ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ.!

NewDelhi, ಶುಕ್ರವಾರ, 12 ಮೇ 2017 (06:57 IST)

ನವದೆಹಲಿ: ಇಂದಿನ ದುಬಾರಿ ಯುಗದಲ್ಲಿ ವೈದ್ಯಕೀಯ ವೆಚ್ಚ ಸಾಮಾನ್ಯರ ಕೈಗೆಟುಕುವಂತಿಲ್ಲ. ಆಸ್ಪತ್ರೆಗೆ ಹೋಗುವುದೆಂದರೆ ಭಯ ಬೀಳುವ ಪರಿಸ್ಥಿತಿ. ಅಂತಹದ್ದರಲ್ಲಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ. ಎಂದರೆ ನೀವು ನಂಬಲೇಬೇಕು.


 
ಮುಂಬೈ ಬಳಿಯ ಕುರ್ಲಾ  ಎಂಬಲ್ಲಿ ರೈಲ್ವೇ ನಿಲ್ದಾಣದ ಪಕ್ಕ ಈ ಅಗ್ಗದ ಆಸ್ಪತ್ರೆ ನಿರ್ಮಿಸಲಾಗಿದೆ. ಡಾ. ರಾಹುಲ್ ಘುಲೆ ಮತ್ತು ಡಾ. ಅಮೋಲ್ ಘುಲೆ ಎಂಬ ಸಹೋದರರ ಕನಸಿನ ಕೂಸು ಈ ಆಸ್ಪತ್ರೆ.
 
ರೈಲ್ವೇ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಮತ್ತು ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಸ್ಪತ್ರೆ ನಿರ್ಮಿಸಲಾಗಿದೆ. ಕಡಿಮೆ ವೆಚ್ಚದ ಆಸ್ಪತ್ರೆ ಎಂಬ ಮಾತ್ರಕ್ಕೆ ಇಲ್ಲಿ ವೈದ್ಯರ ಕೊರತೆಯಿಲ್ಲ.
 
ನುರಿತ ತಜ್ಞ ವೈದ್ಯರು ದಿನ ಪೂರ್ತಿ ರೋಗಿಗಳ ಸೇವೆಗೆ ಸಿದ್ಧರಾಗಿರುತ್ತಾರೆ. ಮೊದಲ ದಿನವೇ ಈ ಆಸ್ಪತ್ರೆಗೆ 60 ರೋಗಿಗಳು ಭೇಟಿಯಾಗಿದ್ದಾರಂತೆ. ಅದರಲ್ಲೂ ಹೆಚ್ಚಿನವರು ಹಿರಿಯ ನಾಗರಿಕರು. ಇದಕ್ಕಿಂತ ದೊಡ್ಡ ಸಮಾಜ ಸೇವೆ ಇದೆಯೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?

ಬೆಂಗಳೂರು: ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ...

news

ಫ್ರಿಡ್ಜ್ ಸುರಕ್ಷಿತವಾಗಿಡಲು ಕೆಲವು ಸಲಹೆಗಳು

ಬೆಂಗಳೂರು: ಮನೆಯಲ್ಲೊಂದು ಫ್ರಿಡ್ಜ್ ಇದ್ದರೆ ಉತ್ತಮ ಎಂದು ಮೂಲೆಯಲ್ಲಿ ತಂದಿಡುತ್ತೇವೆ. ಆದರೆ ಕೆಲವರು ಅದರ ...

news

ಈ ಹಣ್ಣುಗಳನ್ನು ಸೇವಿಸಿದ ಮೇಲೆ ನೀರು ಕುಡಿಯಲೇಬೇಡಿ!

ಬೆಂಗಳೂರು: ನಾವು ಸೇವಿಸುವ ಆಹಾರ ಯಾವ ರೀತಿ ಸೇವಿಸಬೇಕು ಎನ್ನುವುದಕ್ಕೊಂದು ರೀತಿ ನೀತಿಯಿದೆ. ಅದನ್ನು ...

news

ರಾತ್ರಿ ಊಟ ಮಾಡದೇ ಮಲಗಬಾರದು ಯಾಕೆ?

ಬೆಂಗಳೂರು: ಸಂಜೆ ಟೀ ಜತೆಗೆ ಹೊಟ್ಟೆ ತುಂಬಾ ತಿಂಡಿ ತಿಂದರೆ ಮತ್ತೆ ರಾತ್ರಿ ಊಟ ಬೇಡವೆನಿಸುತ್ತದೆ. ಹಾಗಂತ ...

Widgets Magazine