ದೇಹ ಭಾರವನ್ನು ನಿಯಂತ್ರಿಸಲು ಇಲ್ಲಿದೆ ಸರಳ ಪರಿಹಾರ

ಬೆಂಗಳೂರು, ಭಾನುವಾರ, 26 ನವೆಂಬರ್ 2017 (18:08 IST)

ಪ್ರೊಟೀನ್ ಅಂಶಗಳು, ಲ್ಯಾಕ್ಟೋಸ್ ಸಕ್ಕರೆ ಮತ್ತು ತನ್ನ ಸಾಂದ್ರತೆಯಿಂದಾಗಿ ಕೆನೆರಹಿತ ಹಾಲು (ಸ್ಕಿಮ್ಡ್ ಹಾಲು) ಸೇವನೆಯಿಂದ ಹೊಟ್ಟೆ ತುಂಬಿದ ಸಂತೃಪ್ತ ಭಾವನೆಯಿಂದಿರುವುದು ಸಾಧ್ಯ ಮತ್ತು ಇದು ಕಡಿಮೆ ಕ್ಯಾಲೊರಿ ಸೇವನೆಗೆ ಪೂರಕವಾಗುತ್ತದೆ ಎನ್ನುತ್ತದೆ ಸಂಶೋಧನಾ ವರದಿ.
 
ಹಣ್ಣಿನ ರಸಕ್ಕೆ ಹೋಲಿಸಿದರೆ, ಬೆಳಗಿನ ಜಾವ ಕೊಬ್ಬು ಇಲ್ಲದ ಹಾಲು ಸೇವನೆಯು ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ ಮತ್ತು ಮುಂದಿನ ಆಹಾರ ಸೇವನೆ ಸಂದರ್ಭ ಕಡಿಮೆ ಕ್ಯಾಲೊರಿ ಸೇವನೆಗೆ ಕಾರಣವಾಗುತ್ತದೆ. ಹಾಲು ಕುಡಿದವರು ಸುಮಾರು 50ರಷ್ಟು ಕ್ಯಾಲೊರಿ (ಶೇ.9ರಷ್ಟು ಕಡಿಮೆ ಆಹಾರ) ಕಡಿಮೆ ಸೇವಿಸುತ್ತಾರೆ ಎಂದಿದ್ದಾರೆ ಸಂಶೋಧಕರು.
 
34 ಮಂದಿ ಅಧಿಕ ದೇಹತೂಕದ ಆದರೆ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಈ ಅಧ್ಯಯನಕ್ಕಾಗಿ ನಡೆದ ಎರಡು ಸೆಶನ್‌ಗಳಲ್ಲಿ ಭಾಗವಹಿಸಿದ್ದರು. ಒಂದು ಸೆಶನ್‌ನಲ್ಲಿ ಅವರಿಗೆಲ್ಲಾ ಸುಮಾರು 20 ಔನ್ಸ್‌ನಷ್ಟು ಕೆನೆ ರಹಿತ ಹಾಲು ನೀಡಲಾಗಿದ್ದರೆ, ಮತ್ತೊಂದು ಸೆಶನ್‌ನಲ್ಲಿ ಅಷ್ಟೇ ಪ್ರಮಾಣದಲ್ಲಿ ಹಣ್ಣಿನ ರಸ ನೀಡಲಾಗಿತ್ತು.
 
ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದೂಟದ ನಡುವಿನ ನಾಲ್ಕು ಗಂಟೆಗಳಲ್ಲಿ ಅವರೆಲ್ಲರಿಗೆ ಹೊಟ್ಟೆ ತುಂಬಿದ ಭಾವನೆಯಾಗುತ್ತಿದ್ದುದನ್ನು ಪರಿಶೀಲಿಸಲಾಗುತ್ತಿತ್ತು ಮತ್ತು ಭೋಜನ ವೇಳೆ ಹೊಟ್ಟೆ ತುಂಬುವಷ್ಟು ತಿನ್ನುವಂತೆ ಸೂಚಿಸಲಾಗಿತ್ತು.
 
ಹಾಲು ಕುಡಿದ ಮಂದಿಗೆ ಹೆಚ್ಚು ಹೊಟ್ಟೆ ತುಂಬಿದ ಭಾವನೆ ಇತ್ತು ಮತ್ತು ಇದರಿಂದಾಗಿ ಕಡಿಮೆ ಭೋಜನ ಸೇವಿಸಿದರು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
 
ಹಾಲಿನಲ್ಲಿರುವ ಪ್ರೊಟೀನ್ ಅಂಶ (ದಿನಕ್ಕೆ ಒಂದು ಕಪ್‌ಗೆ ಶೇ.16), ಲ್ಯಾಕ್ಟೋಸ್ (ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆ) ಅಥವಾ ಹಾಲಿನ ಸಾಂದ್ರತೆಯು ಹೊಟ್ಟೆ ತುಂಬಿದ ಭಾವನೆ ಉಂಟಾಗುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಸಂಶೋಧಕರು ಸಂದೇಹಿಸಿದ್ದಾರೆ.
 
ತೂಕ ಇಳಿಸಿಕೊಳ್ಳುವ ಯಾವುದೇ ಪ್ರಯತ್ನಗಳಲ್ಲಿ ಹೊಟ್ಟೆ ತುಂಬಿದ ಸಂತೃಪ್ತಿ ಭಾವನೆಯೇ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನು ಈಗಾಗಲೇ ಹಲವಾರು ಸಂಶೋಧನೆಗಳು ಹೇಳಿವೆ. ಈ ಸಂಶೋಧನಾ ವರದಿಗಳು 'ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌'ನ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ದೇಹ ಭಾರ ಹಾಲು ಹಾಲು ಉತ್ಪನ್ನ Milk Body Weight Milk Drinking

ಆರೋಗ್ಯ

news

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!

ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ...

news

ಗರ್ಭಿಣಿಯರು ಲೈಂಗಿಕಾಸಕ್ತಿ ಕಳೆದುಕೊಳ್ಳುವುದು ಏಕೆ?

ಬೆಂಗಳೂರು: ಗರ್ಭಿಣಿ ಮಹಿಳೆಗೆ ಲೈಂಗಿಕಾಸಕ್ತಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಇದಕ್ಕೆ ಕಾರಣವೇನು? ...

news

ಹುಡುಗರೇ ಹಣ ಉಳಿಸಬೇಕಾ…? (ವಿಡಿಯೋ ನೋಡಿ)

ಉಡುಪಿ: ಸಂಸಾರದ ತಾಪತ್ರಯಗಳಿಗೆ ಹೆಗಲುಕೊಟ್ಟು ದೂರದ ಊರಿನಲ್ಲಿ ಕೆಲಸ ಮಾಡಿಕೊಂಡು ಇರುವ ಹುಡುಗರಿಗೆ ಅಡುಗೆ ...

news

ಚಳಿಗಾಲಕ್ಕೆ ಬೆಚ್ಚಗಿನ ತಿನಿಸುಗಳು

ಬೆಂಗಳೂರು: ಚಳಿಗಾಲದಲ್ಲಿ ವಾತಾವರಣದಲ್ಲಿ ಕಡಿಮೆ ತಾಪಮಾನ ಇರುವುದರಿಂದ ಮಾನವ ಶರೀರದ ಮೇಲೆ ಪರಿಣಾಮ ...

Widgets Magazine