ಮುಖದಲ್ಲಿರುವ ಸಣ್ಣ ಕಲೆಗಳು ನಿರ್ಮೂಲನೆಗೆ ಸರಳ ವಿಧಾನ

ಅತಿಥಾ 

ಬೆಂಗಳೂರು, ಸೋಮವಾರ, 8 ಜನವರಿ 2018 (17:28 IST)

ಬ್ಲಾಕ್ ಹೆಡ್ ಚರ್ಮದ ಶತ್ರು ಅಂದರೆ ತಪ್ಪಾಗಲ್ಲ. ಮುಖ ಚೆಂದವಿದ್ದರೂ ಅಲ್ಲೆಲ್ಲೋ ಬ್ಲಾಕೆಡ್ ಕಾಣಿಸಿಕೊಂಡರೆ ಮುಜುಗರ ಉಂಟಾಗುತ್ತೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಮಾತ್ರ ಸಿಗೋದಿಲ್ಲ, ಸಿಕ್ಕಿದರೂ ಅದು ಇನ್ನೊಂದು ಸಮಸ್ಯೆ ಉಂಟು ಮಾಡಿರುತ್ತೆ. 

ಆದ್ದರಿಂದ ಬ್ಲಾಕ್ ಹೆಡ್‌ಗಳನ್ನು ನಿಮಿಷದಲ್ಲೇ ಇಲ್ಲದಂತೆ ಮಾಡಬಹುದು ಗೊತ್ತಾ? ಕೇವಲ ಲಿಂಬೆ ಚಮತ್ಕಾರದಿಂದ ಮುಖದಲ್ಲಿರುವ ಸಣ್ಣ ಕಲೆಗಳು ಇಲ್ಲದಂತೆಮಾಡಬಹುದು ರೋಮದ ಕೂಪಗಗಳು ಆಕ್ಸಿಡೇಶನ್‍ನಿಂದ ಕಪ್ಪಾಗುವುದಕ್ಕೆ ಬ್ಲಾಕ್‍ಹೆಡ್ಸ್ ಎಂದು ಹೇಳುತ್ತೇವೆ.
 
ಚರ್ಮದಲ್ಲಿ ಅಂಟಿ ಕೂತಿರುವ ಕೊಳೆ, ಆಹಾರ ಸರಿಯಿಲ್ಲದಿರುವುದು ಇದಕ್ಕೆ ಕಾರಣವೆಂದು ಹೇಳಬಹುದು. ಬ್ಲಾಹೆಡ್ಸ್‍ಗೆ ಪ್ರಕೃತಿ ದತ್ತ ಪರಿಹಾರ ಇದೆ.
 
ಒಂದು ಚಿಕ್ಕ ನಿಂಬೆಯನ್ನು ತೆಗೆದು ರಸವನ್ನು ಹಿಂಡಿರಿ. ಅದಕ್ಕೆ ಜೇನುತುಪ್ಪ ಬೆರೆಸಿರಿ. ಈ ಮಿಶ್ರಣ ಬ್ಲಾಕ್‍ಹೆಡ್ಸ್‍ನ ಮೇಲೆ ಹಚ್ಚಿರಿ. ಈ ಮಿಶ್ರಣ ಹಚ್ಚಿದ ಬಳಿಕ ಈ ಭಾಗಕ್ಕೆ ಬೆರಳುಗಳಿಂದ ಉಜ್ಜಿರಿ. ನಂತರ ಹತ್ತು ನಿಮಿಷ ಹಾಗೆ ಇರಲಿ. ನಂತರ ಮುಖ ತೊಳೆಯಿರಿ. ಬ್ಲಾಕ್ ಹೆಡ್ಸ್‍ನ ಬಣ್ಣ ಕಡಿಮೆ ಆಗಿರುವುದು ಗೊತ್ತಾಗುತ್ತದೆ.
 
ಈ ಸಲಹೆಯನ್ನು ಆಗಾಗ್ಗೆ ಪಾಲಿಸುತ್ತಾ ಬಂದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿಮ್ಮ ತ್ವಚೆ ನೈಸರ್ಗಿಕವಾಗಿ ಸುಂದರಗೊಳ್ಳುತ್ತದೆ ಮತ್ತು ಬ್ಲಾಕ್ ಹೆಡ್‌ಗಳು ಮಾಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತುರಿಕೆ ಹೋಗಲಾಡಿಸುವ ಮನೆಮದ್ದುಗಳು

ತ್ವಚೆಯ ತುರಿಕೆಗೆ ಕಾರಣವಾಗಬಹುದಾದ ಅ೦ಶಗಳಾವುವೆ೦ದರೆ ತ್ವಚೆಯ ಅಲರ್ಜಿ, ತ್ವಚೆಗೆ ಸ೦ಬ೦ಧಿಸಿದ೦ತೆ ಯಾವುದೇ ...

news

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಏನೆಲ್ಲಾ ಖಾಯಿಲೆ ಬರುತ್ತೆ ಗೊತ್ತಾ...?

ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿಯೇ ತಿನ್ನುತ್ತೇವೆ. ಅದನ್ನು ಬೇಯಿಸಿ ತಿಂದರೆ ...

news

ಗರ್ಭಿಣಿಯರಿಗೆ ಹೆರಿಗೆ ದಿನ ಹತ್ತಿರ ಬರುವಾಗ ಅವರಲ್ಲಾಗುವ ಬದಲಾವಣೆಗಳು ಏನು ಗೊತ್ತಾ...?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಆಗುವುದಕ್ಕಿಂತ ಹೆಚ್ಚು ಸಿಸೇರಿಯನ್ ...

news

ಬಾಯಿಂದ ದುರ್ವಾಸನೆ ಬರುತ್ತಿದೆಯೇ ಹಾಗಾದರೆ ಈ ವಿಧಾನ ಬಳಸಿ

ಬೆಂಗಳೂರು : ಕೆಲವರಿಗೆ ಬಾಯಿಂದ ದುರ್ವಾಸನೆ ಬರುತ್ತಿರುತ್ತದೆ. ಅಂತವರು ಮಾತನಾಡಿದಾಗ ಅವರ ಪಕ್ಕ ...

Widgets Magazine
Widgets Magazine