ಕಾಮಾತುರಾಣಾಂ ನ ಭಯಂ ನ ಲಜ್ಜಾಃ

ಗುರುವಾರ, 20 ಅಕ್ಟೋಬರ್ 2016 (17:15 IST)

Widgets Magazine

ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ ಅನ್ನುವಂತೆ ಮಣ್ಣಿಗಿಂತ ಹೆಣ್ಣಿಗಾಗಿ ಸತ್ತವರೇ ಹೆಚ್ಚು. ಇದಕ್ಕೆಲ್ಲ ಕಾರಣ ಕಾಮ. ಕಾಮದಲ್ಲಿ ಇದ್ದಾಗ ಮನುಷ್ಯನಿಗೆ ಭಯ ಮತ್ತು ಲಜ್ಜೆ ಇರುವುದಿಲ್ಲ. ಅದಕ್ಕೆ ಸಂಸ್ಕೃತದಲ್ಲಿ ಒಂದು ಮಾತಿದೆ ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಅಂತ.
ಮನುಷ್ಯ ಹುಟ್ಟಿದಾಗ ಮುಗ್ಧತೆಯಿಂದ ಇರುತ್ತಾನೆ, ಅದರೆ ಬೆಳೆಯುತ್ತ ಹೋದಂತೆ ಗಂಡಿಗೆ ಮುಖದ ಮೇಲೆ ಮೀಸೆ , ಹೆಣ್ಣಿಗೆ ಯೌವನ ಬಂದ ತಕ್ಷಣ ಇವರೀರ್ವರ ಮನಸ್ಸಿನಲ್ಲಿ ಕಾಮದ ಭಾವನೆಗಳು ಶುರುವಾಗುತ್ತವೆ. ಶುರುವಾಗುತ್ತೆ ನೋಡಿ ಇಲ್ಲಿಂದಲೇ ಹುಡುಗರು ಕೆಡೋದು. ಗೆಳೆಯ ಗೆಳೆತಿಯರು ಕೂಡಿಕೊಂಡು ಕಾಮದ ಭಾವನೆ ಶೇರ್ ಮಾಡಲು ಆರಂಭಿಸುತ್ತಾರೆ. ಆವಾಗ ಈ ತರಹದ ನನ್ನೊಳಗಿನ ಬೆಳವಣಿಗೆ ನನ್ನ ಎಲ್ಲ ಸಮ ವಯಸ್ಕರಲ್ಲು ಇರುವುದು ಗೊತ್ತಾಗುತ್ತದೆಯ ಗುರುವಿಲ್ಲದೇ ಕಲಿಯುವ ವಿಧ್ಯೆ ಅಂದರೆ ಇದೊಂದೆ ಅನ್ಸುತ್ತೆ . 
 
ಯೌವನಕ್ಕೆ ಕಾಲಿಟ್ಟಾಗ ಏನೇನು ಮಾಡುತ್ತಾರೆ ?
ಹುಡುಗ/ಹುಡುಗಿ ಹರೆಯಕ್ಕೆ ಕಾಲಿಟ್ಟಾಗ ವಿರೋಧಿ ಲಿಂಗದೆಡೆಗೆ ಆಕರ್ಷಿತರಾಗುತ್ತಾರೆ. ಹುಡುಗ ಹುಡುಗಿಯನ್ನು ಅಥವಾ ಹುಡುಗಿ ಹುಡುಗನನ್ನು ನೋಡೊಕೆ, ನಗೋಕೆ ಶುರು ಮಾಡುತ್ತಾರೆ. ಆಮೇಲೆ ಸ್ಮೈಲ್ ಕೋಡೊದು, ಹಿಂಗೆಲ್ಲ ಶುರು ಆಗುತ್ತೆ. ಈ ದೈಹಿಕ ಆಕರ್ಷಣೆಗೆ ಪ್ರೀತಿ ಎಂಬ ಹೆಸರನ್ನು ಕೋಟ್ಟು ಪ್ರೀತ್ಸೋಕೆ ಶುರು ಮಾಡುತ್ತಾರೆ. ಪ್ರೀತಿ ಪ್ರೇಮ ಪ್ರಣಯ ಹಿಂಗೆ ಕೆಲವರ ಜೀವನದಲಿ ಎಲ್ಲವು ನಡೆದು ಹೋಗುತ್ತೆ. 
 
ಪ್ರೀತಿಯಲ್ಲಿ ಕಿಸ್ ಕೊಡ್ತಾರೆ
ನಾವಿಬ್ಬರು ಪ್ರೆಮಿಗಳು ಪ್ರೀತಿಯಲ್ಲಿ ಕಿಸ್ಸ್ ಕೊಡೊದು ತಪ್ಪೇನಲ್ಲ ಅಂದುಕೊಂಡು ಪರಸ್ಪರ ಕಿಸ್ ಕೊಡ್ತಾರೆ. ಈ ಕಿಸ್ಸ್‌ನಲ್ಲಿ ಕಾಮದ ಅನುಭವವನ್ನು ಅನುಭವಿಸ್ತಾರೆ. ಪಾರ್ಕ್‌ಲ್ಲಿ , ಇಲ್ಲ ಹೋಟೆಲ್‌ಗಳಲ್ಲಿ ಹೋಗಿ ಕಿಸ್ಸ್ ಕೋಡುತ್ತಾರೆ. ಈ ಸಮಯದಲ್ಲಿ ಯಾರಾದರು ನೋಡಿದರೆ ಹೆಂಗೆ ಅನ್ನುವ ಭಯ ಇ ರುವುದೇ ಇಲ್ಲ. ಇದಕ್ಕೆ ಅಂತಾರಲ್ವಾ ಕಾಮತುರಣಂ ನ ಭಯಂ ಅಂತ. 
 
