ಸಂಗಾತಿ ಜೊತೆ ಹಾಸಿಗೆಗೆ ತೆರಳುವ ಮುನ್ನ 5 ಆಹಾರಗಳು ನೆನಪಿರಲಿ

ಬೆಂಗಳೂರು, ಭಾನುವಾರ, 26 ಮಾರ್ಚ್ 2017 (20:35 IST)

Widgets Magazine

ಲೈಂಗಿಕ ತೃಪ್ತಿ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಪ್ರಮುಖವಾದದ್ದು, ಆದರೆ, ಹಲವರು ತಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದಾಗಿ ಲೈಂಗಿಕ ಜೀವನದಲ್ಲಿ ಸೋಲುತ್ತಾರೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಕೆಲ ಆಹಾರಗಳು ಲೈಂಗಿಕ ಕ್ರಿಯೆಯ ಶಕ್ತಿ ಮತ್ತು ಮಾನಸಿಕ ಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ. ಅದರಲ್ಲಿ ಪ್ರಮುಖವಾದ ಆಹಾರಗಳನ್ನ ಇಲ್ಲಿ ಪಟ್ಟಿಮಾಡಲಾಗಿದೆ..
 


1.ಬಾದಾಮಿ ಮತ್ತು ವಾಲ್ನಟ್: ಡ್ರೈ ಫ್ರೂಟ್`ಗಳಾದ ಬಾದಾಮಿ ಮತ್ತು ವಾಲ್ನಟ್`ಗಳಲ್ಲಿ ಸೆಕ್ಸ್ ಹಾರ್ಮೋನ್ ಉತ್ಪಾದನೆಗೆ ಬೇಕಾದ ಮೆಲಟೋನಿನ್ ಮತ್ತು ಗುಡ್ ಕೊಲೆಸ್ಟ್ರಾಲ್, ಪೋಷಕಾಂಶಗಳ ಪ್ರಮಾಣ ಹೆಚ್ಚಿರುತ್ತದೆ. ಬಾದಾಮಿ ಕೇವಲ ಸೆಕ್ಸ್ ಬೂಸ್ಟರ್ ಅಷ್ಟೇ ಅಲ್ಲ. ನಪುಂಸಕತೆ ಮತ್ತು ಗರ್ಭಪಾತವನ್ನೂ ತಡೆಯುತ್ತದೆ. ಅಧಿಕ ಪ್ರಮಾಣದ ವಿಟಮಿನ್ ಇ ಒದಗಿಸುತ್ತದೆ.
2. ಸಿಟ್ರಸ್ ಫ್ರೂಟ್ಸ್: ನಿಂಬೆ, ಕಿತ್ತಳೆ ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಫ್ರೂಟ್`ಗಳನ್ನ ಸೇವಿಸುವುದರಿಂದ ಹಾಸಿಗೆಯಲ್ಲಿ ನಿಮ್ಮ ಆತ್ಮಸ್ಥೈರ್ಯ ಮತ್ತು ಪರ್ಫಾಮೆನ್ಸ್ ಉತ್ತಮಗೊಳ್ಳುತ್ತದೆ.
3. ಬೆರ್ರಿಸ್: ಸ್ಟ್ರಾಬೆರಿಯಂತಹ ವಿಶಿಷ್ಟ ಹಣ್ಣುಗಳು ಹೇರಳವಾದ ಫೊಲೇಟ್ ಮತ್ತು ವಿಟಮಿನ್-ಸಿ ಒಳಗೊಂಡಿದ್ದು, ಇದು ಪುರುಷ ಮತ್ತು ಮಹಿಳೆಯರಿಬ್ಬರ ಹೃದಯ ಸಂಬಂದಿ ಸಮಸ್ಯೆ ನಿವಾರಿಸಿ. ಆಲೋಚನೆ, ಆತ್ಮಸ್ಥೈರ್ಯ ಮತ್ತು ಕ್ರಿಯೆಗಳನ್ನ ಉತ್ತಮಗೊಳಿಸುತ್ತವೆ.
4. ಡಾರ್ಕ್ ಚಾಕೋಲೆಟ್: ಡಾರ್ಕ್ ಚಾಕೋಲೆಟ್ ತಿನ್ನುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸಂತಸದ ಭಾವ ಮೂಡುತ್ತದೆ. ಮೆದುಳಿನಲ್ಲಿ ಸೆಕ್ಸ್`ಗೆ ಬೇಕಾದ ಕೆಮಿಕಲ್ ಉತ್ಪಾದನೆ ಹೆಚ್ಚಿಸುತ್ತದೆ
5. ಅವಕಾಡೋ ಅಥವಾ ಕಿವಿ ಫ್ರೂಟ್: ಈ ಗ್ರಹದಲ್ಲೇ ಅತ್ಯಂತ ಆರೋಗ್ಯಯುತ ಆಹಾರ ಕಿವಿ ಫ್ರೂಟ್ ಎಂಬ ಮಾತಿದೆ. ಮೆದುಳು, ಹೃದಯ ಮತ್ತು ರಕ್ತದ ನಾಳಗಳಿಗೆ ಸೂಪರ್ ಫೂಡ್ ಎಂಬ ಮಾತಿದೆ. ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಿಂದ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ. 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಪ್ಪಾಯ ಎಲೆ ತಿಂದರೆ ಏನಾಗುತ್ತದೆ ಗೊತ್ತಾ?!

ಬೆಂಗಳೂರು: ಪಪ್ಪಾಯ ಹಣ್ಣು ಇಷ್ಟಪಟ್ಟು ತಿನ್ನುತ್ತೇವೆ. ಅದೇ ರೀತಿ ಇದರ ಎಲೆಯಲ್ಲಿ ಆರೋಗ್ಯದ ನಿಧಿಯೇ ಇದೆ. ...

news

ಊಟವಾದ ತಕ್ಷಣ ನೀರು ಕುಡಿಯಬಾರದು ಯಾಕೆ ಗೊತ್ತಾ?

ಬೆಂಗಳೂರು: ಕೆಲವರಿಗೆ ಊಟದ ಜತೆಗೆ, ಇನ್ನು ಕೆಲವರಿಗೆ ಊಟವಾದ ತಕ್ಷಣವೇ ನೀರು ಕುಡಿಯುವ ಅಭ್ಯಾಸವಿರುತ್ತದೆ. ...

news

ಕೊತ್ತಂಬರಿ ಬೀಜದ ಕಷಾಯದಿಂದ ಏನೇನು ಆಗುತ್ತೆ ನೋಡಿ

ಬೆಂಗಳೂರು: ಮನೆಯಲ್ಲಿ ಹಿರಿಯರಿದ್ದರೆ, ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಅದು ಇದು ಕಷಾಯ ಮಾಡಿ ಕುಡಿಯಲು ...

news

ತೂಕ ಇಳಿಸಲು ಈ ಸೂತ್ರ ಮಾಡಿ ನೋಡಿ!

ಬೆಂಗಳೂರು: ತೂಕ ಇಳಿಸುವುದು ಹೇಗೆ ಎಂಬ ಚಿಂತೆಯೇ? ಅದಕ್ಕೆ ಬೆಳ್ಳಂ ಬೆಳಿಗ್ಗೆ ಈ ಕೆಲವು ಅಭ್ಯಾಸಗಳನ್ನು ...

Widgets Magazine Widgets Magazine