ವಿಭಿನ್ನವಾದ ಯೋಗ ಈ ಹ್ಯಾಂಗಿಂಗ್ ಯೋಗಾ

ನ್ಯೂಯಾರ್ಕ್, ಮಂಗಳವಾರ, 6 ಜೂನ್ 2017 (15:44 IST)

ನ್ಯೂಯಾರ್ಕ್:ಇತ್ತೀಚೆಗಷ್ಟೆ ನಾವು ಮೇಕೆ ಯೋಗದ ಬಗ್ಗೆ ನೋಡಿದ್ವಿ. ಈಗ ಇನ್ನೊಂದು ರೀತಿಯ ಯೋಗ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದೇ ’ಜೋಕಾಲಿ ಯೋಗ’ ಅಥವಾ’ ಹ್ಯಾಂಗಿಂಗ್ ಯೋಗ’. ಇದನ್ನು ಆಂಟಿ ಗ್ಯಾವಿಟಿ ಯೋಗಾ ಅಥವಾ ಏರಿಯಲ್ ಯೋಗಾ ಅಂತಲೂ ಕರೆಯುತ್ತಾರೆ. ಸದಾಕಾಲ ಹೊಸದನ್ನು ಯೋಚಿಸುವ ಅಮೆರಿಕನ್ನರು ಇಂತಹ ಒಂದು ವಿಭಿನ್ನವಾದ ಯೋಗಾಸನಗಳತ್ತ ಆಸಕ್ತಿ ತೋರುತ್ತಿದ್ದಾರೆ.
 
ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸುವುದೇ ಈ ಜೋಕಾಲಿ ಯೋಗ.  ಗಾಳಿಯಲ್ಲಿಯೇ ಬಗೆಬಗೆಯ ಯೋಗದ ಆಸನಗಳನ್ನು ಮಾಡಲು ಭಿನ್ನವಾದ ಪ್ರಯತ್ನ ಮಾಡುವುದು. ಸುಮಾರು 300ಕಿ. ಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ಲೀನ ಮಾಡುವ ಕ್ರಿಯೆ ಇದು.
 
1991ರಲ್ಲಿ ನ್ಯೂಯಾರ್ಕ್ ನಲ್ಲಿ ಈ ಹೊಸಬಗೆಯ ಯೋಗ ಆರಂಭವಾಯಿತು. ಇತ್ತೀಚಿನ ದಿನಗಳಲ್ಲಿ ಈ ಯೋಗಕ್ಕೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು, ಕ್ರಮೇಣ ಜರ್ಮನಿ, ಹಾಂಕಾಂಗ್‌, ಇಟಲಿ, ಆಸ್ಟೇಲಿಯ  ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿದೆ. ಅಷ್ಟೇ ಅಲ್ಲ ದೆಹಲಿ, ಮುಂಬಯಿ, ಚೆನೈ, ಬರೋಡಾ, ಕೊಲ್ಕತಾ, ಬೆಂಗಳೂರು ಹೀಗೆ ನಮ್ಮ ದೇಶದಲ್ಲಿ ಕೂಡ ಈ ಹ್ಯಾಂಗಿಂಗ್ ಯೋಗ ತನ್ನತ್ತ ಜರನ್ನು ಸೆಳೆಯುತ್ತಿದೆ. ಹಾಗಾಗಿ ಹೊಸಬಗೆಯದನ್ನು ಪ್ರಯತ್ನಿಸಬೇಕೆಂದರೆ ನೀವೂ ಕೂಡ ಈ ಜೋಕಾಲಿ ಯೋಗವನ್ನು ಮಾಡಬಹು.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯರು ದಯಮಾಡಿ ಇಲ್ಲಿ ಸ್ವಲ್ಪ ಕೇಳಿ..!!

ಬೆಂಗಳೂರು: ಗರ್ಭಿಣಿ ಮಹಿಳೆಯರೆಂದರೆ ತಲೆಗೊಂದು ಸಲಹೆ ಕೊಡುವವರು ಸಾವಿರಾರು ಮಂದಿ ಇರುತ್ತಾರೆ. ಹೀಗಿರುವಾಗ ...

news

ಕೊಲೆಸ್ಟ್ರಾಲ್ ಸಮಸ್ಯೆನಾ..? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ.

ನಾವು ಸೇವಿಸುವ ಆಹಾರದ ಕ್ರಮದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ಕೊಲೆಸ್ಟ್ರಾಲ್ ಸಮಸ್ಯೆಯನ್ನು ...

news

ಲವ್ ಲೈಫ್ ಚೆನ್ನಾಗಿರಬೇಕೆಂದರೆ ಈ ಟಿಪ್ಸ್ ಪಾಲಿಸಿ!

ಬೆಂಗಳೂರು: ಯೌವನದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲು. ಹೆಚ್ಚು ಪ್ರಬುದ್ಧತೆಯೂ ಇಲ್ಲದ, ...

news

ಮಧುಮೇಹಿಗಳು ಮಾವಿನ ಹಣ್ಣು ಸೇವಿಸಬಾರದೇ?

ಬೆಂಗಳೂರು: ಮಾವಿನ ಹಣ್ಣನ್ನು ಇಷ್ಟಪಡದವರು ಯಾರು? ಎಲ್ಲರಿಗೂ ಪ್ರಿಯವಾದ ಹಣ್ಣಿದು. ಆದರೆ ಸಕ್ಕರೆ ಕಾಯಿಲೆ ...

Widgets Magazine