ಈ ಟಚ್ಚಲಿ ಏನೋ ಇದೆ....
 
ಕಿಸ್ಸ್ ಕೊಟ್ಟ ನಂತರ ಪರಸ್ಪರ ಕೈ ಮುಟ್ಟೋದು, ಮೈ ಮುಟ್ಟುವುದು ಮಾಡುತ್ತಾರೆ. ಸಮಯ ಸಿಕ್ಕಾಗ ದೇಹದ ಕೆಲವು ಮುಟ್ಟಬಾರದ ಜಾಗಕ್ಕೂ ಮುಟ್ಟಿ ಖುಷಿ ಅನುಭವಿಸುತ್ತಾರೆ. ಇದಕ್ಕೆ ಇವರು ಕೊಡುವ ಹೆಸರು ಪ್ರೀತಿ. ಕೈ ಕೈ ಹಿಡಿದು ರಸ್ತೆನಲ್ಲಿ ತಿರುಗುತ್ತಾರೆ, ಪಾರ್ಕಲ್ಲಿ ತೊಡೆಯ ಮೇಲೆ ಮಲಗುತ್ತಾರೆ. ಊರೆಲ್ಲ ಸುತ್ತುತ್ತಾರೆ. ಇಂತಹ ಸಮಯದಲ್ಲಿ ಸ್ಪರ್ಶದ ಸುಖ ಅನುಭವಿಸಿ ಮಜಾ ಮಾಡುತ್ತಾರೆ. 
 
 
ಪ್ರೀತಿಯ ನೆಪದಲ್ಲಿ ಕಾಮ ...
 
ಇದು ನಿಜಕ್ಕು ಸದ್ಯ, ಪ್ರೀತಿಸೋರಲ್ಲಿ ಶೇಕಡಾ 30-50 ರಷ್ಟು ಪ್ರೇಮಿಗಳು ಕಾಮದ ಸುಖ ಅನುಭವಿಸುತ್ತಾರೆ ಎಂದು ಖಾಸಗಿ ಟಿವಿ ಚಾನೆಲ್ ಒಂದು ವರದಿ ಮಾಡಿತ್ತು. ಪ್ರೀತಿಸ್ತಾರೆ, ಪ್ರೀತಿನಲ್ಲಿ ಕೈ ಕೈ ಹಿಡಿದು, ಕಿಸ್ಸ್ ಕೋಟ್ಟು, ಟಚ್ಚ್ ಮಾಡಿ, ಬಿಸಿಯಪ್ಪುಗೆ ಅನುಭವಿಸಿ, ಇದಾದ ನಂತರ ರೋಮ್ಯಾನ್ಸ್ ಮಾಡುತ್ತ ಸೆಕ್ಸ್ ಗೆ ಇಳಿದು ಬಿಡುತ್ತಾರೆ. ಇದಕ್ಕೂ ಇವರು ಕೋಡುವ ಹೆಸರು ಪ್ರೀತಿ. ನಾವು ಪ್ರೇಮಿಗಳು. 
 
ಪ್ರೇಮವನ್ನು ವ್ಯಕ್ತಪಡಿಸುವಾಗ ಇದ್ದ ಭಯ , ಕಾಮಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಾಗ ಇರೋದಿಲ್ಲ. ಅದಕ್ಕೆ ಅಂತಾರಲ್ಲ ಕಾಮಾತುರಾಣಾಂ ನ ಭಯಂ ನ ಲಜ್ಜಾಃ . ಈಗ ನೀವೇ ಹೇಳಿ, ಇದಕ್ಕೆ ಪ್ರೀತಿ ಅನ್ನಬೇಕೋ ಅಥವಾ ಕಾಮ ಅನ್ನಬೇಕೋ ?

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

ಕಾಮಾತುರಾಣಾಂ ನ ಭಯಂ ನ ಲಜ್ಜಾಃ

ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ...

news

ಓರಲ್ ಸೆಕ್ಸ್‌ನಿಂದ ದೇಹದ ಮೇಲೆ ಯಾವ ರೀತಿ ಪರಿಣಾಮವಾಗುತ್ತೆ ಗೊತ್ತಾ?

ಇದೇನಿದು ಓರಲ್ ಸೆಕ್ಸ್‌ನಿಂದ ಕ್ಯಾನ್ಸರ್ ಆಗುತ್ತಾ? ಆಶ್ಚರ್ಯ ಆಗುತ್ತಿದೆಯಾ ? ಹೌದು ಖಂಡಿತವಾಗಿಯು ...

news

ಸೌಂದರ್ಯ ವರ್ಧನೆಗೆ ಸರಳ ಉಪಾಯಗಳು

ತಾನು ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ? ಈ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಸೌಂದರ್ಯ ...

news

ಹಳದಿಗಟ್ಟಿದ ಹಲ್ಲು ಬೆಳ್ಳಗಾಗಿಸಬೇಕೆ ಈ ವಿಡಿಯೋ ನೋಡಿ

ಹಲ್ಲು ಹಳದಿಯಾಗಿದೆಯೇ. ಚಿಂತೆ ಬಿಡಿ . ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಇದಕ್ಕೆ ಮದ್ದು. ನಿಂಬೆ ಹಣ್ಣು ...

Widgets Magazine