ಸ್ತ್ರೀಯರ ಆ ದಿನಗಳ ಹೊಸ ಸಂಗಾತಿ

ಬೆಂಗಳೂರು, ಭಾನುವಾರ, 16 ಜುಲೈ 2017 (15:17 IST)

Widgets Magazine

ಬೆಂಗಳೂರು:ಮಹಿಳೆಯರ ಆ ದಿನಗಳು ಬಂತೆಂದರೆ ಏನೋ ಕಿರಿಕಿರಿ, ಅಸಂತೋಷ. ಸಂಕಟ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ  ಮಹಿಳೆಯರ ಋತುಶ್ರಾವದ ದಿನಗಳಲ್ಲಿ ಜೊತೆಯಾಗಲು ಪರಿಸರ ಸ್ನೇಹಿಯಾದ ಶೀ-ಕಪ್ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
 
ಹೆಣ್ಣು ಋತುಶ್ರಾವದ ಸಂದರ್ಭದಲ್ಲಿ ಆಕೆ ಅನುಭವಿಸುವ ದೈಹಿಕ, ಮಾನಸಿಕ, ಭಾವನಾತ್ಮಕ ಕ್ಲೇಶಗಳ ಬಗ್ಗೆ, ನಿರುತ್ಸಾಹದ ಬಗ್ಗೆ ಅನುಭವಿಸುವ ಅಕೆಗೆ ಮಾತ್ರಗೊತ್ತು. ಇಂತಹ ಸಂಕಷ್ಟಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ್ ಶೀ-ಕಪ್ ಹೊಸ ಸಾಥಿಯಾಗಿ ಬಂದಿದೆ. ಇದು ಬಳಕೆಗೆ ಸುಲಭವಾದ, ಬಟ್ಟೆ, ಸ್ಯಾನಿಟರಿ ಪ್ಯಾಡ್, ಟ್ಯಾಂಪಾನ್‌ಗಳಿಗಿಂತಲೂ ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ ಅಲ್ಲದೇ ಪರಿಸರಸ್ನೇಹಿ ಋತುಸ್ರಾವದ ಸಂಗ್ರಹವಸ್ತುವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ.
 
ಮೆಡಿಕಲ್ ಗ್ರೇಡ್ ಸಿಲಿಕೋನ್‌ನಿಂದ ಮಾಡಿದ ಈ ಪುಟ್ಟ ಗುಲಾಬಿ ಅಥವಾ ತಿಳಿನೀಲಿ ಬಣ್ಣದ ಬಟ್ಟಲನ್ನು ಒಮ್ಮೆ ಕೊಂಡರೆ ಹಲವು ವರ್ಷಗಳವರೆಗೆ ಪುನರ್ಬಳಕೆ ಮಾಡಬಹುದು. ಅದು ಸ್ತ್ರೀಜನನಾಂಗ – ಯೋನಿಯ ಒಳಗೆ ಸೇರಿ ಗರ್ಭಕಂಠಕ್ಕೆ (cervix) ತಾಗಿಕೊಂಡು ನಿಶ್ಚಲ ನಿಲ್ಲುತ್ತದೆ. ಹಾಗಾಗಿ ಅದು ‘ಎಲ್ಲೋ’ ಕಳೆದುಹೋಗಬಹುದು ಎಂಬ ಚಿಂತೆ ಬೇಡ. ಸುಮಾರು 8 ಘಂಟೆಗಳ ಕಾಲ ಶೀ-ಕಪ್ ನಿಮ್ಮೊಳಗೆ, ತನ್ನ ಅಸ್ತಿತ್ವದ ಗುರುತೇ ಸಿಗದಷ್ಟು ಅನಾಯಾಸವಾಗಿ, ನಿಮ್ಮ ಋತುಸ್ರಾವದ ರಕ್ತವನ್ನು ಸಂಗ್ರಹಿಸಿಕೊಳ್ಳುತ್ತದೆ. ನಿಮಗೆ ಪ್ಯಾಡ್‌ಗಳನ್ನು 2-3 ತಾಸಿಗೊಮ್ಮೆ ಬದಲಿಸುವಂತೆ ಯಾವ ಒತ್ತಡವೂ ಇರುವುದಿಲ್ಲ.
 
ಪ್ರತಿ ತಿಂಗಳು ನಿಂತ ನಂತರ ಶೀ-ಕಪ್ ಬಿಸಿನೀರಿನಲ್ಲಿ 20 ನಿಮಿಷ ಇಡಿ.  ಅದನ್ನು ಮತ್ತೆ ಮುಂದಿನ ತಿಂಗಳವರೆಗೆ ಅದರ ಚೀಲದಲ್ಲಿ ವಿರಮಿಸಲು ಬಿಡಬಹುದು. ಋತುಮತಿಯಾದಾಗ ಉಂಟಾಗುವ ಎಷ್ಟೋ ಇರುಸುಮುರುಸುಗಳಿಂದ ಇದರಿಂದ ಮುಕ್ತಿ ಪಡೆಯಬಹುದು.  
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸೆಕ್ಸ್ ಲೈಫ್ ಎಂಜಾಯ್ ಮಾಡುವುದರಲ್ಲಿ ಮಹಿಳೆಯರು ಪುರುಷರಿಗಿಂತಲೂ ಮುಂದು!

ನವದೆಹಲಿ: ಮಹಿಳೆಯರು ನಾಚಿಕೆ ಸ್ವಭಾವದವರು. ಲೈಂಗಿಕ ವಿಚಾರಗಳಲ್ಲಿ ಹೆಚ್ಚು ಓಪನ್ ಅಪ್ ಆಗುವರರಲ್ಲ ಎಂದೇ ...

news

ಮಹಿಳೆಯರು ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡಲೇಬೇಕಂತೆ..! ಕಾರಣ ಇಲ್ಲಿದೆ ನೋಡಿ!

ಬೆಂಗಳೂರು: ಮಹಿಳೆ ತನಗೆ ವಯಸ್ಸಾಗಿದೆಯೆಂದು ತೋರಿಸಿಕೊಳ್ಳಲು ಬಯಸುವುದಿಲ್ಲ. ಎಷ್ಟೇ ವಯಸ್ಸಾದರೂ ಯಂಗ್ ಆಗಿ ...

news

ಬುಲೆಟ್ ನಿಂದ ರಕ್ಷಿಸಿಕೊಳ್ಳಲು ಸ್ತನಗಳ ಇಂಪ್ಲಾಂಟ್ ಸರ್ಜರಿ ಸಹಾಯಕವಂತೆ!

ನವದೆಹಲಿ: ಹೆಚ್ಚಿನ ಸಿನಿಮಾ ನಟಿಯರು ಆಕರ್ಷಕವಾಗಿ ಕಾಣಿಸಿಕೊಳ್ಳಲು ತಮ್ಮ ಸ್ತನದ ಗಾತ್ರ ಹೆಚ್ಚಿಸುವ ...

news

ಸ್ಪೆಷಲ್ ರೆಸಿಪಿ ವೆಜ್ ಸ್ಪ್ರಿಂಗ್ ರೋಲ್

ಯಾವಾಗ್ಲೂ ಒಂದೇ ಥರಹದ ತಿಂಡಿ ತಿಂದು ಬೇಜಾರಾಗುತ್ತೆ. ಏನಾದ್ರೂ ಸ್ಪೆಷಲ್ ಆಗಿ ಟ್ರೈ ಮಾಡೋಣ ಅನ್ಸತ್ತೆ. ...

Widgets Magazine