ಉತ್ತಮ ಆರೋಗ್ಯಕ್ಕೆ ರಾಮಬಾಣ ಸರ್ವಕಾಲಿಕ ತರಕಾರಿ ಸೊಪ್ಪುಗಳು

ಮಂಗಳವಾರ, 4 ಅಕ್ಟೋಬರ್ 2016 (14:39 IST)

Widgets Magazine

ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ಹವಾಮಾನ ಬದಲಾವಣೆಗಳಲ್ಲೂ ಶಾರೀರಿಕ ಅಸ್ವಾಸ್ಥ್ಯ ಅನುಭವಿಸುತ್ತಾರೆ. ಇವರಿಗೆ ಸೊಪ್ಪು ಚಿಗುರೆಲೆಗಳ ಮೇಲೋಗರ ಸಾಂತ್ವನ ನೀಡುತ್ತದೆ.
ವಿವಿಧ ಮರಗಳ ಚಿಗುರನ್ನು ಸಂಗ್ರಹಿಸಿ ನೀರು-ಚಟ್ನಿಯಾಗಿ ಅರೆದು ಬಳಸುವುದು ಬೇಸಗೆ ಕಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಉಪಯುಕ್ತ. ಪೇರಳೆ,ದಡಸೆ,ಮಾವು ಇತ್ಯಾದಿಗಳನ್ನು ತೆಂಗಿನ ತುರಿ, ಉಪ್ಪು ಇತ್ಯಾದಿಗಳನ್ನು ಸೇರಿಸಿ ಅರೆದು ತಯಾರಿಸುವ ಮೇಲೋಗರ ಅಧರಕ್ಕೂ ಉದರ್ಕೂ ಹಿತಕರವಾಗಿರುತ್ತದೆ.
 
ನೀರುಬೀಳುವ ಜವುಗು ನೆಲದಲ್ಲಿ ಸಮೃದ್ಧವಾಗಿ ಬೆಳೆಯುವ ಒಂದೆಲಗ (ತಿಮರೆ) ಗಿಡದ ಸಸ್ಯದ ಎಲೆ ಸಂಗ್ರಹಿಸಿ ನೀರು ಚಟ್ನಿಯಾಗಿ ಅರೆದು ಅನ್ನ , ದೋಸೆ ಇತ್ಯಾದಿಗಳಿಗೆ ಸೇರಿಕೆಯಾಗಿ ಸೇವಿಸುವುದು ಆಹಾರವೂ ಹೌದು ಔಷಧವೂ ಹೌದು. ಬೇಸಗೆಯಲ್ಲಿ ಒಂದೆಲಗ ನೀರು ಚೆಲ್ಲುವ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ.
ಇದೇ ರೀತಿ ಬಸಲೆ, ಹರಿವೆ ಇತ್ಯಾದಿ ಹಸುರೆಲೆಗಳೂ ಸೇರಿದಂತೆ ವಿವಿಧ ಸೊಪ್ಪು, ಚಿಗುರುಗಳನ್ನು ಸೇವಿಸುವುದರಿಂದ ಆಹಾರದ ರುಚಿಯೂ ಹೆಚ್ಚುತ್ತದೆ. ಆರೋಗ್ಯ ಸಂರಕ್ಷಣೆಯೂ ಆಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಗರೇಟ್ ಸೇದುವವರಿಗೊಂದು ಸಲಹೆ: ಈ ವಿಟಮಿನ್ ಸೇವಿಸಿ ಆರೋಗ್ಯ ನಿಮ್ಮದಾಗಿಸಿ

ಸಿಗರೇಟ್, ಬಿಡಿ, ಸಿಗಾರ್ ಚುಟ್ಟಾ ಯಾವುದೇ ಆಗಿರಲಿ ಅದರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ ಎನ್ನುವ ...

news

ಕೇವಲ 5 ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ

ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವಣೆಗೊಂಡಿರುವ ಉಪ್ಪಿನಾಂಶ ಮತ್ತು ಅನಗತ್ಯ ...

news

ನೈಸರ್ಗಿಕವಾಗಿ ಗುಂಗುರು ಕೂದಲನ್ನು ನೇರವಾಗಿಸಿ

ನಿಮ್ಮ ಮಗುವಿನದು ಗುಂಗುರು ಕೂದಲೇ? ಅದನ್ನು ನೇರವಾಗಿಸಲು ಹೆಣಗಾಡುತ್ತಿದ್ದೀರಾ? ಯಾವುದೇ ರಾಸಾಯನಿಕ ...

news

ಉತ್ತಮ ಆರೋಗ್ಯಕ್ಕೆ ರಾಮಬಾಣ ಬೀಟ್ರೂಟ್ ರಸ

ಪ್ರತಿದಿನ ಒಂದು ಬಟ್ಟಲು ಬೀಟ್ ರೂಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ...

Widgets Magazine Widgets Magazine