ನೈಸರ್ಗಿಕ ಬಾತ್ ರೂಮ್ ಕ್ಲೀನರ್

ಅತಿಥಾ 

ಬೆಂಗಳೂರು, ಮಂಗಳವಾರ, 2 ಜನವರಿ 2018 (15:53 IST)

ಮನೆಯನ್ನು ಸ್ವಚ್ಛಗೊಳಿಸುವ ಹೆಚ್ಚಿನ ಉತ್ಪನ್ನಗಳು ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಮತ್ತು ಅವುಗಳು ನಿಮ್ಮ ಮೇಲೆ ಮತ್ತು ಪರಿಸರದ ಮೇಲೆ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಹಲವು ಸುರಕ್ಷಿತ, ನೈಸರ್ಗಿಕ ಸ್ವಚ್ಛಗೊಳಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ,

ಅವುಗಳು ಕೇವಲ ಪರಿಣಾಮಕಾರಿ ಆಗಿರುತ್ತವೆ ಮತ್ತು ಅವುಗಳು ಹಾನಿಕಾರಕವಾಗಿರುವುದಿಲ್ಲ. ಹಾಗಾಗಿ ನೀವು ಹಣವನ್ನು ಉಳಿಸಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿ ಇಡಲು ಬಯಸಿದರೆ, ನೀವು ಮನೆಯಲ್ಲಿಯೇ ಮಾಡಬಹುದಾದ ಆರು ಕ್ಲೀನರ್‌ಗಳು ಇಲ್ಲಿವೆ.
 
1. ಬಾತ್ ರೂಮ್ ಕ್ಲೀನರ್
 
ಬೇಕಾಗುವ ಪದಾರ್ಥಗಳು-
 
½ ಕಪ್ ಅಡಿಗೆ ಸೋಡಾ
ಅಗತ್ಯವಿರುವಷ್ಟು ಲಿಕ್ವಿಡ್ ಡಿಟರ್ಜೆಂಟ್
ಗ್ಲಿಸರಿನ್ (ಐಚ್ಛಿಕ)
 
ವಿಧಾನ-
 
- ಅಡಿಗೆ ಸೋಡಾಗೆ  ಲಿಕ್ವಿಡ್ ಡಿಟರ್ಜೆಂಟ್ ಅನ್ನು ಸೇರಿಸಿ ದಪ್ಪವಾಗಿ ಮತ್ತು ಅದರ ನೊರೆ ಕಡಿಮೆಯಾಗುವ ತನಕ ಮಿಶ್ರಣ ಮಾಡಿ.
- ಒಂದು ಸ್ಪಂಜ್ ಅಥವಾ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿಸಿ ನಿಮ್ಮ ನೆಲವನ್ನು ವರೆಸಿ
- ಈ ಮಿಶ್ರಣವನ್ನು ಗಾಳಿ ಆಡದ ಗಾಜಿನ ಜಾರ್‌ನಲ್ಲಿ ಶೇಖರಿಸಿಡಬಹುದು. ಇದು ಒಣಗುವುದನ್ನು ತಡೆಗಟ್ಟಲು  ½ ಟೀಸ್ಪೂನ್ ಗ್ಲಿಸರಿನ್ ಅನ್ನು ಸೇರಿಸಿ.
- ನಿಮ್ಮ ಟೈಲ್‌ಗಳು, ಸಿಂಕ್, ವಾಶ್‌ಬೆಸಿನ್ ಮತ್ತು ಬಾತ್ ಟಬ್‌ ಸ್ವಚ್ಛಗೊಳಿಸಲು ನೀವು ಈ ಕ್ಲೀನರ್ ಅನ್ನು ಬಳಸಬಹುದು.
 
2. ವಿಂಡೋ ಕ್ಲೀನರ್
 
ಬೇಕಾಗುವ ಪದಾರ್ಥಗಳು-
 
1 ಚಮಚ ಕೈ ತೊಳೆಯುವ ಸೋಪ್
3 ಚಮಚ ಬಿಳಿ ವಿನೆಗರ್
2 ಕಪ್ ನೀರು
ಸ್ಪ್ರೇ ಬಾಟಲ್
 
ವಿಧಾನ-
- ಎಲ್ಲವನ್ನೂ ಬಾಟಲಿಗೆ ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ
- ನಿಮ್ಮ ಕಿಟಕಿಯ ಗಾಜಿನ ಈ ಮಿಶ್ರಣವನ್ನು ಸಿಂಪಡಿಸಿ ಮತ್ತು ಮೈಕ್ರೊಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಿ.
 
 
3. ವಿನೆಗರ್ ಬಳಸಿ-
 
ಕಡಿಮೆ ಸಮಯದಲ್ಲಿ ಬಹು ಬೇಗ ಸ್ವಚ್ಛಗೊಳಿಸಲು ವಿನೆಗರ್ ಬಹಳ ಉಪಯುಕ್ತವಾದದ್ದು. ನೆಲದ ಕಲೆಗಳು, ಅಂಟು, ಗೋಡೆಯ ಮೇಲಿರುವ ಕಲೆಯನ್ನು ತೆಗೆಯಲು ಬಹಳ ಸಮಯ ಬೇಕಾಗುವುದು. ನೀವು ಸ್ವಚ್ಛಮಾಡುವ ನೀರಿಗೆ ಬಿಳಿ ವಿನೆಗರ್ ಬಳಸಿಕೊಂಡರೆ ಬಹು ಬೇಗ ಸ್ವಚ್ಛಗೊಳಿಸಬಹುದು. ಆಗ ನೀವು ಕಡಿಮೆ ಸಮಯದಲ್ಲಿ ಸ್ವಚ್ಛ ಮಾಡಿದಂತಾಗುವುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಮೆರಿಕಾ ಕಂಡುಹಿಡಿದ ಈ ಡಿವೈಸ್ ಏನು ಮಾಡುತ್ತದೆ ಗೊತ್ತಾ

ಅಮೆರಿಕಾ : ಅತೀ ಶ್ರೀಮಂತ ದೇಶವೆಂದು ಹೆಸರುವಾಸಿಯಾಗಿರುವ ಅಮೆರಿಕಾ ಒಂದು ಹೊಸ ಉಪಕರಣವನ್ನು ...

news

ಅಸ್ತಮಾದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಹಾರ

ಬೆಂಗಳೂರು : ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದೆ. ಅಸ್ತಮಾ ಇರುವವರಿಗೆ ತುಂಬಾ ಆಯಾಸ, ...

news

ತಲೆಹೊಟ್ಟಿನ ನಿವಾರಣೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ತಲೆಹೊಟ್ಟು ಎಲ್ಲರಿಗೂ ಇರುವ ಒಂದು ಸಾಮಾನ್ಯ ಸಮಸ್ಯೆ. ಇದು ಧೂಳಿನಿಂದಾಗಿ, ಕೂದಲಿನಲ್ಲಿ ...

news

ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ...?

ಬೆಂಗಳೂರು : ಸಾಮಾನ್ಯವಾಗಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಸ್ತನಗಳ ನೋವು ...

Widgets Magazine