ಸೆಕ್ಸ್ ಗೂ ಬೌದ್ಧಿಕ ಮಟ್ಟಕ್ಕೂ ಸಂಬಂಧವಿದೆಯಾ..? ಹೊಸ ಸಂಶೋಧನೆಯಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ಲಂಡನ್, ಶುಕ್ರವಾರ, 23 ಜೂನ್ 2017 (14:26 IST)

ಸೆಕ್ಸ್ ಪ್ರತಿಯೊಂದು ದಾಂಪತ್ಯದ ಪ್ರಮುಖ ಅಂಶಗಳಲ್ಲಿ ಒಂದು. ಲೈಂಗಿಕ ಸಂಬಂಧ ಹೆಣ್ಣಿ ಗಂಡಿನ ನಡುವಿನ ಸಾಂಸಾರಿಕ ಸಂಬಂಧವನ್ನ ಉತ್ತಮಗೊಳಿಸುತ್ತದೆ. ಮನಸ್ಸಿನ ರೀತಿಯೇ ದೇಹಗಳು ಬೆರೆತರೆ ದಾಂಪತ್ಯ ಪರಿಪೂರ್ಣವಾಗುತ್ತದೆ ಎಂಬ ಮಾತಿದೆ. ಇತ್ತೀಚಿನ ಹೊಸ ಅಧ್ಯಯನವೊಂದು ನಿಮ್ಮ ಸಂಬಂಧವನ್ನಷ್ಠೆ ಅಲ್ಲ, ನಿಮ್ಮ ಬುದ್ಧಿಮತ್ತೆಯನ್ನೂ ಉತ್ತಮಗೊಳಿಸುತ್ತೆ ಎನ್ನುತ್ತಿದೆ. ಅದರಲ್ಲೂ ಹಿರಿಯರಿಗೆ ಅತ್ಯಂತ ಪ್ರಮುಖವಾದದ್ದು ಎನ್ಮುತ್ತಿದೆ.


40-50ರ ನಂತರ ನಿತ್ಯ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮೆದುಳು ಕ್ರಿಯಾಶೀಲವಾಗಿರುತ್ತದೆಯಂತೆ. ಬ್ರಿಟನ್ನಿನ ಕವೆಂತ್ರಿ ವಿಶ್ವವಿದ್ಯಾಲಯದ ಮನೋವಿಜ್ಞಾನ ಸಂಶೋಧಕ ಡಾ. ಹ್ಯಾಯ್ಲೇ ಹೇಳುವ ಪ್ರಕಾರ, ಜೀವನದ ಕೊನೆಯ ದಿನಗಳಲ್ಲಿ ಲೈಂಗಿಕ ಕ್ರಿಯೆ ದೇಹದ ಅಂಗಾಂಗಗಳ ಕಾರ್ಯಚಟುವಟಿಕೆಗೆ ಬಹುಮುಖ್ಯವಾದದ್ದು, ಬುದ್ಧಿಮತ್ತೆ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎನ್ನುತ್ತಾರೆ.

ಆಕ್ಸ್`ಫರ್ಡ್ ಮತ್ತು ಕವೆಂಟ್ರಿ ವಿಶ್ವವಿದ್ಯಾಲಯದ ಸಂಸೋಧಕರು 50ರಿಂದ 80 ವರ್ದೊಳಗಿನ 73 ಮಂದಿಯನ್ನ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಇದರಲ್ಲಿ 28 ಪುರುಷರು, 45 ಮಹಿಳೆಯರು ಸೇರಿದ್ದಾರೆ. ಇದರಲ್ಲಿ 37 ಮಂದಿ ವಾರಕ್ಕೊಮ್ಮೆ, 26 ಮಂದಿ ತಿಂಗಳಿಗೊಮ್ಮೆ ಮತ್ತು 10 ಮಂದಿ ಲೈಂಗಿಕ ಕ್ರಿಯೆ ನಡೆಸುವುದೇ ಇಲ್ಲ ಎಂದಿದ್ದಾರೆ.

ಈ ಅಂಕಿ ಅಂಶದ ಆಧಾರದ ಮೇಲೆ ಮೆದುಳಿನ ಕಾರ್ಯವೈಖರಿ ಪರೀಕ್ಷಿಸಿರುವ ಸಂಶೋಧಕರು, ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವವರಲ್ಲಿ ಲೈಂಗಿಕ ಕ್ರಿಯೆ ನಡೆಸದೇ ಇರುವವರಿಗಿಂತ ಎರಡು ಪಟ್ಟು ಹೆಚ್ಚು ಕ್ರಿಯಾಶೀಲವಾಗಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ನವದೆಹಲಿ
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಗಿದ ತಕ್ಷಣ ನಿದ್ರೆ ಆವರಿಸಬೇಕೇ? ಈ ಟ್ರಿಕ್ ಪಾಲಿಸಿ

ಬೆಂಗಳೂರು: ಹೆಚ್ಚಿನವರಿಗೆ ನಿದ್ರೆಯದ್ದೇ ಸಮಸ್ಯೆ. ಮಲಗಿದ ತಕ್ಷಣ ನಿದ್ರೆ ಬರಲ್ಲ. ಏನೇನೋ ಯೋಚನೆ ಬಂದು ...

news

ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!

ಇಂದಿನ ಒತ್ತಡದ ಬದುಕಿನಲ್ಲಿ ಹಿಂದೆಂಗಿತಲೂ ಹೆಚ್ಚು ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಅದರಲ್ಲೂ ...

ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!

ಇಂದಿನ ಒತ್ತಡದ ಬದುಕಿನಲ್ಲಿ ಹಿಂದೆಂಗಿತಲೂ ಹೆಚ್ಚು ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಅದರಲ್ಲೂ ...

news

ಅಡುಗೆ ಮಾಡಿ ಉಳಿದ ಎಣ್ಣೆಯ ಮರು ಬಳಕೆ ಮಾಡಬಹುದೇ?

ಬೆಂಗಳೂರು: ನಮಗೆಲ್ಲರಿಗೂ ಒಂದು ಸಾಮಾನ್ಯ ಅಭ್ಯಾಸವಿದೆ. ಪೂರಿ ಅಥವಾ ಬಜ್ಜಿ ಮಾಡಿ ಉಳಿದ ಎಣ್ಣೆಯನ್ನು ಹಾಗೇ ...

Widgets Magazine