ಬಟ್ಟೆಗಳ ಮೇಲೆ ಆಗಿರುವ ಬೆವರಿನ ಹಳದಿ ಕಲೆಗಳನ್ನು ತೆಗೆಯಲು ಹೀಗೆ ಮಾಡಿ ..!!

ಬೆಂಗಳೂರು, ಗುರುವಾರ, 19 ಜುಲೈ 2018 (17:24 IST)

ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಬರುವ ಬೆವರು ಕಲೆ ಬಟ್ಟೆಗಳಿಂದ ಅಷ್ಟು ಸರಿಸಾಗಿ ಹೋಗುವುದಿಲ್ಲ. ಅದರಲ್ಲೂ ಬಟ್ಟೆಯ ಮೇಲಿನ ಕಲೆ ಜೊತೆಗೆ ಬೇವರಿನ ವಾಸನೆಯಿಂದ ಬಹಳಷ್ಟು ಜನ ಮುಜುಗರಪಡುತ್ತಾರೆ. ಇಂತಹ ತೊಂದರೆಗಳಿಗೆ ಇಲ್ಲಿದೆ ಉಪಾಯ -
1. ಬೆವರ ಕಲೆಗಳನ್ನು ಹೊಂದಿರುವ ಬಟ್ಟೆಗಳನ್ನು ಅದೇ ದಿನ ಬಿಸಿ ತಣ್ಣಿರಿನಲ್ಲಿ ನೆನೆಸಿ ತೊಳೆಯಿರಿ.
 
2. ಸ್ನಾನದ ನಂತರ ಬಟ್ಟೆಗಳನ್ನು ಧರಿಸುವ ಮೊದಲು ಡಿಯೋಡರೆಂಟ್ / ರೋಲ್ ಆನ್ ಡಿಯೋಡರೆಂಟ್ ಅನ್ನು ಹಚ್ಚಿ ಅದನ್ನು ವಣಗಲು ಬಿಡಿ, ನಂತರ ಬಟ್ಟೆಗಳನ್ನು ಧರಿಸಿ.
 
3. ಕಲೆಗಳ ಮೇಲೆ ಟೂತ್‌ಪೇಸ್ಟ್ ಹಚ್ಚಿ 5 ನಿಮಿಷಗಳ ನಂತರ ಉಜ್ಜಿ ತೊಳೆಯಿರಿ.
 
4. 1/2 ಕಪ್ ನೀರಿಗೆ 1 ಕಪ್ ವಿನೆಗರ್ ಬೆರೆಸಿದ ಮಿಶ್ರಣವನ್ನು ಕಲೆಗಳಾಗಿರುವ ಜಾಗಕ್ಕೆ ಹಚ್ಚಿ 20-25 ನಿಮಿಷಗಳ ನಂತರ ಸೋಪ್ ಹಾಕಿ ತೊಳೆಯಿರಿ.
 
5. ಒಂದು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್‌ಗೆ 2 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಜೊತೆಗೆ ಮಿಶ್ರಣ ಮಾಡಿ, ಕಲೆಯ ಮೇಲೆ ಹಚ್ಚಿ ಅರ್ಧ ಗಂಟೆಯ ನಂತರ ಚೆನ್ನಾಗಿ ಉಜ್ಜಿ ತೊಳೆಯಿರಿ.
 
6. 1 ಲೀಟರ್ ಬಿಸಿ ನೀರಿಗೆ 5 ಚಮಚ ಉಪ್ಪನ್ನು ಸೇರಿಸಿ ಕಲೆಯಾಗಿರುವ ಬಟ್ಟೆಯನ್ನು 10 ನಿಮಿಷ ನೆನೆಸಿ, ಚೆನ್ನಾಗಿ ಉಜ್ಜಿ ತೊಳೆಯಿರಿ.
 
7. ಕಲೆಯಾದ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ, ಕಲೆಯಾದ ಭಾಗಕ್ಕೆ ಅಡುಗೆ ಸೋಡಾ ಹಾಕಿ ಹಲ್ಲು ಉಜ್ಜುವ ಬ್ರಷ್‌ನಿಂದ ನಿಧಾನಕ್ಕೆ ಉಜ್ಜಿ, ಸ್ವಚ್ಛ ನೀರಿನಿಂದ ಮತ್ತೊಮ್ಮೆ ತೊಳೆಯಿರಿ.
 
8. ನಿಂಬೆಹಣ್ಣಿನ ಹೋಳಿನಿಂದ ಕಲೆಯಾದ ಜಾಗದ ಮೇಲೆ ಉಜ್ಜಿ ಸ್ವಚ್ಛ ನೀರಿನಿಂದ ತೊಳೆಯಿರಿ.
 
9. ಅಮೋನಿಯಾ ಬೆರೆಸಿದ ನೀರನ್ನು ಕಲೆಯ ಮೇಲೆ ಹಾಕಿ 10 ನಿಮಿಷಗಳ ನಂತರ, ಚೆನ್ನಾಗಿ ಉಜ್ಜಿ ತೊಳೆಯಿರಿ.
 
10. ಬೆವರಿನ ಕಲೆಯ ಮೇಲೆ ಪುಡಿಯುಪ್ಪಿನಿಂದ ಉಜ್ಜಿ , ಅಮೇಲೆ ಬಿಸಿಲಲ್ಲಿ ಒಣಗಿದ ಮೇಲೆ ಬಟ್ಟೆಯನ್ನು ತೊಳೆಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೆಲಸದ ಒತ್ತಡದಿಂದ ಲೈಂಗಿಕ ಜೀವನ ಕಷ್ಟವಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ!

ಬೆಂಗಳೂರು: ಕಚೇರಿಯ ಕೆಲಸದ ಒತ್ತಡದ ನಡುವೆ ದಾಂಪತ್ಯ ಜೀವನವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೇ? ...

news

ನೈಲ್ ರಿಮೂವರ್ ಖಾಲಿಯಾಗಿದೆಯಾ ?ಮನೆಯಲ್ಲಿ ಸಿಗುವ ಇವುಗಳನ್ನು ಬಳಸಿ ನೈಲ್ ಪಾಲಿಶ್ ತೆಗೆಯಿರಿ

ಬೆಂಗಳೂರು : ಕೆಲವರು ಪ್ರತಿನಿತ್ಯ ಡ್ರೆಸ್ ಗೆ ತಕ್ಕಂತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆಗ ಪ್ರತಿದಿನ ಅವರು ...

news

ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಹೀಗೆ ಮಾಡಿ !

ಕಣ್ಣಿನ ಸುತ್ತ ಕಪ್ಪು ಕಲೆಗಳು ಅನೇಕ ಜನರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದರಿಂದ ನಿಮ್ಮ ಸೌಂದರ್ಯಕ್ಕೆ ...

news

ಆರೋಗ್ಯ ಸಂಜೀವಿನಿ ತುಳಿಸಿ ಬಗ್ಗೆ ನಿಮಗೆಷ್ಟು ಗೊತ್ತು...?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಸಣ್ಣ ಗಿಡಗಳೂ ಸಹ ದೊಡ್ಡ ...

Widgets Magazine