಗುವಂತಹ ದಾರಿಯನ್ನು ನಿಲ್ಲಿಸುತ್ತದೆ.

ಇದರ ಬಗೆಗಿನ ಪ್ರಯೋಗವನ್ನು ಮೊದಲು ಇಲಿಗಳ ಮೇಲೆ ಮಾಡಲಾಗಿತ್ತು ಅವುಗಳ ಮೇಲೂ ಇದು ಉತ್ತಮ ಪರಿಣಾಮವನ್ನು ಬೀರಿತ್ತು.

ದ್ರಾಕ್ಷಿ ಬೀಜದ ಸಾರವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾದರೂ ಆರೋಗ್ಯವಂತ ಕೋಶಗಳಿಗೆ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ.

ಕ್ಯಾನ್ಸರ್ ಕೋಶಗಳ ದಾರಿಯನ್ನು ನಾವು ಮುಚ್ಚುವುದರಿಂದ ಅವುಗಳ ಬೆಳವಣಿಗೆ ಕುಂಠಿತಗೊಳ್ಳುತ್ತವೆ ಆದರೆ ಆರೋಗ್ಯವಂತ ಕೋಶಗಳ ಬಗ್ಗೆ ಈ ರೀತಿಯ ನಂಬಿಕೆ ಸತ್ಯವಾಗಿರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

ಮಹಿಳೆಯರೇ, ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಿ, ಹೃದಯಬೇನೆಯಿಂದ ಮುಕ್ತರಾಗಿರಿ

ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ...

ವಿಶ್ವ ಕ್ಷಯರೋಗ ದಿನ : ಪ್ರತಿವರ್ಷ 10 ಲಕ್ಷ ಮಕ್ಕಳಿಗೆ ಟಿಬಿ ಆಗುತ್ತದೆ

ನ್ಯೂಯಾರ್ಕ್‌‌ : ಇಂದು ವಿಶ್ವ ಟಿಬಿ ದಿನವಾಗಿದೆ, ಇಡೀ ವಿಶ್ವ ಇಂದು ಈ ದಿನವನ್ನು ಆಚರಿಸುತ್ತಿದೆ ಮತ್ತು ...

ಬಿಸಿಲ ಆಘಾತ- ದೇಹ ಸಂರಕ್ಷಣೆ

ಬೇಸಿಗೆ ಬಂದೇ ಬಿಟ್ಟಿದೆ. ಸೂಕ್ಷ್ಮದೇಹ ಪ್ರವೃತ್ತಿಯವರು ಬಿಸಿಲಬೇಗೆಯನ್ನು ತಡಕೊಳ್ಳುವುದು ಕೊಂಚ ಕಷ್ಟ. ...

ಹೊಟ್ಟೆತಂಪಾಗಿಸುವ ಸೊಪ್ಪುಗಳು

ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ...

Widgets Magazine